'ದಿ ವಿಕ್ಟರಿ ಆಫ್ ಸುದರ್ಶನ'- ಇಂಗ್ಲಿಷ್ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ

Upayuktha
0

  ‌‌ 

ಕಾಸರಗೋಡು: ಹೈದರಾಬಾದ್ ಮೂಲದ ಇಂಡಿಯಾ ಪಿ ಎಸ್ ಸಿ ಆಫ್ ಸೈಟ್ ಕಾನ್ಫರೆನ್ಸ್ - 2023 ಬೇಕಲದ ತಾಜ್ ರೆಸಾರ್ಟ್ ನಲ್ಲಿ ಇತ್ತೀಚೆಗೆ (ಮೇ 23) ಜರಗಿತು.  ಈ ಸಂದರ್ಭದಲ್ಲಿ ಮಂಗಳೂರಿನ ತೋನ್ಸೆ ಯಕ್ಷ ಬಳಗದಿಂದ ಇಂಗ್ಲಿಷ್ ಭಾಷೆಯಲ್ಲಿ 'ದಿ ವಿಕ್ಟರಿ ಆಫ್ ಸುದರ್ಶನ' (ಸುದರ್ಶನ  ವಿಜಯ) ತೆಂಕುತಿಟ್ಟು  ಯಕ್ಷಗಾನವನ್ನು ಪ್ರದರ್ಶಿಸಲಾಯಿತು. ಶ್ಯಾಡ್ಸ್ ಈವೆಂಟ್ಸ್ ಅವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರು ಭಾಗವಹಿಸಿದ್ದರು.                     


ಕಾರ್ಯಕ್ರಮದಲ್ಲಿ  ಭಾಗವತರಾಗಿ ತೋನ್ಸೆ ಪುಷ್ಕಳ ಕುಮಾರ್, ಹಿಮ್ಮೇಳದಲ್ಲಿ ಶರತ್ ಕುಮಾರ್ ಕದ್ರಿ, ಸುದಾಸ್  ಕಾವೂರು ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಪಾಲ್ಗೊಂಡರು. ಮುಮ್ಮೇಳದಲ್ಲಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ದೇವೇಂದ್ರ), ಡಾ.ದಿನಕರ ಎಸ್.ಪಚ್ಚನಾಡಿ (ಸುದರ್ಶನ ) ಮತ್ತು ಶರತ್ ಪಣಂಬೂರು (ಶತ್ರು ಪ್ರಸೂದನ) ಪಾತ್ರ ವಹಿಸಿದರು.


ತಂಡದ ಬಗ್ಗೆ ಪರಿಚಯ ನೀಡಿದ ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ ಕರಾವಳಿಯ ಸಾಂಪ್ರದಾಯಿಕ ಯಕ್ಷಗಾನ ಕಲೆಯ ಮಹತ್ವವನ್ನು ತಿಳಿಸಿ ಆಯ್ದುಕೊಂಡ ಪ್ರಸಂಗದ ಕಥಾಸಾರವನ್ನು ಆಂಗ್ಲ ಭಾಷೆಯಲ್ಲಿ ವಿವರಿಸಿದರು. ಪಿ ಎಸ್ ಸಿ ಮುಖ್ಯಸ್ಥರು ಮತ್ತು ಕಂಪೆನಿಯ ಹಲವಾರು ಪ್ರತಿನಿಧಿಗಳು ಯಕ್ಷಗಾನವನ್ನು ವೀಕ್ಷಿಸಿ ಕಲಾವಿದರನ್ನು ಅಭಿನಂದಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top