ರಾಮಕೃಷ್ಣ ಮಠದಲ್ಲಿ ಭಜನ್ ಸಂಧ್ಯಾ: ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ

Upayuktha
0

ಜು.2ರಂದು ಉದ್ಘಾಟನೆ



ಮಂಗಳೂರು: ಮಂಗಳೂರಿನ ಮಂಗಳಾದೇವಿಯಲ್ಲಿರುವ ಶ್ರೀ ರಾಮಕೃಷ್ಣ ಮಠವು 'ಭಜನ್ ಸಂಧ್ಯಾ' ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರತಿ ತಿಂಗಳ ಮೊದಲ ಹಾಗೂ ಎರಡನೇ ಭಾನುವಾರ ನಗರದ ವಿವಿಧ ಭಜನಾ ತಂಡಗಳನ್ನು ಆಹ್ವಾನಿಸಿ ಸಂಜೆ 4ರಿಂದ 7 ಗಂಟೆಯ ವರೆಗೆ ಶ್ರೀ ಮಠದ ಪ್ರಾರ್ಥನಾ ಮಂದಿರದಲ್ಲಿ ಭಜನಾ ಸೇವೆಯನ್ನು ನೀಡುವಂತೆ ವ್ಯವಸ್ಥೆ ಮಾಡಿದೆ.


ಈ ಕಾರ್ಯಕ್ರಮದ ಉದ್ಘಾಟನೆ ಜುಲೈ 2ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರ ಅಧ್ಯಕ್ಷತೆಯಲ್ಲಿ ಎಸ್‌ಸಿಎಸ್‌ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಜೀವರಾಜ್ ಸೊರಕೆ ಉದ್ಘಾಟಿಸಲಿದ್ದಾರೆ.


ನಿವೃತ್ತ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಲಿದ್ದು, ಸಮಾಜ ಸೇವಕರಾದ ಸೀತಾರಾಮ ಎ ಅವರು ಉಪಸ್ಥಿತರಿರುತ್ತಾರೆ.


4:30ಕ್ಕೆ ಭಜನೆ ಆರಂಭವಾಗಲಿದ್ದು, ಮೊದಲ ದಿನ ಮುಳಿಹಿತ್ಲು ಅರೆಕೆರೆಬೈಲ್‌ನ ಅಂಬಾನಗರದ ಶ್ರೀ ಅಂಬಾ ಮಹೇಶ್ವರಿ ಭಜನಾ ಮಂಡಳಿಯವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.


6:20ಕ್ಕೆ ವಿರಾಮ, 6:30ಕ್ಕೆ ಆರತಿ ಹಾಗೂ ಆಶ್ರಮದ ವಿದ್ಯಾರ್ಥಿಗಳಿಂದ ಭಜನೆ ನಡೆಯಲಿದ್ದು, ಬಳಿಕ 7:15ಕ್ಕೆ ಪ್ರಸಾದ ವಿತರಣೆ ನಡೆಲಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top