ಉಡುಪಿ ತ್ರಿಶಾ ಕಾಲೇಜಿನಲ್ಲಿ ಮತದಾರರ ಅರಿವು ಕಾರ್ಯಕ್ರಮ

Upayuktha
1 minute read
0

ಉಡುಪಿ: ಕಟಪಾಡಿಯ ತ್ರಿಶಾ ಕಾಲೇಜಿನಲ್ಲಿ ಶುಕ್ರವಾರ (ಮೇ5) ಯುವ ಮತದಾರರ ಅರಿವು ಮಾಹಿತಿ ಕಾರ್ಯಕ್ರಮ ನಡೆಯಿತು. ಮಾತುಕತೆ, ಚಚೆ೯, ಸಂವಾದಗಳು ನಡೆದವು. ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ಪ್ರೊ.ಗುರುಪ್ರಸಾದ್ ವಹಿಸಿದ್ದರು.


ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ. ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಭಾಗವಹಿಸಿದರು. ಬಹು ಅಮೌಲ್ಯವಾದ ಪ್ರಶ್ನೆಗಳು ವಿದ್ಯಾರ್ಥಿಗಳಿಂದ ಹರಿದು ಬಂದವಉ.


1. ಮತದಾರರಿಗೆ ಮತದಾನ ಮಾಡಲು ಒಂದು ಕಡೆ ಮಾತ್ರ ಅವಕಾಶ. ಆದರೆ ಸ್ಪರ್ಧಿಸುವ ಅಭ್ಯರ್ಥಿಗಳು ಎರಡು ಕಡೆ ಯಾಕೆ ಅವಕಾಶ ಮಾಡಿಕೊಡಬೇಕು?

2. ಸುಶಿಕ್ಷಿತರು, ಪ್ರಾಮಾಣಿಕರು ರಾಜಕೀಯದಲ್ಲಿ ಯಾಕೆ ಆಸಕ್ತಿ ವಹಿಸುವುದಿಲ್ಲ? ಗೆದ್ದು ಬರುವುದು ಕಷ್ಟವಾಗಬಹುದೆ?

3.ತಪ್ಪು ಮಾಡಿ ಜೈಲಿನಲ್ಲಿ ಇದ್ದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇದೆ. ಆದರೆ ಮತದಾನಕ್ಕೆ ಯಾಕೆ ವ್ಯವಸ್ಥೆ ಮಾಡಿಕೊಡಲಿಲ್ಲ?

4. ನೀತಿ ಸಂಹಿತೆ ಮುರಿದರೆ ಎಫ್‌ಐಆರ್ ಹಾಕಿ ಶಿಕ್ಷೆ ಆದ ಉದಾಹರಣೆಗಳು ಇವೆಯೆ?

5. ಪಕ್ಷ ಚೆನ್ನಾಗಿದೆ ಅಭ್ಯರ್ಥಿ ಚೆನ್ನಾಗಿಲ್ಲ. ನಾವು ಯಾವುದನ್ನು ಆಯ್ಕೆ ಮಾಡಬೇಕು?

6. ಆನ್‌ಲೈನ್ ಮತದಾನ ವ್ಯವಸ್ಥೆ ಯಾಕೆ ತರಬಾರದು?

7. ನಮ್ಮ ರಾಜಕಾರಣಿಗಳಿಗೆ ತರಬೇತಿ ನೀಡುವ ಸಂಸ್ಥೆಗಳನ್ನು ಯಾಕೆ ಸ್ಥಾಪಿಸಬಾರದು?


ಇಂತಹ ಪ್ರಶ್ನೆಗಳ ಸುರಿಮಳೆ ಯುವ ಮತದಾರರಿಂದ ತೂರಿಬಂದವು. ಕನ್ನಡ ಉಪನ್ಯಾಸಕ ಧೀರಜ್ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top