ಶ್ರೀನಿವಾಸ ಯುನಿವರ್ಸಿಟಿ: ಬಿ.ಕಾಂ, ಬಿಬಿಎ ವಿದ್ಯಾರ್ಥಿಗಳ ಕೈಗಾರಿಕಾ ಭೇಟಿ

Upayuktha
0


ಮಂಗಳೂರು: ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಕಾಮರ್ಸ್ ಮೊದಲ ವರ್ಷದ ಬಿಕಾಂ (HN, CMA, ಮತ್ತು ACCA) ವಿದ್ಯಾರ್ಥಿಗಳಿಗೆ ಕುಲಶೇಖರದಲ್ಲಿರುವ ನಂದಿನಿ KMF ಹಾಲು ಉತ್ಪಾದಕ ಉದ್ಯಮಕ್ಕೆ ಎರಡನೇ ವರ್ಷದ BBA (HN, HA, CMA, PA, ಮತ್ತು IB) ಗಾಗಿ ಬೈಕಂಪಾಡಿಯಲ್ಲಿರುವ ಅಚಲ್ ಗೋಡಂಬಿ ಉದ್ಯಮಕ್ಕೆ ಕೈಗಾರಿಕಾ ಭೇಟಿಯನ್ನು ಆಯೋಜಿಸಲಾಯಿತು.


ಮೊದಲ ವರ್ಷದ BBA (HN & HA) ವಿದ್ಯಾರ್ಥಿಗಳು ಮಾರ್ನಮಿಕಟ್ಟೆ, ಜೆಪ್ಪಿನಮೊಗರು ಕೆನರಾ ಪ್ಲೈವುಡ್ ಉದ್ಯಮಕ್ಕೆ. ಭೇಟಿ ನೀಡಿದರು. 


ವೀಕ್ಷಣಾ ಕಲಿಕೆಯ ಸರಣಿಯ ಭಾಗವಾಗಿ, ವಿದ್ಯಾರ್ಥಿಗಳಿಗೆ ಒಂದು ವಾರದ ಅವಧಿಯ ಉದ್ಯಮ ಭೇಟಿಗಳ ಮೂಲಕ ಕೈಗಾರಿಕಾ ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.


ಈ ಕೈಗಾರಿಕಾ ಭೇಟಿಯನ್ನು ಡೀನ್ ಡಾ.ಕೀರ್ತನ್ ರಾಜ್,  ಬಿಕಾಂ ವಿಭಾಗದ ಮುಖ್ಯಸ್ಥರಾದ ಪ್ರೊ. ಶರ್ಮಿಳಾ ಶೆಟ್ಟಿ , ಬಿಬಿಎ ಎಚ್‌ಒಡಿ ಪ್ರೊ.ಶಿಲ್ಪಾ ಕೆ ಮತ್ತು ಕೈಗಾರಿಕಾ ಕೋ-ಆರ್ಡಿನೇಟರ್‌ಗಳಾದ ಪ್ರೊ.ಅಕ್ಷತಾ ವೈ ಮತ್ತು ಪ್ರೊ.ರಂಜಿತ್ ಭಟ್ ಅವರ ಮಾರ್ಗದರ್ಶನದಲ್ಲಿ  ನಡೆಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top