ಸುರತ್ಕಲ್: ಯುವಜನತೆ ದೇಶದ ಭವಿಷ್ಯವಾಗಿದ್ದು, ಯುವ ಸಮುದಾಯ ಆತ್ಮಹತ್ಯೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಬಿ.ಎ.ಎಸ್.ಎಫ್ ಇಂಡಿಯಾ ಲಿ. ಮಂಗಳೂರು ಇದರ ಮಾನವ ಸಂಪನ್ಮೂಲ ಅಧಿಕಾರಿ ಸಂತೋಷ್ ಪೈ ನುಡಿದರು.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಏಂಡ್ ನ್ಯೂರೋ ಸಯನ್ಸ್ ಬೆಂಗಳೂರು, ಮನಶ್ಶಾಂತಿ ಕೌನ್ಸಿಲಿಂಗ್ ರಿಸರ್ಚ್ ಏಂಡ್ ಟ್ರೈನಿಂಗ್ ಸೆಂಟರ್ ಮಂಗಳೂರು, ಸುಯಿಸೈಡ್ ಲೈಫ್ ಲೈನ್- ಎ ಯೂನಿಟ್ ಆಫ್ ಸುಶೇಜ್ ಚ್ಯಾರಿಟೇಬಲ್ ಟ್ರಸ್ಟ್ ಮಂಗಳೂರು, ಲಯನ್ಸ್ ಹಾಗೂ ಲಿಯೋ ಕ್ಲಬ್ ಹಳೆಯಂಗಡಿ, ಸುರತ್ಕಲ್ ಗೋವಿಂದದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿಕೋಶ, ರಾಷ್ಟ್ರೀಯ ಸೇವಾ ಯೋಜನೆ, ಮಹಿಳಾ ವೇದಿಕೆ, ಗ್ರಾಹಕ ಹಾಗೂ ಮಾನವ ಹಕ್ಕುಗಳ ವೇದಿಕೆ, ವುಮೆನ್ ಗ್ರಿವೆನ್ಸಸ್ ರಿಡ್ರೆಸಲ್ ಸೆಲ್ ಇವುಗಳ ಜಂಟಿ ಆಶ್ರಯದಲ್ಲಿ ನಡೆದ “ವಿದ್ಯಾ ಸಂಸ್ಥೆಗಳ ಸಮಾನ ವಯಸ್ಕ ವಿದ್ಯಾರ್ಥಿಗಳ ಆತ್ಮಹತ್ಯಾ ಪ್ರವೃತ್ತಿ ತಡೆಗಟ್ಟುವಿಕೆ ಹಾಗೂ ಯುವ ಸಬಲೀಕರಣ” ಎಂಬ ವಿಚಾರದ ಕುರಿತು ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಶಯ ಭಾಷಣ ಮಾಡಿದ ಮನಶಾಸ್ತ್ರಜ್ಞ ಡಾ.ಮನು ಆನಂದ್ ಮಾತನಾಡಿ ಆತ್ಮಹತ್ಯೆ ಗೈಯಬಯಸುವ ವ್ಯಕ್ತಿಗಳೊಂದಿಗೆ ವ್ಯವಹರಿಸುವ ಕ್ರಮ, ಆತ್ಮಹತ್ಯಾ ಪ್ರವೃತ್ತಿಯನ್ನು ಪತ್ತೆಹಚ್ಚುವ ಬಗೆ, ಆತ್ಮಹತ್ಯೆಯ ಭಾವ ಹಾಗೂ ಭಾವವಿಮೋಚನೆಯಲ್ಲಿ ಯುವಜನತೆ ಪಾತ್ರದ ಕುರಿತು ಮಾತನಾಡಿದರು
ಮುಖ್ಯ ಸಂಪನ್ಮೂಲ ವ್ಯಕ್ತಿ ಡಾ.ರಮೀಳಾ ಶೇಖರ್ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಜೀವಗಳನ್ನು ಕಾಯುವ ದ್ವಾರ ಪಾಲಕರಾಗೋಣ ಎಂಬ ಕರೆಯನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಆತ್ಮಹತ್ಯೆ ತಡೆಯುವಲ್ಲಿ ಸ್ವಯಂಪ್ರೇರಿತರಾಗಿ ದುಡಿಯುತ್ತಿರುವ ಫಾತಿಮಾ ಸೆರಾವೊ ಹಾಗೂ ಮೆರ್ಸಿ ಮಿನೇಜಸ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡರು. ಹಳೆಯಗಡಿ ಲಯನ್ಸ್ ಕ್ಲಬ್‍ನ ಅಧ್ಯಕ್ಷೆ ರಶ್ಮಿ ಆರ್ ಮುಖ್ಯ ಅತಿಥಿಗಳಾಗಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ ಕೃಷ್ಣಮೂರ್ತಿ ಪಿ ವಹಿಸಿದರು. ಹಳೆಯಂಗಡಿ ಲಯನ್ಸ್ ಕ್ಲಬ್‍ನ ಸ್ಥಾಪಕಾಧ್ಯಕ್ಷ ಚಂದ್ರಶೇಖರ್ ನಾನಿಲ್ ಪ್ರಮಾಣ ಪತ್ರ ವಿತರಿಸಿದರು.
ಮಹಿಳಾ ವೇದಿಕೆಯ ಸಂಯೋಜಕಿ ಶ್ರೀದೇವಿ, ರಾಷ್ಟ್ರೀಯ ಸೇವಾಯೋಜನಾ ಅಧಿಕಾರಿ ಅಕ್ಷತಾ ಉಪಸ್ಥಿತರಿದ್ದರು. ಅಂತರಿಕ ಗುಣಮಟ್ಟ ಖಾತರಿ ಕೋಶದ ಪ್ರೊ.ಹರೀಶ್ ಆಚಾರ್ಯ ಸ್ವಾಗತಿಸಿದರು. ಗ್ರಾಹಕ ವೇದಿಕೆಯ ಸಂಯೋಜಕಿ ದಯಾ ಸುವರ್ಣ ವಂದಿಸಿದರು. ಅರ್ಪಿತಾ ಮತ್ತು ವೈಭವಿ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ