ಸ್ವಾಮಿ ವಿವೇಕಾನಂದರು ಹೇಳುವ ಹಾಗೆ ಭಾರತವು ಏನನ್ನು ನೀಡುತ್ತದೆಯೋ,ಅದನ್ನು ಮೊದಲು ಒಪ್ಪಿಕೋ ಆಮೇಲೆ ಪರೀಕ್ಷಿಸು.ಪಶ್ಚಿಮ ದೇಶಗಳು ಏನನ್ನು ನೀಡುತ್ತವೆಯೋ,ಅದನ್ನ ಮೊದಲು ಪರೀಕ್ಷಿಸು ಆಮೇಲೆ ಒಪ್ಪಿಕೋ. ಎನ್ನುವ ಮಾತು ಭಾರತದ ಜ್ಞಾನದ ಶ್ರೀಮಂತಿಕೆ ಹಾಗೂ ಈ ದೇಶದ ಪರೋಪಕಾರ ಭಾವವನ್ನು ಸಾಕ್ಷಿಕರಿಸುತ್ತದೆ.
ಜಗತ್ತಿಗೆ ಯೋಗವನ್ನ ನೀಡಿದ್ದು ಭಾರತ. ಯೋಗದ ಇತಿಹಾಸವನ್ನ ಹುಡುಕುತ್ತಾ ಹೋದರೆ ಸಾವಿರಾರು ವರ್ಷದಿಂದ ಆಚೆಗೆ ಹೋಗಿ ನಿಲ್ಲುತ್ತದೆ. ಯೋಗ ಬೆಳೆದು ಬಂದ ಕಾಲಾವಧಿಯನ್ನು ನಿರ್ದಿಷ್ಟವಾಗಿ ಹೇಳಲಾಗದು ಭಾರತದ ಋಷಿಮುನಿಗಳ ಪರಂಪರೆ ಯಾವಾಗ ಜನ್ಮ ತಾಳಿತೋ ಆಗಲೇ ಯೋಗದ ಉಗಮವು ಆಯಿತು. ಅನೇಕ ಮಹರ್ಷಿಗಳು ವಿಧ ವಿಧವಾದ ರೀತಿಯಲ್ಲಿ ಯೋಗವನ್ನ ಬೋಧಿಸಿದ್ದಾರೆ. ಅದರ ನಿಲೆಗಟ್ಟಿನಲ್ಲಿ ಕೃತಿಗಳು ರಚನೆಗೊಂಡಿವೆ. ಉದಾಹರಣೆಗೆ ಪತಂಜಲಿಯ ಯೋಗಶಾಸ್ತ್ರ, ಪತಂಜಲಿ ಮಹರ್ಷಿಗಳು ಯೋಗಕ್ಕೆ ಬಹುದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಇಂದಿಗೂ ಯೋಗ ಅಂದ ತಕ್ಷಣ ನೆನಪಿಗೆ ಬರುವ ಮೊದಲ ಹೆಸರೇ ಪತಂಜಲಿ ಮಹರ್ಷಿಗಳದ್ದು. ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಹೀಗೆ ಇನ್ನು ಅನೇಕ ರೀತಿಗಳಲ್ಲಿ ಯೋಗವನ್ನು ಅಧ್ಯಯನ ಮಾಡಬಹುದು. ಯೋಗದ ಪರಿಧಿಯ ವಿಶಾಲವಾದದ್ದು.ನಾವು ಆರೋಗ್ಯದ ದೃಷ್ಟಿಯಲ್ಲಿ ಯೋಗವನ್ನು ಗಮನಿಸಿದರೆ ಅದು ದೇಹಕ್ಕೆ ಸಂಜೀವಿನಿ ರೂಪದಲ್ಲಿ ಕೆಲಸ ಮಾಡುತ್ತದೆ. ಅದನ್ನು ದಿನನಿತ್ಯದ ಕಾಯಾ ವಾಚ ಮನಸಾ ಶ್ರದ್ಧೆಯಿಂದ ಮಾಡಿದರೆ ರೋಗಗಳು ನಮ್ಮ ಅಕ್ಕಪಕ್ಕವು ಸುಳಿಯಲಾರವು ಯೋಗದ ತಾಕತ್ತೆ ಹಂತದ್ದು.ಪ್ರತಿಯೊಂದು ರೋಗಕ್ಕೂ ಯೋಗದಲ್ಲಿ ಔಷಧವಿದೆ. ಯೋಗಾಭ್ಯಾಸವನ್ನು ನಾವುಗಳು ರೂಡಿಸಿಕೊಂಡು ಬಿಟ್ಟರೆ ದೈಹಿಕ ಸಮಸ್ಯೆಗಳ ಜೊತೆಗೂ ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ. ಲವಲವಿಕೆಯ ಬದುಕನ್ನ ಸಾಗಿಸಲು ಸಾಧ್ಯವಾಗುತ್ತದೆ.
ತಪಸ್ಸಿನ ಯೋಗ. ಭಾರತದಲ್ಲಿ ಅದರಲ್ಲೂ ಹಿಮಾಲಯದ ತಪ್ಪಲು ಪ್ರದೇಶಗಳಲ್ಲಿ ಋಷಿಮುನಿಗಳು ಇಂದಿಗೂ ತಪಸ್ಸಿನ ಯೋಗವನ್ನು ಆಚರಿಸುತ್ತಿದ್ದಾರೆ.ಕೆಲವು ವರ್ಷಗಳ ಹಿಂದೆ ಭಾರತೀಯ ಸೈನ್ಯ ಡ್ರೋನ್ ಕ್ಯಾಮರಾ ಕಣ್ಣಿಗೆ ಒಬ್ಬ ಮಹರ್ಷಿಗಳು -45 ಡಿಗ್ರಿ ಚಳಿಯಲ್ಲಿ ಮಂಜುಗಡ್ಡೆಯ ಮೇಲೆ ಕುಳಿತು ಆ ಮಂಜಿನ ನೀರಿನಿಂದಲೇ ಸ್ನಾನ ಮಾಡುತ್ತಿದ್ದರು. ಆ ಯೋಗಿ ಇದನ್ನ ಯಾರ ತೋರ್ಪಡಿಕೆಗಾಗಿಯೂ ಅಥವಾ ಪವಾಡವನ್ನ ಮಾಡಬೇಕೆಂದು ಮಾಡಿದವರಲ್ಲ ಏಕೆಂದರೆ ಅಲ್ಲಿ ಕ್ಯಾಮೆರಾ ಓಡಾಡುತ್ತಿರುವುದನ್ನು ನೋಡಿದವರಲ್ಲ ಅವರ ಜೊತೆಗೆ ಮತ್ಯಾರು ಇರಲಿಲ್ಲ ಅಂತಹ ಚಳಿಯಲ್ಲಿ ಅವರು ಬಟ್ಟೆಯನ್ನೇ ತೊಡದೆ ಹಾಗೆ ಇದ್ದರು. ಇನ್ನು ಅನೇಕರು ಯೋಗದ ಶಕ್ತಿಯಿಂದ ತಮ್ಮ ಆಯಸ್ಸನ್ನ ಹೆಚ್ಚಿಸಿಕೊಳ್ಳುತ್ತಾರೆ.ಒಂಟಿ ಕಾಲಿನ ಮೇಲೆ ನಿಂತು ಧ್ಯಾನ ಮಾಡುತ್ತಾರೆ.ಎಲೆಗಳನ್ನೇ ತಿಂದು ಅರಗಿಸಿಕೊಂಡು ನೂರಾರು ವರ್ಷಗಳ ಕಾಲ ಬದುಕಿದವರ ಬಗ್ಗೆಯೂ ನಾವು ಕೇಳಿ ತಿಳಿದುಕೊಂಡಿದ್ದೇವೆ.ಅಸಾಧ್ಯವಾದದ್ದನ್ನು ಸಾಧಿಸಬಹುದಾದದ್ದು ಯೋಗದಿಂದ ಮಾತ್ರ.
ವಿಶ್ವ ವ್ಯಾಪ್ತಿ ಯೋಗ. ಯೋಗವನ್ನ ಭಾರತ ನೀಡಿದರು ಇಂದು ಇದು ವಿಶ್ವ ವ್ಯಾಪ್ತಿಯಾಗಿ ಬೆಳೆದಿದೆ. ಎಲ್ಲ ದೇಶಗಳು ಇದರ ಮಹತ್ವವನ್ನ ಅರಿತಿವೆ.ಅನೇಕ ದೇಶಗಳಲ್ಲಿ ಯೋಗಕಾಗಿ ವಿಶ್ವವಿದ್ಯಾಲಯಗಳು ಸ್ಥಾಪನೆಗೊಳ್ಳುತ್ತಿವೆ. ವಿಶ್ವ ಸಂಸ್ಥೆ ಯೋಗಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ತನ್ನ ಅಧಿವೇಶನಗಳಲ್ಲಿ ಅದರ ಮಹತ್ವವನ್ನ ಸಾರುತ್ತಿದೆ.ಅಷ್ಟೇ ಏಕೆ 2015 ರಿಂದ ಜೂನ್ 21 ವಿಶ್ವ ಯೋಗ ದಿನವೆಂದು ಆಚರಿಸಲು ಪ್ರಾರಂಭಿಸಿತು. ಜೂನ್ 21 ವರುಷದಲ್ಲೇ ದೀರ್ಘ ಹಗಲಿರುವ ದಿನ ಅದಕ್ಕಾಗಿ ಆ ದಿನವನ್ನು ಯೋಗಾಚರಣೆಗಾಗಿ ಆಯ್ಕೆ ಮಾಡಿಕೊಂಡದ್ದು. ಕಳೆದ ವರ್ಷ 180 ಕ್ಕೂ ಹೆಚ್ಚು ದೇಶಗಳು ಯೋಗವನ್ನ ಸಾಮೂಹಿಕವಾಗಿ ಆಚರಿಸಿದವು. ಭಾರತ ಜಗತ್ತನ್ನ ಆಳುದೆಂದರೆ ಇದೆ ಅಲ್ಲವೇ. ನಾವು ಖಡ್ಗ ಹಿಡಿದು ಬೇರೆ ದೇಶದ ಮೇಲೆ ದಾಳಿ ಮಾಡಲು ಹೋಗಲಿಲ್ಲ ಬದಲಿಗೆ ನಮ್ಮ ಜ್ಞಾನದ ಶಕ್ತಿಯಿಂದ ಜಗತ್ತನ್ನೇ ಗೆದ್ದವರು ನಾವು.
ಯೋಗವು ಒಂದು ದಿನದ ಆಚರಣೆಯಾಗದೆ ದಿನನಿತ್ಯದ ಜೀವನದಲ್ಲಿ ಬೆರೆಯಬೇಕು.
-ಶ್ರೀ ರಾಮಕೃಷ್ಣ ದೇವರು. ಮರೇಗುದ್ದಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ