ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನ ಆಚರಣೆ

Upayuktha
0


ನೆಲ್ಲಿಕಟ್ಟೆ:
ಜಗತ್ತಿಗೆ ‘ಯೋಗ’ದ ಜ್ಞಾನವನ್ನು ಕೊಟ್ಟಿರುವುದು ಭಾರತ. ಈ ಜ್ಞಾನವನ್ನು ಜಗತ್ತಿನಾದ್ಯಂತ ಎಲ್ಲರಿಗೂ ಪಸರಿಸುವ ಸದುದ್ದೇಶದಿಂದ ಭಾರತೀಯರು ಪ್ರಧಾನಿ ಮೋದಿಯವರಲ್ಲಿ ಕೇಳಿಕೊಂಡಾಗ ಪ್ರಧಾನಿ ಮೋದಿಯವರು ಈ ಪ್ರಸ್ತಾಪವನ್ನು ವಿಶ್ವಸಂಸ್ಥೆಯ ಮುಂದಿಟ್ಟಾಗ ಪ್ರಪಂಚದ ನೂರ ಎಪ್ಪಕ್ಕಿಂತಲೂ ಹೆಚ್ಚಿನ ದೇಶಗಳು ತಮ್ಮ ಮತನೀಡಿ ಬೆಂಬಲ ವ್ಯಕ್ತಪಡಿಸಿದ ನಿಟ್ಟಿನಲ್ಲಿ 2014ರಿಂದ ಜೂನ್ 21ನೇ ತಾರೀಕಿನಂದು ವಿಶ್ವ ಯೋಗ ದಿನದ ಆಚರಣೆ ಪ್ರಾರಂಭವಾಯಿತು. ಜಗತ್ತಿನ ಶೇಕಡಾ ತೊಂಬತ್ತರಷ್ಟು ದೇಶಗಳು ಭಾರತವನ್ನು ಒಪ್ಪಿಕೊಂಡಿರುವುದಾದರೆ ಭಾರತಕ್ಕೆ ಖಂಡಿತಾ ವಿಶ್ವಗುರುವಿನ ಗೌರವ ಸಲ್ಲುವುದು. ಆದುದರಿಂದ ಭಾರತೀಯರು ಹೆಮ್ಮೆ, ಸಂತೋಷ, ಉಲ್ಲಾಸ ಭಕ್ತಿಯಿಂದ ವಿಶ್ವ ಯೋಗ ದಿನವನ್ನು ಆಚರಿಸಲೇಬೇಕು. ಆಸನ, ಪ್ರಾಣಾಯಾಮ, ಧ್ಯಾನ, ಮುಂತಾದವುಗಳಿಂದ ಮಾನಸಿಕ, ಶಾರೀರಿಕ ಸ್ವಾಸ್ಥ್ಯ ಸಿದ್ಧಿಯಾಗುವುದು. 


ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿನಿತ್ಯವೂ ಯೋಗಾಭ್ಯಾಸ ಮಾಡಿ ಏಕಾಗ್ರತೆ, ಸ್ವಾಸ್ಥ್ಯವನ್ನು ಕಾಯ್ದುಕೊಳ್ಳುತ್ತಾರೆ. ಯೋಗ ನಿಮಗೆಲ್ಲಾ ಒಳಿತನ್ನು ದಯಪಾಲಿಸಲಿ ಎಂದು ಆರ್ಟ್ ಆಫ್ ಲಿವಿಂಗ್‍ನ ಶಿಕ್ಷಕಿ ಶರಾವತಿ ರವಿನಾರಾಯಣ ಹೇಳಿದರು. ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಗಳಲ್ಲೊಂದಾದ ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ‘ವಿಶ್ವ ಯೋಗ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಂತರ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು.

ವೇದಿಕೆಯಲ್ಲಿ ಹಿಂದಿ ಉಪನ್ಯಾಸಕಿ ಪುಷ್ಪಲತಾ ಪಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳೂ ಉಪನ್ಯಾಸಕರೂ ಸಭೆಯಲ್ಲಿ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅಕ್ಷತಾ ಆರ್ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ಮುರಳಿಮೋಹನ್ ಸಹಕರಿಸಿದರು.

 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top