ಗೋವಿಂದ ದಾಸ ಕಾಲೇಜ್ ದಿಗಂತ-2023 ಉತ್ಸವ

Upayuktha
0


ಸುರತ್ಕಲ್‌:
ಇಂದಿನ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು ಅವರ ಪ್ರತಿಭಾಭಿವ್ಯಕ್ತಿಗೆ ಶೈಕ್ಷಣಿಕ ಸ್ಪರ್ಧೆಗಳು ಪೂರಕ ಎಂದು ಗೋವಿಂದ ದಾಸ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್ ನುಡಿದರು.

ಅವರು ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ಲಲಿತ ಕಲಾ ಸಂಘ “ಕಲಾಬ್ಧಿ” ಹಾಗು ವಿದ್ಯಾರ್ಥಿಸೆನಟ್ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಸ್ಪರ್ಧೆ ದಿಗಂತ-2023 ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.


ಕಾಲೇಜಿನ ಆಡಳಿತಾತ್ಮಕ ನಿರ್ದೇಶಕರಾದ ಪ್ರೊ.ರಮೇಶ ಕುಳಾಯಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಕೌಶಲ ಆಧಾರಿತ ಶಿಕ್ಷಣ ಕ್ರಮದಲ್ಲಿ ವಿವಿಧ ಸ್ಪರ್ಧೆಗಳಿಗೆ ಪ್ರಮುಖ ಪಾತ್ರ ನೀಡಲಾಗಿದೆ ಎಂದರು. 


ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ ವಿದ್ಯಾರ್ಥಿಗಳು ಸ್ಫೂರ್ತಿದಾಯಕವಾಗಿ ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಉಪಪ್ರಾಂಶುಪಾಲ ಹಾಗು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ರಮೇಶ್ ಭಟ್ ಎಸ್.ಜಿ. ಶುಭ ಹಾರೈಸಿದರು.

 

ದಿಗಂತ ಉತ್ಸವದ ವಿದ್ಯಾರ್ಥಿ ಸಂಚಾಲಕರಾದ ಕೆ.ನವನಿತ್ ರಾವ್ ಮತ್ತು ಆಶಿಶ್ ಉಪಸ್ಥಿತರಿದ್ದರು. ಶ್ರುತಿ ಶೆಟ್ಟಿ ಸ್ವಾಗತಿಸಿದರು. ರಕ್ಷಿತ್ ಕಮಾರ್ ವಂದಿಸಿದರು. ಹಿತಾ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top