ವಿಟ್ಲ: ಕಳೆದ ಐದು ವರ್ಷಗಳಿಂದ ವಿಟ್ಲದ ಎಂಪಾಯರ್ ಮಾಲ್‌ನಲ್ಲಿ ವ್ಯವಹಾರ ನಡೆಸುತ್ತಿದ್ದ ಸಪ್ತ ಜ್ಯುವೆಲ್ಸ್ ಆಭರಣ ಮಳಿಗೆ ಇದೀಗ ಮುಖ್ಯ ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಸಂಕೀರ್ಣದ ಹವಾನಿಯಂತ್ರಿತ ಸುಸಜ್ಜಿತ ನೂತನ ಮಳಿಗೆಗೆ ಸ್ಥಳಾಂತರಗೊಳ್ಳಲು ಸಜ್ಜಾಗಿದೆ.
ಜೂನ್ 5ರಂದು ಬೆಳಗ್ಗೆ 9:30ರ ಕರ್ಕಾಟಕ ಲಗ್ನ ಸುಮುಹೂರ್ತದಲ್ಲಿ ಸಪ್ತ ಜ್ಯುವೆಲ್ಸ್ ನೂತನ ಮಳಿಗೆಯಲ್ಲಿ ಕಾರ್ಯಾರಂಭ ಮಾಡಲಿದೆ.
ಬೆಳಗ್ಗೆ 7:30ರಿಂದ ಗಣಪತಿ ಹೋಮ, ಲಕ್ಷ್ಮೀಪೂಜೆ ನಡೆಯಲಿದೆ. ಬಳಿಕ 9:30ಕ್ಕೆ ವಿಟ್ಲ ಅರಮನೆಯ ಬಂಗಾರು ಅರಸರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಮುಳಿಯ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಕೇಶವ ಪ್ರಸಾದ್ ಮುಳಿಯ ಅವರು ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಟ್ಲ ಪೊಲೀಸ್ ನಿರೀಕ್ಷಕ ಎಚ್.ಇ. ನಾಗರಾಜ, ಶ್ರೀ ಚಂದ್ರನಾಥ ದೇವರ ಬಸದಿಯ ಆಡಳಿತದಾರ ವಿನಯ ಕುಮಾರ್ ಡಿ, ಬಾವಾ ಬಿಲ್ಡರ್‌ನ ಪ್ರಮೋಟರ್ ಅಬ್ದುಲ್ ಖಾದರ್ ಬಾವಾ ಮತ್ತು ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಗೋಪಾಲ ನಾಯಕ್ ಅವರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಅಜಕ್ಕಳ ಶ್ಯಾಮ ಭಟ್, ಸುದರ್ಶನ್ ಕುಮಾರ್ ಇರ್ಕಲಾಜೆ, ಶಿವಪ್ರಕಾಶ್ ಪಂಜಿಬಲ್ಲೆ, ದೇವಿಪ್ರಸಾದ್ ಚಂಗಲ್ಪಾಡಿ, ನಿಶಾ ಪ್ರಶಾಂತ ಸರಳಾಯ, ಕೃಷ್ಣಪ್ರಸಾದ್ ಕಡವ, ಗೋವಿಂದರಾಜ ಕಲ್ಲಮಜಲು ಹಾಗೂ ಸುಕುಮಾರ ಕಲ್ಲಮಜಲು ಅವರು ಸಪ್ತ ಜ್ಯುವೆಲ್ಸ್ ಪಾಲುದಾರರಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ