ತೆಂಕನಿಡಿಯೂರು: ರೋವರ್ ರೆಂಜರ್ಸ್ ಮಾಹಿತಿ ಕಾರ್ಯಾಗಾರ, ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ರಮ

Upayuktha
0

   


ತೆಂಕನಿಡಿಯೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ರೋವರ್ಸ್ ರೇಂಜರ್ಸ್ ಘಟಕದ ಆಶ್ರಯದಲ್ಲಿ ರೋವರ್ ರೇಂಜರ್ಸ್ ಮಾಹಿತಿ ಕಾರ್ಯಾಗಾರ ಹಾಗೂ ಪಕ್ಷಿಗಳಿಗೆ ನೀರುಣಿಸುವ ಪರಿಸರ ಕಾಳಜಿಯ ಕಾರ್ಯಕ್ರಮವು ನಡೆಯಿತು. ಭಾರತ್ ಸ್ಕೌಟ್ ಮತ್ತು ಗೈಡ್ಸ್  ಕರ್ನಾಟಕ ಇದರ ಉಡುಪಿ ಜಿಲ್ಲಾ ಸಂಸ್ಥೆಯ ಸ್ಕೌಟ್ಸ್ ಸಹಾಯಕ ಆಯುಕ್ತರಾದ ವಿತೇಶ್ ಕಾಂಚನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. 


ಅವರು ಸ್ಕೌಟ್ ಕೌಶಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಮಾತನಾಡುತ್ತಾ, “ಸ್ಕೌಟಿಂಗ್ ಯುವಜನತೆಯ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಶಿಸ್ತು, ಸಮಯಪ್ರಜ್ಞೆ, ಸಹಜೀವನ, ಪರಿಸರ ಪ್ರೀತಿ ಇಂತಹ ಹಲವಾರು ಅಂಶಗಳನ್ನು ಅಳವಡಿಸಿಕೊಂಡಾಗ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ” ಎಂದರು. 


ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ. ಕೆ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ “ವಿದ್ಯಾರ್ಥಿಗಳು ಅಧ್ಯಯನದ ಸಂದರ್ಭದಲ್ಲಿ  ಸಿಗುವ ಎಲ್ಲಾ ಅವಕಾಶಗಳನ್ನು ಹಾಗೂ ಅನುಭವಗಳನ್ನು ಪಡೆದುಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದಾಗ ದೇಶದ ಅಭಿವೃದ್ಧಿ ಸಾಧ್ಯ.  ಕಾಲೇಜಿನ ರೋವರ್ ರೆಂಜರ್ ವಿದ್ಯಾರ್ಥಿಗಳು ಪರಿಸರ ಪ್ರೇಮ ಹಾಗೂ ಸಮಾಜ ಸೇವೆಗೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡುತ್ತಿರುವುದು ಅಭಿನಂದನಾರ್ಹ ಎಂದರು. 


ಈ ಕಾರ್ಯಗಾರದ ನಂತರ ಬಿಸಿಲಿನ ಬೇಗೆಯ ಸಂದರ್ಭದಲ್ಲಿ ಬಸವಳಿವ ಪಕ್ಷಿಗಳಿಗೆ ಕುಡಿಯುವ ನೀರು ಹಾಗೂ ಅಹಾರದ ವ್ಯವಸ್ಥೆಯನ್ನು ಕಾಲೇಜಿನ ವಟಾರದಲ್ಲಿ ಸ್ಥಾಪಿಸಲಾಯಿತು. ಆ ಮೂಲಕ ರೊವರ್ ರೇಂಜರ್ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯ ಮಹತ್ವವನ್ನು ತಿಳಿಸಲಾಯಿತು. ಕಾಲೇಜಿನ ರೋವರ್ಸ್ ಸ್ಕೌಟ್ ಲೀಡರ್ಸ್ ಡಾ. ಉದಯ ಶೆಟ್ಟಿ ಕೆ ಕಾರ್ಯಕ್ರಮವನ್ನು ಸಂಯೋಜಿಸಿದರು. ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಶ್ರೀಮತಿ ಬಿಂದು ಟಿ, ಡಾ. ಮೇವಿ ಮಿರಾಂದ ಹಾಗೂ ಡಾ. ರಘ ನಾಯ್ಕ್ ಉಪಸ್ಥಿತರಿದ್ದರು. ರೋವರ್ ವಿದ್ಯಾರ್ಥಿ ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ವಲ್ ಜತ್ತನ್ ವಂದಿಸಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top