ಬನ್ನಂಜೆ ಪಠ್ಯ ರದ್ದು: ಸರ್ಕಾರ ಆತ್ಮವಿಮರ್ಶೆ ಮಾಡಿಕೊಳ್ಳಬೇಕು

Upayuktha
0

ಪ್ರಜಾತಂತ್ರ ನಡೆದು ಬಂದ ದಾರಿಯಲ್ಲಿ ಇಂಥ ಕ್ರೂರ ವಿಡಂಬನೆ ವಿರೋಧಾಭಾಸಗಳು ನಡೆಯುತ್ತಲೇ ಬಂದಿವೆ. ರಾಮಾಯಣದ ಕರ್ತೃ ವಾಲ್ಮೀಕಿಗೆ ಸಿಕ್ಕ ಮಾನ್ಯತೆಗಳು ಭಗವದ್ಗೀತೆಯನ್ನೂ ಒಳಗೊಂಡ ಮಹಾಭಾರತ, ಹದಿನೆಂಟು ಪುರಾಣಗಳು, ಉಪನಿಷತ್ತು ಬ್ರಹ್ಮಸೂತ್ರಗಳನ್ನು ರಚಿಸಿ ಭಾರತೀಯ ಜ್ಞಾನಸಾಗರದ ಹರಹು ವಿಸ್ತಾರಗಳನ್ನು ಜಗತ್ತಿಗೆ ತೆರದಿಟ್ಟ ಮಹರ್ಷಿ ವೇದವ್ಯಾಸರಿಗೆ ಯಾಕೆ ಸಿಕ್ಕಿಲ್ಲ? ಅಥವಾ ಕನಕದಾಸರಿಗೆ ಸಿಕ್ಕ ಗೌರವ ಮಾನ್ಯತೆಗಳು, ಕರ್ನಾಟಕ ಸಂಗೀತ ಪಿತಾಮಹರೆಂದೇ ಕರೆಯಲ್ಪಡುವ, ಕನಕರೂ ಸೇರಿದಂತೆ ಬಹುತೇಕ ಎಲ್ಲ ಹರಿದಾಸರೆಲ್ಲರಿಂದಲೂ ಗುರುಗಳೆಂದೇ ಕರೆಯಲ್ಪಟ್ಟ, ಲಕ್ಷ ಲಕ್ಷ ಕೀರ್ತನೆಗಳ ಮೂಲಕ ಕನ್ನಡದ ನುಡಿ ಶ್ರೀಮಂತಿಕೆಗೆ ಮಹತ್ವದ‌ ಅಸ್ತಿಭಾರ ಹಾಕಿದ ಪುರಂದರದಾಸರಿಗೆ ಯಾಕೆ ಸಿಕ್ಕಿಲ್ಲ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಬಹಳ ಕಷ್ಟವೇನಲ್ಲ? ಕೇವಲ ಜಾತಿ.. ಜಾತಿ ಜಾತಿ..


ಇವತ್ತು ಬನ್ನಂಜೆಯವರಂಥ ಈ ನೆಲ ಕಂಡ ಉತ್ಕೃಷ್ಟ ವಿದ್ವತ್ಪರಂಪರೆಯ ಅಪೂರ್ವ ಅಧ್ವರ್ಯುಗಳ ಪಠ್ಯ ಕೈಬಿಡುವ ಹಿಂದೆಯೂ ಕೆಲಸ ಮಾಡಿರೋದೂ ಈ ಕುಹಕ ಕೈಗಳೇ ಆಗಿವೆ. ಆದರೆ ಅದರಿಂದ ಬನ್ನಂಜೆಯವರಿಗೋ ಅವರ ವಿದ್ವತ್ತಿಗೋ ಚ್ಯುತಿ ಇಲ್ಲ. ಆದರೆ ಅಂಥ ಧೀಮಂತರು ಹಾಕಿಕೊಟ್ಟ ನೀತಿಯ ದಾರಿಯಲ್ಲಿ ನಡೆಯಬಹುದಾಗಿದ್ದ ಪೀಳಿಗೆಗೆ ಮತ್ತು ಆ ಬಗೆಯ ಕನಸು ಕಂಡ ಮನಸ್ಸುಗಳಿಗೆ ನಷ್ಟ ಇದೆ. ಎಲ್ಲ ಪಂಥಗಳ ಎಲ್ಲೆ ಮೀರಿ‌ ಅಧ್ಯಾತ್ಮ ಜ್ಞಾನದ ಸಾರವನ್ನು ಆಧುನಿಕ ವಿಜ್ಞಾನದ ಕನ್ನಡಿಯಲ್ಲಿ ಶೋಧಿಸಿ, ಬಗೆಬಗೆಯಲ್ಲಿ ನಾಡಿಗೆ ಕೊಟ್ಟ ಶ್ರೇಷ್ಠ ವಿದ್ವಾಂಸರನ್ನು ಇವರ ರಾಜಕೀಯ ಕ್ಷುಲ್ಲಕ ಇಸಮ್ ಗಳ ಮಿತಿಗೆ ಒಳಪಡಿಸುವ ಸಂಕುಚಿತ ಮನಸ್ಥಿತಿಯನ್ನು ಸ್ವಯಂ ಆತ್ಮವಿಮರ್ಶಿಸಿಕೊಳ್ಳಬೇಕು. 


-ಜಿ ವಾಸುದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top