ಬೆಂಗಳೂರು: ಜೂನ್ 24ರಂದು ಪ್ರಣವಿ ಬೇರಿಕೆ ರಂಗಪ್ರವೇಶ

Upayuktha
0

             ವಿದುಷಿ ದೀಕ್ಷಾ ಶಾಸ್ತ್ರಿ ಸಾರಥ್ಯ - ಜೆಎಸ್‌ಎಸ್ ಸಭಾಂಗಣದಲ್ಲಿ ಭರತ ನೃತ್ಯ ಸಮರ್ಪಣೆ


ಬೆಂಗಳೂರು: ಉದ್ಯಾನನಗರಿಯ ನೃತ್ಯಕಲಾ ಗುರುಕುಲದ ಗುರು ದೀಕ್ಷಾ ಶಾಸ್ತ್ರಿ ಅವರ ಶಿಷ್ಯೆ ಪ್ರಣವಿ ಬೇರಿಕೆ ಭರತನಾಟ್ಯ ರಂಗಪ್ರವೇಶಕ್ಕೆ ಅಣಿಯಾಗಿದ್ದಾರೆ. ಜೂ. 24ರ ಸಂಜೆ 6ಕ್ಕೆ ಜಯನಗರ 8ನೇ ಬಡಾವಣೆಯ ಜೆಎಸ್‌ಎಸ್ ಸಭಾಂಗಣದಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.


ರಂಗಪ್ರವೇಶಕ್ಕೆ ಮುಖ್ಯ ಅತಿಥಿಗಳಾಗಿ ದೃಷ್ಟಿ ಆರ್ಟ್ ಸೆಂಟರ್ ನಿರ್ದೇಶಕಿ ವಿದುಷಿ ಅನುರಾಧಾ ವಿಕ್ರಾಂತ್, ನಾದಂ ನೃತ್ಯ ಕೇಂದ್ರದ ನಿರ್ದೇಶಕಿ ನಂದಿನಿ ಮೆಹ್ತಾ ಆಗಮಿಸಲಿದ್ದಾರೆ. ಪ್ರಣವಿ ರಂಗಪ್ರವೇಶ ಪ್ರಸ್ತುತಿಗೆ ವಿದುಷಿ ಕಾಂಚನ ಶ್ರೀರಂಜನಿ (ಗಾಯನ), ಗುರು ದೀಕ್ಷಾ ಶಾಸ್ತ್ರಿ (ನಟುವಾಂಗ), ವಿದ್ವಾಂಸರಾದ ಹರ್ಷ ಸಾಮಗ (ಮೃದಂಗ), ಎನ್. ಆರ್. ಶ್ರೀಕೃಷ್ಣ ಭಟ್ (ಕೊಳಲು) ಮತ್ತು ಎ. ಶಂಕರ್ ರಾಮನ್ (ವೀಣೆ) ಪಕ್ಕವಾದ್ಯ ಸಹಕಾರವಿದೆ.


ಭರವಸೆಯ ಪ್ರತಿಭೆ :

ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿ ಕಮ್ಯೂನಿಕೇಷನ್ ಇಂಜಿನಿಯರಿಂಗ್ ದ್ವಿತೀಯ ಸೆಮಿಸ್ಟರ್ ಪದವಿ ಅಧ್ಯಯನ ಮಾಡುತ್ತಿರುವ ಪ್ರಣವಿ ನೃತ್ಯ ಕಲಿಕೆಗೆ ಅಡಿ ಇಟ್ಟಿದ್ದು 6ನೇ ವಯಸ್ಸಿನಿಂದ. ಇಂಜಿನಿಯರ್ ವೃತ್ತಿಯಲ್ಲಿರುವ ಜಯಲಕ್ಷ್ಮೀ ಮತ್ತು ಲಕ್ಷ್ಮೀಶ್ ದಂಪತಿಗೆ ಮಗಳು ಕಲಾವಿದೆ ಆಗಬೇಕು ಎಂಬ ಉತ್ಕಟ ಅಪೇಕ್ಷೆಗೆ ಪ್ರಣವಿಯ ಉತ್ಸಾಹವೂ ಮಿಳಿತಗೊಂಡಿದ್ದು ಸುಕೃತವೇ ಸರಿ. ವಿದುಷಿ ಕಾಂಚನಾ ಶ್ರೀರಂಜನಿ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡುತ್ತಿರುವ ಪ್ರಣವಿ ಈಗ ವಿದ್ವತ್ ಹಂತದ ಪಾಠಕ್ರಮದ ತಾಲೀಮಿನಲ್ಲಿ ನಿರತವಾಗಿರುವುದು ಗಮನೀಯ ಸಂಗತಿ.

 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top