2024ರ ಲೋಕಸಭೆ ಚುನಾವಣೆಯಲ್ಲಿ 'ಹಿಂದೂ ರಾಷ್ಟ್ರ' ಸಹಿತ ಹಿಂದು ಹಿತದ ಬೇಡಿಕೆಗಳನ್ನು ಪೂರೈಸುವವರಿಗೆ ಹಿಂದೂಗಳ ಬೆಂಬಲ: ಸದ್ಗುರು ಡಾ. ಚಾರುದತ್ತ ಪಿಂಗಳೆ
ಪಣಜಿ: ಗೋವಾದಲ್ಲಿ ನಡೆದ ಅಧಿವೇಶನದಿಂದ ಆರಂಭವಾದ ಹಿಂದೂ ರಾಷ್ಟ್ರದ ಬೇಡಿಕೆ ಈಗ ಜನರ ಬೇಡಿಕೆಯಾಗುತ್ತಿದ್ದು, ಸಾಧು-ಸಂತರು, ರಾಜಕೀಯ ಮುಖಂಡರು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಹಾಗಾಗಿ, ಈಗ ನಮಗೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ದೃಢ ಘೋಷಣೆಯ ಅಗತ್ಯವಿದೆ. ಸಂಪೂರ್ಣ ಭಾರತದಲ್ಲಿ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾನೂನು ರೂಪಿಸುವುದು, ಹಿಂದೂಗಳ ದೇವತೆಗಳ ಅವಮಾನ ಮಾಡುವವರ ಮೇಲೆ ಕಠೀಣ ಕ್ರಮ ಕೈಗೊಳ್ಳುವ ಕಾನೂನು ತರುವುದು. 'ವಕ್ಫ್' ಮತ್ತು 'ಪ್ಲೇಸಸ್ ಆಫ್ ವರ್ಶಿಪ್' ನಂತಹ ಅನ್ಯಾಯದ ಕಾನೂನುಗಳನ್ನು ರದ್ದುಪಡಿಸಬೇಕು ಇತ್ಯಾದಿ ಹಿಂದುಹಿತದ ಬೇಡಿಕೆಗಳನ್ನು ಘೋಷಣಾಪತ್ರದಲ್ಲಿ ಸೇರಿಸಿ ಅದನ್ನು ಪೂರ್ಣಗೊಳಿಸುವ ಜನಪ್ರತಿನಿಧಿಗಳಿಗೆ 2024ರಲ್ಲಿ ನಡೆಯಲಿರುವ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಿಂದೂಗಳ ಬಹಿರಂಗ ಬೆಂಬಲವಿರಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಅವರು 'ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ'ದಲ್ಲಿ ಪ್ರತಿಪಾದಿಸಿದರು.
ಸದ್ಗುರು ಡಾ. ಪಿಂಗಳೆ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, 'ಹಿಂದೂಗಳ ರಾಜಕೀಯ ದೃಷ್ಟಿಯಿಂದ ಜಾಗೃತರಾಗದಿರುವುದು ಹಿಂದೂಗಳ ಸೋಲಿಗೆ ಕಾರಣವಾಗಿದೆ. ಜಾಗೃತ, ಸಕ್ರಿಯ ಮತ್ತು ಸಂಘಟಿತ ನಾಗರಿಕರೇ ಪ್ರಜಾಪ್ರಭುತ್ವದ ಶಕ್ತಿಯಾಗಿದೆ. ಆದ್ದರಿಂದ ಸ್ವದೇಶ, ಸ್ವಾತಂತ್ರ್ಯ, ಸಾಮಾಜಿಕವ್ಯವಸ್ಥೆ ಕುರಿತು ಹಿಂದೂಗಳ ಅಜ್ಞಾನ, ಸ್ವಾರ್ಥ, ಅಸಂಘಟಿತ ಇವುಗಳ ಕುರಿತು ಕಾರ್ಯ ಮಾಡುವುದು ಅಗತ್ಯವಿದೆ. ರಾಜಕೀಯ ಪಕ್ಷಗಳು ತಮ್ಮ ಘೋಷಣಾಪತ್ರಗಳನ್ನು ಪ್ರಕಟಿಸುತ್ತವೆ, ಈಗ ಹಿಂದೂಗಳು ಸಂಘಟಿತರಾಗಿ ಹಿಂದುಹಿತದ ಘೋಷಣಾಪತ್ರವನ್ನು ಮಾಡಿ ಮತ ಕೇಳಲು ಮನೆಗೆ ಬರುವ ಜನಪ್ರತಿನಿಧಿಗಳಿಗೆ ಆ ಬೇಡಿಕೆಗಳನ್ನು ಮಂಡಿಸಬೇಕು' ಎಂದು ಹೇಳಿದರು.
ಹಿಂದೂಗಳನ್ನು ರಕ್ಷಿಸಲು ನಮಗೆ ಹಿಂದೂಗಳ ಸಮರ್ಥ 'ಇಕೋಸಿಸ್ಟಮ್' ಬೇಕು: ಕಪಿಲ್ ಮಿಶ್ರಾ
2022ರಲ್ಲಿ ಶ್ರೀರಾಮನವಮಿಯ ದಿನ ನವದೆಹಲಿಯ ಜಹಾಂಗಿರಪುರಿಯಲ್ಲಿ ಬಾಂಗ್ಲಾದೇಶಿ ನುಸುಳುಕೋರ ಮುಸಲ್ಮಾನರು ಹಿಂದೂಗಳ ಮೇಲೆ ಬಾಂಬ್, ಗುಂಡಿನ ದಾಳಿ, ಕಲ್ಲುತೂರಾಟಗಳ ಮೂಲಕ ಹಿಂಸಾತ್ಮಕ ದಾಳಿ ನಡೆಸಿದರು. ಈ ಪ್ರಕರಣದಲ್ಲಿ ಬಂಧಿಸಲಾದ ಅನ್ಸರನ ಮೊಕದ್ದಮೆ ನಡೆಸುವುದಕ್ಕಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಡಲು 'ಜಮಿಯತ್ ಉಲೆಮಾ-ಎ-ಹಿಂದ್' ಈ ಸಂಸ್ಥೆಯಿಂದ ಲಕ್ಷಾಂತರ ರೂಪಾಯಿ ನೀಡಲಾಯಿತು. ದೇಶದ ಹಲವೆಡೆ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿರುವವರ ಪ್ರಕರಣಗಳನ್ನು ಜಮೀಯತ್ ಉಲೇಮಾ-ಎ-ಹಿಂದ್ ಹೋರಾಡುತ್ತಿದೆ. ಈ ಹಣ ಈ ಸಂಸ್ಥೆಗೆ 'ಹಲಾಲ್' ಮೂಲಕ ಬರುತ್ತದೆ. ಹಿಂದೂಗಳು 'ಕೂದಲು ಕತ್ತರಿಸುವುದು', 'ತರಕಾರಿಗಳನ್ನು ಖರೀದಿಸುವುದು' ಮುಂತಾದ ವಿಷಯಗಳಿಗೆ ಇತರ ಧರ್ಮದವರಿಗೆ ಹಣವನ್ನು ನೀಡುತ್ತಿದ್ದಾರೆ. ಆ ಹಣವು 'ಜಮೀಯತ್ ಉಲೇಮಾ-ಎ-ಹಿಂದ್'ಗೆ ಹೋಗುತ್ತದೆ ಮತ್ತು ಅದೇ ಹಣವನ್ನು ಭಯೋತ್ಪಾದಕರ ಪ್ರಕರಣಗಳ ವಿರುದ್ಧ ಹೋರಾಡಲು ಬಳಸಲಾಗುತ್ತದೆ. ಅದೇ ರೀತಿ ಹಿಂದೂಗಳ ರಕ್ಷಣೆಗಾಗಿ ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಹಿಂದೂಗಳ ಸಮರ್ಥ 'ಇಕೊಸಿಸ್ಟಂ' ಅನ್ನು ನಿರ್ಮಿಸುವುದು ಅತ್ಯಗತ್ಯ ಇದೆ ಎಂದು 'ಹಿಂದೂ ಇಕೋಸಿಸ್ಟಮ್' ನ ಸಂಸ್ಥಾಪಕ ಕಪಿಲ ಮಿಶ್ರಾ ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಗೋವಾದ 'ಕೃಪಾಲ್ ರುಹಾನಿ ಫೌಂಡೇಶನ್'ನ ಕರ್ನಲ್ ಕರತಾರ್ ಸಿಂಗ್ ಮಜಿಠಿಯಾ ಅವರಿಂದ ’ಹಲಾಲ್ ಸರ್ಟಿಫಿಕೇಶನ್: ವೈಶ್ವಿಕ ಅರ್ಥವ್ಯವಸ್ಥೆಯ ಮೇಲಿನ ದಾಳಿ’ ಎಂಬ ಹಿಂದಿ ಭಾಷೆಯ ಇ-ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ನಾಂದೇಡ್ ಗಣಾಚಾರ್ಯ ಮಠ ಸಂಸ್ಥಾನದ ಮಠಾಧೀಶರಾದ ಪೂಜ್ಯ ಷ.ಬ್ರ.ಪ್ರ.108 ಡಾ. ವಿರೂಪಾಕ್ಷ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡುತ್ತಾ, 'ಲಿಂಗಾಯತರು ಹಿಂದೂಗಳಿಂದ ಪ್ರತ್ಯೇಕವಾಗಿರದೇ ಅವಿಭಾಜ್ಯ ಅಂಗವಾಗಿದ್ದಾರೆ. ವೀರಶೈವ ಲಿಂಗಾಯತರು ಹಿಂದೂಗಳ ಒಂದು ಭಾಗವಾಗಿದ್ದಾರೆ' ಎಂದು ಹೇಳಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ