ಗಮನ ಸೆಳೆದ ರಾಜ್ಯಮಟ್ಟದ ಆನ್ಲೈನ್ ಜಾನಪದ ಗೀತೆ ಸ್ಫರ್ಧೆ

Upayuktha
0

ಹಾಸನ: ಜನಪದ ಮಾನವ ಸಂಸ್ಕೃತಿಯ ಜೀವಾಳ. ಕಲಾವಿದರು ಪೂರ್ವಭಾವಿ ಅಭ್ಯಾಸ ಮಾಡಿ ಸ್ಫರ್ಧೆಗೆ ತಯರಾಗುವುದು ಒಳಿತು. ಕೆಲವು ಲೋಪದೋಷಗಳ ನಡುವೆಯೂ ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿದೆ ಎಂದು ಚಂದ್ರಶೇಖರ ಹಡಪದ ಹೇಳಿದರು. 


ಅವರು ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಇವರು ಆಯೋಜಿಸಿದ್ದ ರಾಜ್ಯ ಮಟ್ಟದ ಆನ್ಲೈನ್ ಜಾನಪದ ಗೀತ ಗಾಯನ ಸ್ಫರ್ಧೆ  ಕಾರ್ಯಕ್ರಮ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.


ಲೇಖಕ ಗೊರೂರು ಅನಂತರಾಜು ಮಾತನಾಡಿ, ಸಂಘದ ರಾಜ್ಯಾಧ್ಯಕ್ಷ ಮಧು ನಾಯ್ಕ್ ಅವರ ಕ್ರಿಯಾಶೀಲ ಚಟುವಟಿಕೆಯಲ್ಲಿ  ಹಲವಾರು ಯಶಸ್ವಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ. ದಾವಣಗೆರೆಯಲ್ಲಿ ಗಿನ್ನಿಸ್ ದಾಖಲೆ ಮಾಡಲು ನೂರು ಪುಸ್ತಕಗಳ ಬಿಡುಗಡೆಗೆ ಸಿದ್ಧತೆ ನಡೆದಿದೆ. ಜಿಲ್ಲಾ ಘಟಕಗಳು ತಮ್ಮ ವ್ಯಾಪ್ತಿಯಲ್ಲಿ  ಹಲವು ಬಗೆಯಲ್ಲಿ ಕಾರ್ಯಕ್ರಮ ರೂಪಿಸಿ ಸಂಘಟನೆ ಬೆಳೆಸುವಲ್ಲಿ ಕೈ ಜೋಡಿಸಬೇಕೆಂದರು. ನರ್ಸಿಂಗ್ ಲಮಾಣಿ ಸಾಹಿತಿಗಳಿಗೆ ಬರೆಯಲು ಪ್ರೇರಣೆ ನೀಡುವಲ್ಲಿ ಸಂಘ ಉತ್ತಮ ಹೆಜ್ಜೆ ಹಾಕಿದೆ ಎಂದರು. ಧರ್ಮಣ್ಣ ಹಚ್. ದನ್ನಿ ಜನಪದ ಜನರ ಬಾಯಿಯಿಂದ ಬಾಯಿಗೆ ಬೆಳೆದು ಬಂದಿದ್ದು ಇದು ಬದುಕಿನ ಸಾಕಾರ ಸಾರುತ್ತದೆ ಎಂದರು.


 ಶ್ರೀಮತಿ ಪುಷ್ಪ ಕೃಷ್ಣ ಅಮೇರಿಕ, ರಾಮು ಎನ್ ರಾಠೋಡ್ ಮಸ್ಕಿ ಇದ್ದರು. ವಿದುಷಿ ಡಾ.ರಮ್ಯ ಸೂರಜ್ ಬೆಂಗಳೂರು ಹಾಗೂ ಸರಿಗಮಪ ಝಿ ಟಿವಿ ಸರ್ವಜ್ಞ ರಾಠೋಡ್ ಅವರು ತೀರ್ಪುಗಾರರಾಗಿದ್ದರು. ಗೋಪಾಲ ನಾಯ್ಕ್ ಕುಷ್ಟಗಿ ನಿರೂಪಿಸಿ ರಾಜ್ಯಾಧ್ಯಕ್ಷ ಮಧು ನಾಯ್ಕ್ ಲಂಬಾಣಿ ವಂದಿಸಿದರು. ಕಲಾಶ್ರೀ ಹಾದಿಮನಿ ಪ್ರಾರ್ಥಿಸಿದರು.


ವಿಜೇತರು: ಪ್ರಥಮ ದೇವು ಆರ್., ದ್ವಿತೀಯ ಕುಮಾರಸ್ವಾಮಿ ಹಿರೇಮಠ್, ತೃತೀಯ ರಾಜಲಕ್ಷ್ಮಿ ಭಟ್ ಹಾಗೂ ಕಸ್ತೂರಿ ಬಾಯಿ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top