ಹರೇಕಳ ರಾಮಕೃಷ್ಣ ಶಾಲೆಯಲ್ಲಿ ಯೋಗದಿನಾಚರಣೆ
ಹರೇಕಳ: ಮನುಷ್ಯನ ಸರ್ವಾಂಗೀಣ ಬೆಳವಣಿಗೆಗೆ ದೇಹ ಮತ್ತು ಮನಸಿನ ಆರೋಗ್ಯ ಮುಖ್ಯ. ನಿತ್ಯ ನಿಯಮಿತವಾಗಿ ಮಾಡುವ ಯೋಗಾಭ್ಯಾಸದಿಂದ ಈ ಆರೋಗ್ಯ ವರ್ಧಿಸುತ್ತದೆ. ಮನಸಿನ ಏಕಾಗ್ರತೆ ಬದುಕಿನ ಗುರಿ ಮುಟ್ಟಲು ಅಗತ್ಯ. ಅದಕ್ಕೆ ಯೋಗ ಧ್ಯಾನಗಳು ಸಹಕಾರಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಹೇಳಿದರು.
ಅವರು ಬುಧವಾರ ಹರೇಕಳ ರಾಮಕೃಷ್ಣ ಅನುದಾನಿತ ಪ್ರೌಢ ಶಾಲೆ ಮತ್ತು ಸೌಜನ್ಯ ಸೌಟ್ಸ್ ದಳ ವತಿಯಿಂದ ನಡೆದ ವಿಶ್ವ ಯೋಗ ದಿನಾಚರಣೆ ರಾಮಕೃಷ್ಣ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಹರೇಕಳ ಎಂದಾಗ ಸಮಾಜ ಸೇವೆಯಲ್ಲಿ ಪದ್ಮ ಪ್ರಶಸ್ತಿ ಪಡೆದ ಹಾಜಬ್ಬ ಮತ್ತು ಕರಾವಳಿಯ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಹರೇಕಳ ರಾಮಕೃಷ್ಣ ಶಾಲೆ ನೆನಪಾಗುತ್ತದೆ. ಸಾಧನೆಯಿಂದ ನಾವು ಊರಿಗೆ ಗೌರವ ತರಬೇಕು ಎಂದರು.
ಮಂಗಳೂರು ವಿಶ್ವ ವಿದ್ಯಾನಿಲಯದ ಯೋಗ ವಿಜ್ಞಾನ ವಿಭಾಗದ ಅತಿಥಿ ಉಪನ್ಯಾಸಕ ನಾಗೇಶ್ ಹೀರೇಗೌಡ ಯೋಗಾಭ್ಯಾಸ ಮಾಡಿಸಿದರು. ಶಾಲಾ ಮುಖ್ಯ ಶಿಕ್ಷಕಿ ಉಷಾಲತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಲೆಯ ಜ್ಞಾನ ವೃಕ್ಷ ಯೋಜನೆಯನ್ನು ಶಾಲಾ ಸಂಚಾಲಕರು ಕಡೆಂಜ ಸೋಮಶೇಖರ್ ಚೌಟ ಚಾಲನೆ ನೀಡಿದರು. ಶಿಕ್ಷಕರಾದ ಕುಮುದ, ಕೃಷ್ಣ ಶಾಸ್ತ್ರೀ, ಸ್ಮಿತಾ ಕುಮಾರಿ, ಮೋಹನ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸುಮಾರು 15 ವರ್ಷ ಕಂಪ್ಯೂಟರ್ ಶಿಕ್ಷಕಿಯಾಗಿ ಸೇವೆಗೈದ ನೂತನ ಟೀಚರ್ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮದ ಸಂಯೋಜಕ ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ರವಿಶಂಕರ್ ಪ್ರಾರ್ಥಿಸಿದರು. ಶ್ರೀಮತಿ ಮೋಹಿನಿ ಸ್ವಾಗತಿಸಿದರು, ಶಿಕ್ಷಕ ಶಿವಕುಮಾರ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ