ಯುವ ಮತದಾರರೇ ಪ್ರಬುದ್ಧ ಸರ್ಕಾರದ ರೂವಾರಿಗಳು: ಪ್ರೊ. ಶೆಟ್ಟಿ

Upayuktha
0

ಉಡುಪಿ: ಪ್ರತಿಯೊಬ್ಬ ಯುವ ಮತದಾರರು ಜಾಗೃತ ಮನಸ್ಸಿನಿಂದ ಮತ ಚಲಾಯಿಸ ಬೇಕು. ಜನಪ್ರತಿನಿಧಿಗಳ ಆಹ೯ತೆ ಯೇೂಗ್ಯತೆಯನ್ನು ಅಳೆದು ತೂಗಿ ಮತ ಚಲಾಯಿಸಿದಾಗ ಉತ್ತಮ ಅಭ್ಯರ್ಥಿಗಳು ಆಯ್ಕೆಯಾಗಿ ಬರಲು ಸಾಧ್ಯ. ಅದಕ್ಕೆ ಹೇಳುವುದು ಆಂತಯ೯ ಜಾಗೃತಿಯೇ ಪ್ರಜಾಪ್ರಭುತ್ವದ ಮೌಲ್ಯ. ಅದರಲ್ಲೂ ಮುಖ್ಯವಾಗಿ ಯುವ ಮಹಿಳಾ ಮತದಾರರ ಭಾಗವಹಿಸುವಿಕೆ ಪ್ರಜಾಪ್ರಭುತ್ವದ ಘನತೆ ಗೌರವ ಶಿಸ್ತನ್ನು ಇನ್ನಷ್ಟು ಉದ್ದೀಪನಗೊಳಿಸುತ್ತದೆ" ಎಂದು ರಾಜಕೀಯ ವಿಶ್ಲೇಷಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಿಸಿದರು.


ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೇೂರ್ಚಾ ವೇದಿಕೆ ಯುವ ಮಹಿಳಾ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ಉಪನ್ಯಾಸಕರಾಗಿ ಮಾತನಾಡಿದರು.


ಉಡುಪಿ ಜಿಲ್ಲಾ ರಾಜಕೀಯ ಇತಿಹಾಸದಲ್ಲಿ ಇದೊಂದು ವಿನೂತನ ಪ್ರಯೇೂಗಾತ್ಮಕ ಕಾರ್ಯಕ್ರಮವಾಗಿತ್ತು. ಸುಮಾರು ಇನ್ನೂರಕ್ಕೂ ಹೆಚ್ಚು ನವ ಯುವ ಮಹಿಳಾ ಮತದಾರರು ಉಪನ್ಯಾಸ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಉಡುಪಿ ಬಿಜೆಪಿ ಮಹಿಳಾ ಮೇೂರ್ಚಾದ ಅಧ್ಯಕ್ಷೆ ವೀಣಾ  ಶೆಟ್ಟಿ ಈ ವಿನೂತನ ಕಾರ್ಯಕ್ರಮ ಸಂಘಟಿಸಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top