ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು

Upayuktha
0

ಪುತ್ತೂರು: ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಇದರ ಆಶಯದಲ್ಲಿ 66ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ 2022-23 ಕ್ರೀಡಾಕೂಟದಲ್ಲಿ ಪುತ್ತೂರಿನ ಸಂತ ಫಿಲೋಮಿನ ಪದವಿ ಪೂರ್ವ ಕಾಲೇಜಿನ 3 ವಿದ್ಯಾರ್ಥಿಗಳು ಕರ್ನಾಟಕವನ್ನು ಪ್ರತಿನಿಧಿಸಿರುತ್ತಾರೆ.


ದ್ವಿತೀಯ ವಿಜ್ಞಾನ ವಿಭಾಗದ ಮನ್ವಿತ್ ಕಣಜಾಲು 19 ಹರೆಯದ ಕೆಳಗಿನ ಬಾಲಕರ ಚೆಸ್ ಪಂದ್ಯದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರು ಮೊಟ್ಟೆತ್ತಡ್ಕ ನಿವಾಸಿ ದಾಮೋದರ ಕಣಜಾಲು ಮತ್ತು ರಶ್ಮಿ ಪಿ ಎಸ್ ದಂಪತಿಗಳ ಪುತ್ರ. ಇವರಿಗೆ ಸತ್ಯಪ್ರಸಾದ್ ಕೋಟೆ, ಅರವಿಂದ ಶಾಸ್ತ್ರಿ ಮತ್ತು ಜಿಎಂ  ಸ್ಟ್ಯಾನಿ ತರಬೇತಿ ನೀಡಿರುತ್ತಾರೆ.


ದ್ವಿತೀಯ ವಿಜ್ಞಾನ ವಿಭಾಗದ ತೃಪ್ತಿ ಎನ್ 19 ಹರೆಯದ ಕೆಳಗಿನ ಬಾಲಕಿಯರ ಯೋಗ ಸ್ಪರ್ಧೆಯಲ್ಲಿ 7 ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ನವೀನ್ ಬಿ ಕೈಯೂರು ತರಬೇತಿ ನೀಡಿರುತ್ತಾರೆ. ಇವರು ಬೆಳ್ಳಾರೆ ನಿವಾಸಿ ಐತ್ತಪ್ಪ ನಾಯ್ಕ ಮತ್ತು ಪದ್ಮಲ ಕುಮಾರಿ ದಂಪತಿಗಳ ಪುತ್ರಿ.


ದ್ವಿತೀಯ ವಾಣಿಜ್ಯ ವಿಭಾಗದ ವರ್ಷಾ 19 ರ ಹರೆಯದ ಕೆಳಗಿನ ಬಾಲಕಿಯರ ಅಥ್ಲೆಟಿಕ್ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ 7ನೇ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರು ಪಾಂಗ್ಲಾಯಿ ನಿವಾಸಿ ಸುಂದರ ಗೌಡ ಮತ್ತು ವಾರಿಜ ದಂಪತಿಗಳ ಪುತ್ರಿಯಾಗಿರುತ್ತಾರೆ.


ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಎಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top