ಬೆಂಗಳೂರು: ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರಿ ಸ್ವೀಕರಿಸಿರುವ ಸಿದ್ದರಾಮಯ್ಯ ಅವರನ್ನು ವರುಣಾ ಕ್ಷೇತ್ರದಲ್ಲಿ ಗೆಲ್ಲಿಸಿದ ರಣತಂತ್ರದ ಹಿಂದಿನ ತಂಡ ಯಾವುದು ಗೊತ್ತೇ...? ಬೆಂಗಳೂರಿನ ಹೆಸರಾಂತ ಸಾರ್ವಜನಿಕ ಸಂಪರ್ಕ ಸಂಸ್ಥೆ (ಎಂಜೆಎಸ್‌ಪಿಅರ್)ಯ ನಿರ್ದೇಶಕರು ಹಾಗೂ ರಾಜಕೀಯ ಸ್ಟ್ರಾಟಜಿಸ್ಟ್ ಆಗಿರುವ ಎಂ.ಜೆ ಶ್ರೀಕಾಂತ್ ಮತ್ತು ಅವರ ನೇತೃತ್ವದ ತಂಡ. ತಮ್ಮ ರಣತಂತ್ರ ಯಶಸ್ವಿಯಾಗಿರುವ ಬಗ್ಗೆ ಮಾಧ್ಯಮ ಪ್ರಕಟೆಯ ಮೂಲಕ ಸಂತಸ ಹಂಚಿಕೊಂಡಿರುವ ಅವರು, ತಮ್ಮ ಕಾರ್ಯತಂತ್ರದ ಮಾಹಿತಿ ನೀಡಿದ್ದಾರೆ.
'ನಾನು ಮತ್ತು ನನ್ನ ಎಂಜೆಎಸ್ಪಿಆರ್ ತಂಡ, ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಕೊನೆಯ ಹಂತದ ಚುನಾವಣಾ ಪ್ರಚಾರದ ಭಾಗವಾಗಿದ್ದೆವು. ಅಂತಿಮ ಹಂತದ ಪ್ರಚಾರ ಬಿರುಸಿನಿಂದ ಕೂಡಿದ್ದು, ಅತ್ಯಂತ ನಿರ್ಣಾಯಕವಾಗಿತ್ತು. ತಿಪಟೂರಿನ ಕಾಂಗ್ರೆಸ್ ಮುಖಂಡ ಶ್ರೀ ಸಿ. ಬಿ. ಶಶಿಧರ್ ಅವರು, ನನ್ನ ಮುಂದಾಳತ್ವದ ಎಂಜೆಎಸ್ಪಿಆರ್ ರಾಜಕೀಯ ವಾರ್ ರೂಂ ಪರಿಣತಿಯ ಸಾಮರ್ಥ್ಯವನ್ನು ಗುರುತಿಸಿ, ರಾಜಕೀಯ ತಂತ್ರಜ್ಞರಾಗಿ ನಮ್ಮನ್ನು ಪ್ರಚಾರಕ್ಕೆ ಕರೆತಂದು ವರುಣಾ ಕ್ಷೇತ್ರದ ವಾರ್ ರೂಂ ಜವಾಬ್ದಾರಿ ವಹಿಸಿದರು.
ಚುನಾವಣೆಯಲ್ಲಿ ಅಭ್ಯರ್ಥಿಯ ಗೋಚರತೆ/ ಇರುವಿಕೆ ಹೆಚ್ಚಿಸಲು ಕಾರ್ಯತಂತ್ರಗಳನ್ನು ರೂಪಿಸುವುದರ ಜೊತೆಗೆ, ನಾವು ಮೈಸೂರಿನಲ್ಲಿ ವಾರ್ ರೂಂ ತೆರೆದು, ಸಮರ್ಥ ತಂಡವನ್ನು ನಿರ್ಮಿಸಿ, ಆನ್ ಲೈನ್ ಮತ್ತು ಆಫ್ ಲೈನ್ ಪ್ರಚಾರಗಳನ್ನು ಚುರುಕಾಗಿಸಿದೆವು. ಮೊದಲು ದುರ್ಬಲ ಬೂತ್ ಗಳನ್ನು ಗುರುತಿಸಿ, ನಂತರ ನಮ್ಮ ಒಟ್ಟಾರೆ ಕಾರ್ಯತಂತ್ರಗಳನ್ನು ಸಂಪೂರ್ಣವಾಗಿ ಅಲ್ಲಿಯೇ ಕೇಂದ್ರೀಕರಿಸಿದೆವು. ಮತ್ತು ಈ ಮತಗಟ್ಟೆಗಳಲ್ಲಿ ನಿರ್ದಿಷ್ಟವಾಗಿ ಮತ ಪ್ರಮಾಣವನ್ನು ಹೆಚ್ಚಿಸಲು ಪ್ರಚಾರ ಮಾಡಿದೆವು. ವರುಣಾ ಕ್ಷೇತ್ರದ ವಾರ್ ರೂಂನಲ್ಲಿ ಕೆಲಸ ಮಾಡುವುದು ನಮಗೆಲ್ಲ ಒಂದು ದೊಡ್ಡ ಕಲಿಕೆಯಾಗಿತ್ತು, ಏಕೆಂದರೆ ಅಲ್ಲಿ ಅಭ್ಯರ್ಥಿ ಬೇರೆ ಯಾರೂ ಅಲ್ಲ, ಸಿದ್ದರಾಮಯ್ಯ ಅವರು. ಪ್ರಸ್ತುತ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ನೋಡುತ್ತಿರುವುದು ನಮಗೆ ಹೆಮ್ಮೆ' ಎಂದು ಶ್ರೀಕಾಂತ್ ಹೇಳಿದ್ದಾರೆ.
ವಿಳಾಸ:
ಎಂ ಜೆ ಶ್ರೀಕಾಂತ್
ಪೊಲಿಟಿಕಲ್ ಸ್ಟ್ರ್ಯಾಟಜಿಸ್ಟ್,
ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ, MJSPR Pvt. Ltd.,
ಮೊ: 9845115065
ಇಮೇಲ್: mjsrikant@mjspr.com
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ