ಉಜಿರೆ: ಎಸ್. ಡಿ. ಎಂ ನ ನವೀಕೃತ ಡೀನ್ ಚೇಂಬರ್ ಗೆ ಚಾಲನೆ

Upayuktha
0

 

ಉಜಿರೆ: ಉಜಿರೆಯ ಎಸ್. ಡಿ .ಎಂ. ಸ್ನಾತ್ತಕೋತ್ತರ ಕೇಂದ್ರದ ನವೀಕೃತ ಡೀನ್ ಚೇಂಬರನ್ನು ಎಸ್. ಡಿ. ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ . ಹರ್ಷೇಂದ್ರ ಕುಮಾರ್ ಉದ್ಘಾಟಿಸಿದರು.


ಕಳೆದ ಎರಡು ತಿಂಗಳುಗಳಿಂದ ಡೀನ್ ಚೇಂಬರಿಗೆ ಹೊಸ ಕಾಯಕಲ್ಪ ನೀಡುವ ಕಾಮಗಾರಿ ಚಾಲ್ತಿಯಲ್ಲಿತ್ತು. ಕಾಮಗಾರಿ ಪೂರ್ಣಗೊಂಡು ಸುಸಜ್ಜಿತ ವಿನ್ಯಾಸದೊಂದಿಗೆ ಮರುರೂಪುಗೊಂಡ ಡೀನ್ ಚೇಂಬರ್ ಗೆ ಡಿ.ಹರ್ಷೇಂದ್ರ ಕುಮಾರ್ ಬುಧವಾರ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಸ್ನಾತ್ತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ .ಪಿ ಅವರಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು . ಸ್ನಾತಕೋತ್ತರ ಕೇಂದ್ರದ ಬೆಳವಣಿಗೆಗೆ ಸಂಬಂಧಿಸಿದ ಮಹತ್ವದ ನಿರ್ಣಯಗಳ ನೆಲೆಯಾಗಿ ಡೀನ್ ಚೇಂಬರ್ ಹೆಗ್ಗುರುತು ಮೂಡಿಸಲಿ ಎಂದು ಆಶಿಸಿದರು.ಡೀನ್ ಚೇಂಬರ್ ಕಡೆಗೆ ಸಮಸ್ಯೆಗಳನ್ನು ನಿವೇದಿಸಿ ಕೊಂಡು ಬರುವವರಿಗೆ ಪರಿಹಾರ ಸಿಗಲಿ, ಈ ಮೂಲಕ ಉನ್ನತ ಶಿಕ್ಷಣ ದ ಗುಣಮಟ್ಟ ಹೆಚ್ಚಿಸುವ ಕೊಡುಗೆಗಳನ್ನು ನೀಡಲಿ ಎಂದು ಹೇಳಿದರು.


ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ , ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ್ ಹೆಗ್ಡೆ ಬಿ. ಎ ,ಸ್ನಾತ್ತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ್ ಪಿ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಭಟ್ ನಿರೂಪಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top