ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಪೋರ್ಟ್ ಶಿಪ್ಪಿಂಗ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್ (IPSSM)- BBA ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್ & ಪೋರ್ಟ್ ಶಿಪ್ಪಿಂಗ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗಾಗಿ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಮೇ 16ರಂದು ಆಯೋಜಿಸಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಐಎಂಸಿ ವಿಭಾಗದ ಪ್ರೊ.ವೆಂಕಟೇಶ್ ಅಮೀನ್ ಅವರು ಪಾಲ್ಗೊಂಡಿದ್ದರು. ಐಪಿಎಸ್‌ಎಸ್‌ಎಂ ವಿಭಾಗದ ಮುಖ್ಯಸ್ಥರಾದ ಪ್ರೊ. ನೆಲ್ಸನ್ ಪಿರೇರಾ ಅತಿಥಿಗಳನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
'ಲೀಡರ್‌ಶಿಪ್ ಸ್ಕಿಲ್ಸ್' (ನಾಯಕತ್ವದ ಕೌಶಲ್ಯ) ವಿಷಯದ ಕುರಿತು ಪ್ರೊ ಅಮೀನ್ ಉಪನ್ಯಾಸ ನೀಡಿದರು. ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ತರಗತಿಯನ್ನು ಆಸಕ್ತಿದಾಯಕವಾಗಿ ನಡೆಸಿಕೊಟ್ಟ್ರರು. ತಂಡದ ಕೆಲಸ, ನಾಯಕತ್ವದ ಮಹತ್ವವನ್ನು ಅರಿತುಕೊಳ್ಳುವಂತೆ ಮಾಡಿದರು ಮತ್ತು ಪ್ರಸ್ತುತ ಲಾಜಿಸ್ಟಿಕ್ಸ್ ಪ್ರವೃತ್ತಿ ಕುರಿತು ವಿಶೇಷ ಮಾಹಿತಿ ನೀಡಿದರು.
ಈ ಅಧಿವೇಶನವನ್ನು ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಮತ್ತು ಸ್ಟೂಡೆಂಟ್ ಕೌನ್ಸಿಲ್‌ನ ಅಡಿಯಲ್ಲಿ ಐಪಿಎಸ್‌ಎಸ್‌ಎಂ ಡೀನ್ ಡಾ. ಸೋನಿಯಾ ನೊರೊನ್ಹಾ ಮತ್ತು ವಿಭಾಗ ಮುಖ್ಯಸ್ಥ ಪ್ರೊ. ನೆಲ್ಸನ್ ಪಿರೇರಾ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ಅತಿಥಿ ಉಪನ್ಯಾಸದ ಬಗ್ಗೆ ವಿದ್ಯಾರ್ಥಿಗಳು ಸಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಶ್ರೀಮತಿ ನಿರಂಜನ ಅವರು ಸ್ವಾಗತಿಸಿದರು. ಮತ್ತು ದ್ವಿತೀಯ ವರ್ಷದ ಪೋರ್ಟ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ ಸಾಗರ್ ಹೆಚ್ ಅವರು ಧನ್ಯವಾದ ಸಲ್ಲಿಸಿದರು. ಕೊನೆಯಲ್ಲಿ ಪ್ರೊ.ವೆಂಕಟೇಶ್ ಅಮೀನ್ ಅವರಿಗೆ ಕೃತಜ್ಞತೆಯ ಸ್ಮರಣಿಕೆ ನೀಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ