ಫ್ಲಿಪ್ ಕಾರ್ಟ್‍ನಿಂದ ನಿಷ್ಕ್ರಿಯ ಸ್ಮಾರ್ಟ್ ಫೋನ್ ವಿನಿಮಯ

Upayuktha
0


ಮಂಗಳೂರು:
ಸ್ವದೇಶಿ ಇ- ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಗ್ರಾಹಕರ ನಿಷ್ಕ್ರಿಯವಾಗಿರುವ ಎಲೆಕ್ಟ್ರಾನಿಕ್ ಅಪ್ಲಾಯನ್ಸಸ್ ಮತ್ತು ಸ್ಮಾರ್ಟ್ ಫೋನ್ ಗಳ ವಿನಿಮಯ ಕಾರ್ಯಕ್ರಮವನ್ನು ಘೋಷಿಸಿದೆ.


ಇದರ ಮೂಲಕ ಗ್ರಾಹಕರು ತಮ್ಮ ಹಳೆಯ ನಿಷ್ಕ್ರಿಯಗೊಂಡಿರುವ ಎಲೆಕ್ಟ್ರಾನಿಕ್ ಅಪ್ಲಾಯನ್ಸ್‍ಗಳನ್ನು ನೀಡಿ ಟೆಲಿವಿಷನ್, ರೆಫ್ರಿಜರೇಟರ್ ಮತ್ತು ವಾಶಿಂಗ್ ಮಶಿನ್‍ನಿಂದ ಹಿಡಿದು ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಮತ್ತು ಇತರ ಫೀಚರ್ ಫೋನ್‍ಗಳನ್ನು ಖರೀದಿಸಬಹುದು ಎಂದು ಫ್ಲಿಪ್ ಕಾರ್ಟ್ ರೀ-ಕಾಮರ್ಸ್ ವಿಭಾಗದ ಸೀನಿಯರ್ ಡೈರೆಕ್ಟರ್ & ಬ್ಯುಸಿನೆಸ್ ಹೆಡ್ ಅಶುತೋಶ್ ಸಿಂಗ್ ಚಾಂಡೇಲ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


ನಿಷ್ಕ್ರಿಯವಾಗಿರುವ ಉತ್ಪನ್ನಗಳ ವಿಲೇವಾರಿ ಮಾಡುವುದು ಒಂದು ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ಈ ಸಮಸ್ಯೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಜತೆಗೆ ಅಸರ್ಪಕ ರೀತಿಯಲ್ಲಿ ವಿಲೇವಾರಿಯಾದ ಇ-ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡುವ ಗುರಿಯನ್ನು ಹಾಕಿಕೊಂಡಿದೆ ಎಂದು ವಿವರಿಸಿದ್ದಾರೆ.


ಫ್ಲಿಪ್ ಕಾರ್ಟ್ ಅದರ ವ್ಯಾಪಕವಾದ ಲಾಜಿಸ್ಟಿಕ್ ನೆಟ್ ವರ್ಕ್ ಮತ್ತು ಸಮರ್ಥ ತಂತ್ರಜ್ಞಾನ -ಚಾಲಿತ ಪ್ರಕ್ರಿಯೆಗಳ ಮೂಲಕ ಒಂದೇ ಭೇಟಿಯಲ್ಲಿ ವಿನಿಮಯವನ್ನು ಸಕ್ರಿಯಗೊಳಿಸುತ್ತದೆ. ಈ ಮೂಲಕ ಗ್ರಾಹಕರಿಗೆ ಅನುಕೂಲಕರ ಮತ್ತು ಅಡೆತಡೆ ಮುಕ್ತ ಅನುಭವವನ್ನು ಖಾತ್ರಿಪಡಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top