ವಿವೇಕಾನಂದ ಕಾಲೇಜಿನಲ್ಲಿ 'ಆರೋಹಣ-2023'

Upayuktha
0

ಪುತ್ತೂರು: "ಸಾಧನೆಗೆ ಅತೀ ಮುಖ್ಯವಾದದ್ದು ಸ್ಪಷ್ಟಗುರಿ.  ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಮೊದಲು ನಾವು ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಅದರ ಮೇಲೆ ನಮ್ಮ ಜೀವನದ ಗೆಲುವು ಅವಲಂಬಿತವಾಗಿರುತ್ತದೆ. ನಮ್ಮ ಜೀವನದಲ್ಲಿ ಧನಾತ್ಮಕವಾಗಿ ಚಿಂತಿಸುವುದನ್ನು ರೂಢಿಸಿಕೊಳ್ಳುವುದು ಅತ್ಯವಶ್ಯಕ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ನಾವು ವೃತ್ತಿಯ ಬಗೆಗೆ ಯೋಚಿಸಬೇಕು. ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಕಲಿಕಾ ಸಮಯದಲ್ಲಿ  ಇಂಟರ್ನ್ ಶಿಪ್, ಪ್ರಮಾಣ ಪತ್ರ ಕೋರ್ಸ್ ಗಳು ಮುಂತಾದವುಗಳಲ್ಲಿ ಪರಿಣಿತಿಯನ್ನು ಪಡೆದರೆ ಮುಂದಿನ ವೃತ್ತಿ ಜೀವನದಲ್ಲಿ ಉಜ್ವಲವಾದ ಯಶಸ್ಸನ್ನು ಕಾಣಬಹುದು ಎಂದು ಎನ್.ಎ.ಎಂ. ಎಫ್.ಐ ನೊಂದಾಯಿತ ಮ್ಯೂಚುವಲ್ ಫಂಡ್ ವಿತರಕರಾದ ವಿನೋದ್ ಕುಮಾರ್ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಾಲೇಜು  ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ )ದ ವಾಣಿಜ್ಯ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ ಆರೋಹಣ 2023 ಎನ್ನುವ ಫೆಸ್ಟ್ ನಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್  ಮಾತನಾಡಿ ನಮ್ಮ ಕಲಿಕಾ ಸಮಯವನ್ನು ವ್ಯರ್ಥ  ಮಾಡಬಾರದು. ವಿದ್ಯಾರ್ಥಿ ಜೀವನದಲ್ಲಿ ಏನನ್ನಾದರೂ ಸಾಧಿಸಿ ಯಶಸ್ಸು ಕಂಡಾಗ ಮಾತ್ರ ವಿದ್ಯಾರ್ಥಿ ಜೀವನಕ್ಕೆ ಸಾರ್ಥಕತೆ ದೊರೆಯುವುದು ಎಂದು ನುಡಿದರು.


ಸಮಾರೋಪ ಸಮಾರಂಭ:-

ಜೀವನದಲ್ಲಿ ನಮಗೆ ಸಾಕಷ್ಟು ಅವಕಾಶಗಳು ಸಿಗುತ್ತಿರುತ್ತವೆ. ಬೇರೆ ಬೇರೆ ರೀತಿಯ ಸ್ಪರ್ಧೆಗಳು ನಮ್ಮ ಜೀವನದಲ್ಲಿ ಬರುತ್ತವೆ. ನಾವು ಯಾಕೆ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಯೋಚಿಸುವುದಾದರೆ ಮುಂದೆ ಜೀವನ ಎನ್ನುವ ಪರೀಕ್ಷೆಯನ್ನು ಗೆಲ್ಲಲು ಇಂತಹ ಸ್ಪರ್ಧೆಗಳು ಕಾರಣವಾಗುತ್ತದೆ.


ವಿದ್ಯಾರ್ಥಿಗಳು ಮಾಡುವ ತಪ್ಪು ಏನೆಂದರೆ ನಿರ್ದಿಷ್ಟ ಗುರಿಯನ್ನು ಸಿದ್ದಪಡಿಸಿಕೊಂಡಿರುವುದಿಲ್ಲ. ನಾವು ಒಂದು ನಿರ್ದಿಷ್ಟ ಗುರಿಯನ್ನು ನಿಗದಿಪಡಿಸಿಕೊಂಡು ಆ ನಿಟ್ಟಿನಲ್ಲಿ ಸಾಗಬೇಕು. ಆ ಗುರಿಯನ್ನು ತಲುಪಲು ಬೇಕಾದ ತಯಾರಿ ನಡೆಸಲು ಈಗಾಗಲೇ ಪರಿಶ್ರಮ ಪಡಬೇಕು ಎಂದು ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ  ಯೂಟ್ಯೂಬರ್ ಶರಣ್ ಚಿಲಿಂಬಿ ಅಭಿಪ್ರಾಯ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಮಾತಮಾಡಿ,  ವಿದ್ಯಾರ್ಥಿ ಜೀವನದಲ್ಲಿ ಸಮಯ ಪಾಲನೆ ಅತ್ಯಂತ ಮುಖ್ಯವಾದದ್ದು. ವಿದ್ಯಾರ್ಥಿಗಳು  ಪ್ರಯೋಗಾತ್ಮಕವಾಗಿ ಚಿಂತನೆಯನ್ನು ನಡೆಸಬೇಕು. ಸಂವಹನ, ಸಮಯಪ್ರಜ್ಞೆ ಹಾಗೂ ವಿವಿಧ ಕೌಶಲ್ಯಗಳು ಜೀವನದಲ್ಲಿ ಅತೀ ಮುಖ್ಯವಾದದ್ದು. ಜೊತೆಗೆ ನಮಗೆ ಯಾವ ವಿಷಯದ ಕುರಿತು ಹೆಚ್ಚಿನ ಆಸಕ್ತಿ ಹಾಗೂ ಹಿಡಿತ ಇರುತ್ತದೆಯೋ ಅದರ ಕಡೆಗೆ ಹೆಚ್ಚು ಹೆಚ್ಚು ಒತ್ತನ್ನು ವಿದ್ಯಾರ್ಥಿಗಳು ನೀಡಬೇಕು ಎಂದು ನುಡಿದರು.


ವೇದಿಕೆಯಲ್ಲಿ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್, ಬಂಟ್ವಾಳದ ಕಾರ್ಮೆಲ್ ಸಂಯುಕ್ತ ಪಿಯು ಕಾಲೇಜ್ ಮೋಡಂಕಾಪು ಇಲ್ಲಿನ ಉಪನ್ಯಾಸಕ ಸುಶೀತ್, ಐಕ್ಯೂಎಸಿ ಘಟಕದ ಸಂಯೋಜಕ ಪ್ರೊಫೆಸರ್ ಶಿವಪ್ರಸಾದ್ ಕೆ. ಎಸ್, ಆಡಳಿತ ಮಂಡಳಿಯ ವಿಶೇಷ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರವಿ ಕಲಾ, ತೃತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಆನಂದ್ ಜಿ.ಪ್ರಭು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ತೃತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸ್ವಸ್ತಿ, ದೀಪ್ತಿ ನಿರೂಪಿಸಿ. ಪ್ರಜ್ಞ  ಶೆಣೈ  ಸ್ವಾಗತಿಸಿ, ಅಶ್ವಿನಿ,ಅನುಜ್ಞಾ ಪ್ರಾರ್ಥಿಸಿ. ತೃತೀಯ ವಾಣಿಜ್ಯ ವಿಭಾಗದ ಜ್ಯೋತಿಕ ವಂದಿಸಿದರು.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top