ನಿಟ್ಟೆ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮೇ 20 ರಿಂದ 24ರವರೆಗೆ ನಡೆದ 24ನೇ ರಾಜ್ಯಮಟ್ಟದ ಅಥ್ಲೆಟಿಕ್ ಚ್ಯಾಂಪಿಯನ್ಶಿಪ್ ನಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಅಥ್ಲೆಟಿಕ್ ಪುರುಷರ ತಂಡವು 7 ಚಿನ್ನದ ಪದಕ, 8 ಬೆಳ್ಳಿಪದಕ ಹಾಗೂ 5 ಕಂಚಿನ ಪದಕಗಳನ್ನು ಗಳಿಸಿ ಶ್ರೇಷ್ಠ ತಂಡ ಪ್ರಶಸ್ತಿ ಗಳಿಸಿದೆ.
ನಿಟ್ಟೆ ಕಾಲೇಜಿನ ಪುರುಷರ ಹಾಗೂ ಮಹಿಳಾ ತಂಡಗಳು ಸಮಗ್ರ ಪ್ರಶಸ್ತಿಗಳ ಪೈಕಿ ಎರಡನೇ ಸ್ಥಾನವನ್ನು ಗಳಿಸಿದೆ ಹಾಗೂ ಮಾರ್ಚ್ ಫಾಸ್ಟ್ ನಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ