ರೆಡ್ ಕ್ರಾಸ್ ಸಂಸ್ಥೆ ಸ್ವತಂತ್ರ, ನಿಷ್ಪಕ್ಷಪಾತಿ: ಎಚ್‌.ಎಸ್‌. ಪ್ರತಿಮಾ ಹಾಸನ್

Upayuktha
0

ಹಾಸನ: ಹಾಸನದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಇಂದು (ಜೂ.20 ಮಂಗಳವಾರ) ರೆಡ್‌ಕ್ರಾಸ್  ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು. ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಸಾಹಿತಿ, ಶಿಕ್ಷಕಿ ಹಾಗೂ ಗಾಯಕಿ ಶ್ರೀಮತಿ ಎಚ್ಎಸ್ ಪ್ರತಿಮಾ ಹಾಸನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ರೆಡ್‌ಕ್ರಾಸ್‌ ಬಗ್ಗೆ ಮಾಹಿತಿ ನೀಡಿದರು.

ಪ್ರತಿಯೊಬ್ಬ ವಿದ್ಯಾರ್ಥಿ ಸಹ ಒಳ್ಳೆಯ ಗುಣವನ್ನು, ಸಂಸ್ಕಾರಯುತವಾಗಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಈ ವಿದ್ಯಾರ್ಥಿ ಜೀವನದಲ್ಲಿಯೇ ಹಲವಾರು ಸಂಘ-ಸಂಸ್ಥೆಗಳ ಬಗೆಗಿನ ಮಾಹಿತಿಯನ್ನು ಪಡೆಯಬೇಕು. ಸ್ವತಂತ್ರವಾಗಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿರುವ ರೆಡ್ ಕ್ರಾಸ್ ಸಂಸ್ಥೆಯ ಬಗ್ಗೆ ಪ್ರತಿಯೊಬ್ಬರು ತಿಳಿಯಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರತಿಯೊಬ್ಬರು ಸಹಾಯದ ಮನೋಭಾವವನ್ನು ಹೊಂದಬೇಕೆಂದು ತಿಳಿಸಿದರು.


ರೆಡ್ ಕ್ರಾಸ್ ಸಂಸ್ಥೆಯಲ್ಲಿರುವವರು ನಿಷ್ಪಕ್ಷಪಾತವಾಗಿ ಹಲವಾರು ಚಟುವಟಿಕೆಗಳ ಮುಖಾಂತರ ಕಾರ್ಯವನ್ನು ಮಾಡುತ್ತಿರುವುದಾಗಿ ಮತ್ತು ರೆಡ್ ಕ್ರಾಸ್ ಎಂದರೇನು? ಅದರ ಕಾರ್ಯತತ್ಪರತೆ ಹೇಗಿದೆ. ಅದರ ಸೇವಾ ಕಾರ್ಯಕ್ರಮದ ವಿಚಾರಗಳನ್ನು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ತಿಳಿಸಿದರು. ರಕ್ತದಾನ ಮಹಾದಾನ ಈ ರಕ್ತದಾನವನ್ನು ಆರೋಗ್ಯವಂತ ಪ್ರತಿಯೊಬ್ಬ ಮನುಷ್ಯರು ಮಾಡಬೇಕು. ಈ ಸೇವೆಯು ಪ್ರತಿಯೊಬ್ಬರ ಆದ್ಯ ಕರ್ತವ್ಯವೆಂದು ತಿಳಿದು ಮಾಡಬೇಕು. 18 ವರ್ಷದಿಂದ 60 ವರ್ಷದ ಒಳಗಿನ ಆರೋಗ್ಯವಂತರು ರಕ್ತದಾನ ಮಾಡುವಲ್ಲಿ ಮುಂದಾಗ ಬೇಕೆಂದು ಮತ್ತು ಜನಪರ ಸೇವೆಗಾಗಿ ನಿಂತಿರುವ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಸೇರಿ ಕಾರ್ಯವನ್ನು ನಿರ್ವಹಿಸಬೇಕೆಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು. ರಕ್ತಹೀನತೆಯ ಅನಾನುಕೂಲತೆಗಳು, ಅದನ್ನು ಸರಿಪಡಿಸಿಕೊಳ್ಳುವುದು ಹೇಗೆ, ಆರೋಗ್ಯಕರ ಜೀವನವನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸಿದರು.


ಇಂದಿನ ಹೆಣ್ಣುಮಕ್ಕಳ ನಡೆನುಡಿ ಇತರರಿಗೆ ಮಾರಕವಾಗದೆ ಮಾರ್ಗದರ್ಶನವಾಗುವಂತಿರಲಿ ಎಂದು ಹಿರಿಯರಿಗೆ ಗೌರವಿಸುವುದರ ಮುಖಾಂತರ ಕೆಲಸಗಳನ್ನು ಮಾಡಬೇಕು. ಪ್ರತಿಯೊಬ್ಬರು ನಿಷ್ಕಲ್ಮಶವಾಗಿ ಕಾರ್ಯನಿರ್ವಹಿಸುತ್ತೇವೆಂದು ಮುಂದಿನ ಪೀಳಿಗೆಗೆ ಒಳ್ಳೆಯ ಪ್ರಜೆಯಾಗುತ್ತೇವೆಂದು ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಾಗಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.


ಎಲ್‌ಐಎಂ ಡಿಪಾರ್ಟ್‌ಮೆಂಟ್‌ನ ಮುದ್ದಣ್ಣ ಮಾತನಾಡಿ, ರೆಡ್‌ಕ್ರಾಸ್‌ ಬಗ್ಗೆ, ಅದರ ಉದ್ದೇಶದ ಬಗ್ಗೆ ಮಾಹಿತಿ ನೀಡಿದ್ದರು. ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿನಿಯರು ಇವರ ಕಾರ್ಯ ಚಟುವಟಿಕೆಗಳನ್ನು ಗಮನಿಸಿ ಅವರು ಮನೆಗೆ ಸೀಮಿತವಾಗದೆ ನಾನು ಸಮಾಜಕ್ಕೆ ಏನು ಕೊಡಬೇಕು. ನನ್ನಿಂದ ಸಮಾಜಕ್ಕೆ ಯಾವ ಸೇವೆ ಸಲ್ಲಬೇಕು ಎಂಬುದನ್ನೇ ಯೋಚನೆ ಮಾಡುತ್ತಾ, ನಾಯಕತ್ವದ ಗುಣವನ್ನು ಬೆಳೆಸಿಕೊಂಡಿದ್ದಾರೆ. ಪ್ರತಿಯೊಬ್ಬರು ಇವರ ಗುಣವನ್ನು ಅನುಸರಿಸಬೇಕು. ಇವರು ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಂತೆ ತಾವುಗಳು ಸಹ ಕಾರ್ಯವನ್ನು ನಿರ್ವಹಿಸಬೇಕು. ಇವರಂತೆ ಕಾರ್ಯವನ್ನು ಮಾಡಲು ಅಸಾಧ್ಯ. ಏಕೆಂದರೆ ಬಹಳಷ್ಟು ಶ್ರಮಿಕರು ಇವರು. ಇತರರಿಗೆ ಪ್ರೇರಣದಾಯಕರು, ಇವರಲ್ಲಿರುವ ನಾಯಕತ್ವದ ಗುಣ ಇತರರಿಗೆ ಪ್ರೇರಣೆಯಾಗಲೆಂದು ಆಶಿಸುತ್ತಾ ಅವರ ಸಾಧನೆಗೆ ಯಾವ ತೊಡಕು ಬಾರದಿರಲಿ. ಸಾಮಾಜಿಕ ಚಿಂತಕಿಯಾಗಿ ಇವರ ಕಾರ್ಯ ಅಗ್ರಗಣ್ಯ ಎಂದರು.


ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಸ್ನೇಹ ಮಾಡಿದರು. ಪ್ರಾರ್ಥನೆಯನ್ನು ಶ್ವೇತಾ, ಸ್ವಾಗತವನ್ನು ಸಂಗೀತ ನಿರ್ವಹಿಸಿದರು. ಎಚ್ ಎಸ್ ಪ್ರತಿಮಾ ಮತ್ತು ಮಮತ ಡಿಜೆ ಅವರನ್ನು ಸನ್ಮಾನಿಸಲಾಯಿತು.


ಎಡಿಎಫ್‌ಸಿ ಸಂಗೀತ ಜಿಪಿ ಕಾರ್ಯಕ್ರಮದ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಮಂಜುಳಾ, ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ ಸಿಬ್ಬಂದಿ ಸಿಪಿ ಡಿಪಾರ್ಟ್ಮೆಂಟ್ ಶೃತಿ, ಇಸಿ ಡಿಪಾರ್ಟ್ಮೆಂಟ್‌ನ ಶೈಲಜಾ, ಮುದ್ದಣ್ಣ, ಕಾಲೇಜಿನ ವಿದ್ಯಾರ್ಥಿನಿಯರು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top