ಮಂಗಳೂರು: ಮದುವೆ ಸೀಸನ್‍ಗೆ ಅಗತ್ಯ ಇರುವ ಎಲ್ಲ ಸಾಂಪ್ರದಾಯಿಕ ದಿರಿಸುಗಳ ಸಂಗ್ರಹವನ್ನು ಒಂದೆಡೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಅವಂತ್ರಾ ಬೈ ಟ್ರೆಂಡ್ಸ್ ವಿನೂತನ ಸಂಗ್ರಹ ಅನಾವರಣಗೊಳಿಸಿದೆ.
ರಿಲಯನ್ಸ್ ರೀಟೇಲ್‍ನಿಂದ ಹೆಣ್ಣುಮಕ್ಕಳಿಗಾಗಿಯೇ ಹೊರತರುತ್ತಿರುವ ಸಾಂಪ್ರದಾಯಿಕ ದಿರಿಸುಗಳ ಬ್ರ್ಯಾಂಡ್ ಅವಂತ್ರಾ ಬೈ ಟ್ರೆಂಡ್ಸ್. ಭಾರತದಲ್ಲಿ ಸಾಂಪ್ರದಾಯಿಕ ಬಟ್ಟೆಗಳ ಖರೀದಿ ವ್ಯಾಖ್ಯಾನವನ್ನೇ ಬದಲಿಸಿದೆ. ಅಖಿಲ ಭಾರತ ಮಟ್ಟದಲ್ಲಿ ಸಣ್ಣ ಮತ್ತು ದೊಡ್ಡ ಎರಡೂ ಮಾರುಕಟ್ಟೆಯಲ್ಲಿ ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಾಂಪ್ರದಾಯಿಕ ದಿರಿಸುಗಳ ಮಹಾಸಂಗಮವನ್ನೇ ಗ್ರಾಹಕರಿಗೆ ತೆರೆದಿಟ್ಟಿದೆ ಎಂದು ಪ್ರಕಟಣೆ ಹೇಳಿದೆ.
ಸಾಂಪ್ರದಾಯಿಕವಾದ, ಸೊಗಸಾದ ಕುಸುರಿ ಮತ್ತು ಇಂದಿನ ದಿನಮಾನಕ್ಕೆ ತಕ್ಕ ಫ್ಯಾಷನ್ ಎಲ್ಲವನ್ನೂ ಒಳಗೊಂಡಂಥ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮದುವೆ ಆಗಿರಲಿ, ಹಬ್ಬ- ಹರಿದಿನ ಇರಲಿ ಅಥವಾ ಕಚೇರಿಗಳಿಗೆ, ಕೆಲಸದ ಸಲುವಾಗಿ ಹೋಗುವಾಗ ಮತ್ತು ಯಾವುದೇ ಸಾಮಾನ್ಯ ಸಂದರ್ಭಕ್ಕೂ ಒಪ್ಪುವಂಥ ಬಟ್ಟೆಗಳನ್ನು ಇಲ್ಲಿ ನೀವು ಕೊಳ್ಳಬಹುದು ಎಂದು ತಿಳಿಸಿದೆ.
ದೇಶದ ನಾನಾ ಭಾಗಗಳ ಬಟ್ಟೆಗಳನ್ನು ಇಲ್ಲಿಯೇ ಕೊಳ್ಳಬಹುದು. ಸೀರೆ, ಬ್ಲೌಸ್ ಗಳು, ಲೆಹೆಂಗಾ, ಡ್ರೆಸ್ ಮಟೀರಿಯಲ್ ಗಳು, ಕುರ್ತಾಗಳು, ಇತರ ಪರಿಕರಗಳು ಮತ್ತು ಸ್ವಂತ ಬ್ರ್ಯಾಂಡ್ ನಲ್ಲಿಯೇ ಗ್ರಾಹಕರ ಬೇಕಾದ ರೀತಿಯಲ್ಲಿ ಸೇವೆಗಳು ದೊರೆಯುತ್ತವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ