ಗೋವಿಂದದಾಸ ಕಾಲೇಜು: ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈಯವರ 108ನೇ ಜನ್ಮದಿನ ಆಚರಣೆ

Upayuktha
0


ಸುರತ್ಕಲ್:
ಗೋವಿಂದದಾಸ ಕಾಲೇಜು ಗ್ರಂಥಾಲಯ ಹಾಗೂ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಗಡಿನಾಡಕಿಡಿ, ನಾಡೋಜ ಡಾ. ಕಯ್ಯಾರಕಿಞ್ಞಣ್ಣರೈಯವರ 108ನೇ ಜನ್ಮದಿನವನ್ನು ಕಾಲೇಜಿನ ಗ್ರಂಥಾಲಯದಲ್ಲಿ ಆಚರಿಸಲಾಯಿತು. ಪ್ರಥಮ ಬಿ.ಬಿ.ಎ ವಿದ್ಯಾರ್ಥಿನಿ ಸ್ಪೂರ್ತಿ ಇವರು ಕಯ್ಯಾರರ ಜೀವನ ಸಾಧನೆಗಳ ಕುರಿತು ಮಾತನಾಡಿದರು. ಕನ್ನಡ ವಿಭಾಗದ ಉಪನ್ಯಾಸಕಿ ಅಕ್ಷತಾ ಶೆಟ್ಟಿಯವರು ಮಾತನಾಡಿ ಕಯ್ಯಾರ ಕಿಞ್ಞಣ್ಣ ರೈಯವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಏಕೀಕರಣ ಚಳುವಳಿಯ ನೇತಾರರಾಗಿ, ಆದರ್ಶ ಶಿಕ್ಷಕರಾಗಿ, ಕವಿಯಾಗಿ, ಸರ್ವರಿಗೂ ಆದರ್ಶ ವ್ಯಕ್ತಿಯಾಗಿದ್ದಾರೆಎಂದು ತಿಳಿಸಿದರು. 


ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ.ಕೃಷ್ಣಮೂರ್ತಿಯವರು ಮಾತನಾಡಿ ಕಯ್ಯಾರರ ಬದುಕು ಬರಹಗಳು ಸರ್ವರಿಗೂ ಆದರ್ಶವಾಗಿದೆ ಎಂದರು.


ಗ್ರಂಥಪಾಲಕಿ ಡಾ. ಸುಜಾತ.ಬಿ ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥೆ ದೀಪಾ ಶೆಟ್ಟಿ ವಂದಿಸಿದರು. ಗ್ರಂಥಾಲಯದ ಸಿಬ್ಬಂದಿ ಸಾವಿತ್ರಿ ಮತ್ತು ಸುಮನ್ ಉಪಸ್ಥಿತರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top