ಆಚಾರ, ವಿಚಾರ, ಆಹಾರ, ವಿಹಾರ ಈ ನಾಲ್ಕು ವಿಚಾರಗಳು ಸಮತೋಲನದಲ್ಲಿದ್ದರೆ ಇದುವೇ ಯೋಗ: ಗೋಪಿನಾಥ ಪೈ

Upayuktha
0

  ಅಂಬಿಕಾದಲ್ಲಿ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಯೋಗ ತರಗತಿ ಉದ್ಘಾಟನೆ


ಪುತ್ತೂರು: ಆಚಾರ, ವಿಚಾರ, ಆಹಾರ, ವಿಹಾರ ಈ ನಾಲ್ಕು ವಿಚಾರಗಳು ಸಮತೋಲನದಲ್ಲಿದ್ದರೆ ಇದುವೇ ಯೋಗ. ಕೆಲಸ ಮೂಡುವ ತಾಕತ್ತಿಗೆ ಆರೋಗ್ಯ ಬೇಕು. ಯೋಗದಲ್ಲಿ ಎಲ್ಲಾ ರೋಗಗಳಿಗೂ ಔಷಧಿ ಇದೆ. ಮಾನಸಿಕ ಆರೋಗ್ಯಕ್ಕೂ ಯೋಗ ಉಪಯುಕ್ತ. ಯೋಗ ದಿನ ಹಾಗೂ ವಿಶ್ವ ಪರಿಸರ ದಿನದ ಶುಭಾಶಯಗಳು. ಯೋಗದಿಂದ ನಿಮ್ಮ ಭವಿಷ್ಯ ಉತ್ತುಂಗಕ್ಕೇರಲಿ ಎಂದು ಪುತ್ತೂರಿನ ಖ್ಯಾತ ವೈದ್ಯ ಗೋಪಿನಾಥ ಪೈ ಹೇಳಿದರು. ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳ ಯೋಗ ತರಗತಿಗಳನ್ನು ವಿದ್ಯುಕ್ತವಾಗಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕರ್ನಾಟಕದಲ್ಲಿ ಮೊದಲ ಬಾರಿಗೆ ಯೋಗವನ್ನು ಶಿಕ್ಷಣ ಸಂಸ್ಥೆಯಲ್ಲಿ ಅಳವಡಿಸಿಕೊಂಡ ಏಕೈಕ ಶಿಕ್ಷಣ ಸಂಸ್ಥೆ ಅಂಬಿಕಾ ವಿದ್ಯಾಲಯ. ಹಿಂದುತ್ವವನ್ನು ಉಳಿಸಿಕೊಳ್ಳಲು ಯೋಗ ಅಗತ್ಯ. ಮನಸ್ಸಿನ ಏಕಾಗ್ರತೆ ಉಳಿಸಿಕೊಳ್ಳಲು ಗುರುಕುಲ ಶಿಕ್ಷಣದಲ್ಲೂ ಯೋಗಕ್ಕೆ ಪ್ರಾಧಾನ್ಯತೆ ಕೊಡಲಾಗುತ್ತಿತ್ತು. ಅಂಬಿಕಾದಲ್ಲಿ ಋಷಿ, ಮುನಿಗಳು ಕೊಟ್ಟ ಸಂಸ್ಕಾರ,  ಸಂಸ್ಕೃತಿಯನ್ನು ಕಲಿಸಿಕೊಡುತ್ತಾರೆ. ಅಂಬಿಕಾದಲ್ಲಿ ನಿರಂತರ ಯೋಗ ಇದೆ. ಇನ್ನು ಮುಂದಿನ ಯುಗ ಯೋಗದಿಂದ ನಿಮ್ಮಿಂದ ಪ್ರಾರಂಭವಾಗಲಿ. ಉದ್ಯೋಗ ನಿಮಿತ್ತ ಪರದೇಶಕ್ಕೆ ಹೋದರೂ ಅಲ್ಲಿ ಯೋಗ ಪ್ರಚಾರ ಮಾಡಿ. ಭಾರತವನ್ನು ಉತ್ತುಂಗಕ್ಕೇರಿಸಿ. ಭಾರತ ಜಗದ್ಗುರುವಾಗಿ ಮೂಡಿಬರಲಿ ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ಸಭೆಯ ಅಧ್ಯಕ್ಷರಾಗಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ವೇದಿಕೆಯಲ್ಲಿ ಉಪಸ್ಥಿತರಿದ್ದು ‘ಆರ್ಟ್ ಆಫ್ ಲಿವಿಂಗ್’ನ ಪೂರ್ಣಾವಧಿ ಶಿಕ್ಷಕಿ ದೀಪಿಕಾ ಅವರಿಗೆ ಚೆಂಗುಲಾಬಿ ಇತ್ತು ಸ್ವಾಗತಿಸಿದರು. ಆರ್ಟ್ ಆಫ್ ಲಿವಿಂಗ್‍ನ ಯೋಗ ಶಿಕ್ಷಕಿ ಶರಾವತಿ ರವಿನಾರಾಯಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರ್ಟ್ ಆಫ್ ಲಿವಿಂಗ್‍ನ ಸ್ವಯಂಸೇವಕಿ ರಜತ ಹೆಗಡೆ, ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳು ಹಾಗೂ ಅಂಬಿಕಾದ ಉಪನ್ಯಾಸಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ಮುರಳಿ ಮೋಹನ ಸಹಕರಿಸಿದರು.   


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top