ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ ಉಡುಪಿ ಜಿಲ್ಲೆ ಇವರ ವತಿಯಿಂದ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಮೇ 22ರಂದು ನಗರಸಭೆಯಲ್ಲಿ ಪೌರಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮ ನಡೆಯಿತು.
ನಗರಸಭೆ ನಿಕಟ ಪೂರ್ವ ಅಧ್ಯಕ್ಷೆ ಸುಮಿತ್ರಾ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕೋಲಜಿಯ ಸೀನಿಯರ್ ರೇಡಿಯೋ ಬಯೋಲೋಜಿಸ್ಟ್ ಮತ್ತು ಸಂಶೋಧನಾ ಮುಖ್ಯಸ್ಥ ಡಾ.ಶ್ರೀನಾಥ್ ಬಾಳಿಗ, ಮಣಿಪಾಲ ಕೆ.ಎಮ್.ಸಿ ಸಮುದಾಯ ಆರೋಗ್ಯ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ಮುರಳೀಧರ್ ಕುಲಕರ್ಣಿ, ಜಿಲ್ಲಾ ಆಸ್ಪತ್ರೆಯ ಹಿರಿಯದಂತ ಆರೋಗ್ಯಾಧಿಕಾರಿ ಡಾ.ಬಿಸು ನಾಯ್ಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಟೊಬ್ಯಾಕೋ ಚಾಂಪಿಯನ್ಸ್ (ತಂಬಾಕು ವ್ಯಸನದಿಂದ ಮುಕ್ತಿಗೊಂಡವರ ಯಶೋಗಾಥೆ) ಎಂಬ ನೂತನ ಕಾರ್ಯಕ್ರಮವನ್ನು ಪರಿಚಯ ಮಾಡುವುದರ ಮೂಲಕ ತಂಬಾಕು ವ್ಯಸನದಿಂದ ಸಂಪೂರ್ಣ ಮುಕ್ತಿಗೊಂಡು ಸ್ವಇಚ್ಛೆಯಿಂದ ಮುಂದೆ ಬಂದವರನ್ನು ಗುರುತಿಸಿ,ತನ್ನ ವ್ಯಸನ ಮುಕ್ತ ಜೀವನದ ಯಶೋಗಾಥೆಯನ್ನು ಹಂಚಿಕೊಳ್ಳಲು ಮುಕ್ತ ಅವಕಾಶ ನೀಡಲಾಯಿತು.
ಜನರಲ್ಲಿ ತಂಬಾಕು ವ್ಯಸನದ ಬಗೆಗಿನ ಅಪನಂಬಿಕೆ ಹೊಗಲಾಡಿಸಿ ಭರವಸೆಯನ್ನು ತುಂಬುವ ಜೊತೆಗೆ ಟೊಬ್ಯಾಕೋ ಚಾಂಪಿಯನ್ಸ್‍ಗಳನ್ನು ಬಳಸಿಕೊಂಡು ಸಮುದಾಯ ಮಟ್ಟದಲ್ಲಿ ನಡೆಸುವ ಆರೋಗ್ಯ ಶಿಬಿರ ಮತ್ತು ಗುಂಪು ಚರ್ಚೆಗಳಲ್ಲಿ ಜನರಿಗೆ ಭರವಸೆಮೂಡಿಸಿ, ಹೆಚ್ಚಿನ ವ್ಯಸನಿಗಳ ಮನ ಪರಿವರ್ತನೆ ಮಾಡುವ ಜೊತೆಗೆ ಅಗತ್ಯವಿರುವವರಿಗೆ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ಲಭ್ಯವಿರುವ ಉಚಿತ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಯ ಸದುಪಯೋಗವನ್ನು ಬಳಸಿಕೊಳ್ಳುವಂತೆ ಮಾಡಿ, ಈ ಯೋಜನೆಯನ್ನು ಜಿಲ್ಲೆಯಾದ್ಯಾಂತ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕವು ಕಾರ್ಯಪ್ರವೃತವಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ