ಸಂಸದೀಯ ಶಿಷ್ಟಾಚಾರಕ್ಕೆ ಇನ್ನೊಂದು ನಡಾವಳಿ ರೂಪಿಸಬೇಕಾದ ಅನಿವಾರ್ಯತೆ

Upayuktha
0


ಸಂಸತ್ತಿನ ಕಾರ್ಯಕ್ರಮಕ್ಕೆ ಸಂಬಂಧಿಸಿ ಇನ್ನೊಂದು ಶಿಷ್ಟಾಚಾರದ ನಡಾವಳಿಯ ಕುರಿತಾಗಿ ಗಂಭೀರವಾಗಿ ಆಲೇೂಚಿಸ ಬೇಕಾದ ಸಂದರ್ಭ ನಿಮಾ೯ಣವಾಗಿರುವುದಂತೂ ಸತ್ಯ. ಈ ವಿಷಯವನ್ನು ಪಕ್ಷ ಜಾತಿ ವೈಯುಕ್ತಿಕ ಭಾವನೆಗಳನ್ನು ಮೀರಿ ಸಂವಿಧಾನದ ಚೌಕಟ್ಟಿನಲ್ಲಿ ಚಿಂತಿಸಿ ಒಂದು ತೀಮಾ೯ನಕ್ಕೆ ಬರಲೇ ಬೇಕು. ಇಲ್ಲವಾದರೆ ಅವರವರ ಅನುಕೂಲಕ್ಕೆ  ತಕ್ಕಂತೆ ಇನ್ನೊಂದಿಷ್ಟು ಅನುಕೂಲಕರ ಶಿಷ್ಟಾಚಾರಗಳು ಹುಟ್ಟಿಕೊಳ್ಳುವ ಅಪಾಯವುಾ ಇದೆ.  ಇದು  ನಮ್ಮ ಮುಂದಿನ ಸಂಸದೀಯ ಶಿಷ್ಟಾಚಾರಕ್ಕೆ ಅತಿ ದೊಡ್ಡ ತೊಡಕಾದರೂ ಆಶ್ಚರ್ಯವಿಲ್ಲ.


"ನಮ್ಮ ನವ ಸಂಸತ್ತಿನ ಸೌಧವನ್ನು ಯಾರು ಉದ್ಘಾಟನೆ ಮಾಡ ಬೇಕು" ಅನ್ನುವ ಚಚೆ೯ ಎಷ್ಟು ದಾರಿ ತಪ್ಪಿ ನಡೆಯುತ್ತಿದೆ ಅಂದರೆ ಸಂಸದೀಯ ವ್ಯವಸ್ಥೆಯಲ್ಲಿ ಪ್ರಧಾನಿಗಳ ಸ್ಥಾನಮಾನ ಮೇಲೊ? ರಾಷ್ಟ್ರಪತಿಗಳ ಸ್ಥಾನ ಮಾನ ಮೇಲೊ ಅನ್ನುವಷ್ಟರ ಮಟ್ಟಿಗೆ ಚಚೆ೯ ಶುರುವಾಗಿದೆ. ಇದು ಆರೇೂಗ್ಯದಾಯಕ ಚಚೆ೯ ಅಲ್ಲ. ಇಲ್ಲಿ ಈಗ ಯಾರು ಪ್ರಧಾನಿ.. ಯಾರು ರಾಷ್ಟ್ರಪತಿಗಳು ಅನ್ನುವುದು ಮುಖ್ಯವಲ್ಲ. ಈಗ ಅಧಿಕಾರ ಸ್ವೀಕರಿಸಿರುವ ವ್ಯಕ್ತಿಗಳ ವಚ೯ಸ್ಸು ಹೆಸರು ಮುಖ್ಯ ಅಲ್ಲ. ಇಲ್ಲಿ ಅವರು ಸ್ವೀಕರಿಸಿರುವ ಹುದ್ದೆಯ ಸ್ಥಾನಮಾನ ಅಧಿಕಾರಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಂವಿಧಾನದ ಚೌಕಟ್ಟಿನಲ್ಲಿ ನೇೂಡಿ ನಿಧ೯ರಿಸಬೇಕೇ ಹೊರತು ನಮ್ಮ ವೈಯುಕ್ತಿಕ ಭಾವನೆಗಳು ಪಕ್ಷ  ಇಲ್ಲಿ ಬರಲೇ ಬಾರದು.


ಈಗ ಕೆಲವರು ಮುಂದಿಟ್ಟರುವ ವಾದ ಕೇಳಿದರೆ ನಮ್ಮ ಸಂಸದೀಯ ವ್ಯವಸ್ಥೆಯ ಕುರಿತಾಗಿ ಮತ್ತೆ ಮತ್ತೆ ಅಧ್ಯಯನ ಮಾಡಬೇಕಾದ ಸಂದರ್ಭ ಬಂದಿದೆ. ಸಂಸತ್ತಿನಲ್ಲಿ ಪ್ರಧಾನ ಮಂತ್ರಿಯೇ ಶ್ರೇಷ್ಠ ಅನ್ನುವವರು ಮಂಡಿಸುವ ವಾದವೆಂದರೆ "ಪ್ರಧಾನ ಮಂತ್ರಿಗಳು ಸಂಸತ್ತಿನಲ್ಲಿ ಬಹುಮತ ಮತದಿಂದ ಆಯ್ಕೆಗೊಂಡ ವ್ಯಕ್ತಿ. ನಿಜಕ್ಕೂ ನೇೂಡಿದರೆ ಪ್ರಧಾನ ಮಂತ್ರಿಗಳು ಸಂಸತ್ತಿನ ಹೊರಗೆ ಆಯ್ಕೆಯಾಗಿ ಒಳಗೆ ಬರುವ ವ್ಯಕ್ತಿ. ಹೊರತು ಜನರಿಂದ ನೇರವಾಗಿ ಆಯ್ಕೆಗೊಂಡ ವ್ಯಕ್ತಿ ಅಲ್ಲ. ಅದೇ ರೀತಿಯಲ್ಲಿ ನೇೂಡಿದರೆ ರಾಷ್ಟ್ರಪತಿಗಳನ್ನು ಆಯ್ಕೆ ಮಾಡುವುದು ಸಂಸತ್ತಿನಲ್ಲಿ ಚುನಾಯಿತ ಸದಸ್ಯರು ಮಾತ್ರವಲ್ಲ ರಾಜ್ಯ ವಿಧಾನ ಸಭೆಗಳ ಚುನಾಯಿತ ಸದಸ್ಯರಿಂದ ಆಯ್ಕೆಗೊಂಡು ಬಂದ ಗಣರಾಜ್ಯದ ಉನ್ನತವಾದ ಐಕ್ಯತೆಯ ಚುನಾಯಿತ ಪ್ರತಿನಿಧಿ. ಸಂಸತ್ತಿನ ಅಧಿವೇಶನ ಕರೆಯುವ ಅಧಿಕಾರ ಮತ್ತು  ವಿಸಜಿ೯ಸುವ ಅಧಿಕಾರ ಹೊಂದಿರುವುದು ರಾಷ್ಟ್ರಪತಿಗಳು ಅನ್ನುವುದನ್ನು ಸಂವಿಧಾನವೇ ಸ್ವಷ್ಟಪಡಿಸಿದೆ.


ಸಂಸತ್ತಿನ ಒಳಗೆ ಸದನನಡೆಯುವ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳಿಗ್ಗಿಂತ ಸಂಸತ್ತಿನಲ್ಲಿ ಸಭಾಧ್ಯಕ್ಷರಿಗೆ ಹೆಚ್ಚಿನ ಸ್ಥಾನ ಮಾನ.ಪ್ರಧಾನಿಗಳು ಎಷ್ಟೇ ಮೇರು ವ್ಯಕ್ತಿತ್ವ  ಹೊಂದಿದ್ದರು ಸದನದಲ್ಲಿ ಸಭಾಧ್ಯಕ್ಷರ ಎತ್ತರಕ್ಕೆ  ಕೂರಿಸಲು ಸಾಧ್ಯವಿಲ್ಲ. ಪ್ರಧಾನಿಗಳು ಸದನದ ಕೆಳಗೆ ಕೂತು ಮಾತನಾಡುವ ಸಂದರ್ಭದಲ್ಲಿ ಸಭಾಧ್ಯಕ್ಷರ ಅನುಮತಿ ಪಡೆದೇ ಮಾತನಾಡ ಬೇಕು. ಪ್ರಧಾನಿಗಳು ತಪ್ಪಿ ನಡೆದರೆ ಅವರನ್ನು ಪ್ರಶ್ನೆ ಮಾಡುವ ಅಧಿಕಾರ ಸ್ಪೀಕರ್‌ ಗಳಿಗೆ ಇದೆ. ಇದೆಲ್ಲಾ ರೂಪಿಸಿರುವ ಉದ್ದೇಶ ಸದನದ ಚಟುವಟಿಕೆಗಳು ಸಾಂಗವಾಗಿ ನಡೆಯ ಬೇಕು ಅನ್ನುವುದೇ ಮೂಲ ಉದ್ದೇಶ ಹೊರತು ನಮ್ಮ ವೈಯುಕ್ತಿಕ ಹೆಸರು ಪ್ರತಿಷ್ಟೆ ಇಲ್ಲಿ ಗೌಣ.


ಸಂಸತ್ತಿನ ಹೊಸ ಸೌಧ ಉದ್ಘಾಟನೆ ಮಾಡುವುದಕ್ಕೂ ಅನಂತರದಲ್ಲಿ ಒಳಗೆ ರೂಪಿಸಿ ಕೊಂಡ ಗ್ರಂಥಾಲಯ ಕ್ಯಾಂಟೀನ್, ಕಾರು ಶೆಡ್‌ ಇವುಗಳ ಉದ್ಘಾಟನೆಗೂ ತುಂಬಾ ವ್ಯತ್ಯಾಸವಿದೆ. ಇಂದು ನಮ್ಮದೇ ಪ್ರಧಾನಿ ಮೇೂದಿ ಈ ಸಂಸತ್ತನ್ನು ಉದ್ಘಾಟನೆ ಮಾಡುವಾಗ ಹೆಮ್ಮೆ ಅನ್ನಿಸಬಹುದು. ನಾಳೆ ಇನ್ನೊಬ್ಬರು ಪ್ರಧಾನ ಮಂತ್ರಿಗಳಾಗಿ ಇದೇ ಕೆಲಸ ಮಾಡಿದರೆ ಆಗ ನಮ್ಮ ಮನಸ್ಥಿತಿ ಹೇಗಾಗಬಹುದು ಅನ್ನುವುದನ್ನು ಒಮ್ಮೆ ತೆರೆದು ನೇೂಡಬೇಕು. ಹಿರಿಯ ವಕೀಲರು ಮಂಡಿಸಿದ ವಾದವೆಂದರೆ ಇದು ರಾಜಕೀಯ ನಿಧಾ೯ರ ಅದನ್ನು ಪ್ರಶ್ನೆ ಮಾಡುವುದು ಸರಿಯಲ್ಲ. ಹಾಗಾದರೆ ವಿಪಕ್ಷಗಳು ಬಹಿಷ್ಕಾರ ಮಾಡುವುದನ್ನು ತಪ್ಪು ಅನ್ನುವ ಹಾಗಿಲ್ಲ. ಅದೂ ಕೂಡಾ ರಾಜಕೀಯ ನಿಧಾ೯ರ ಅಲ್ಗವೆ?


ಹಾಗಾಗಿಯೇ ಇರಬೇಕು ಸವ೯ಕಾಲಕ್ಕೂ ಹಿತವಾದ ಕೆಲವೊಂದು ಆರೇೂಗ್ಯ ಪೂಣ೯ ಸಂಸದೀಯ ಶಿಷ್ಟಾಚಾರಗಳು ಇಂದಿಗೂ ಜೀವಂತವಾಗಿ ಮುಂದುವರಿದು ಕೊಂಡು ಬಂದಿರುವುದು. ಈ ಅಲಿಖಿತವಾದ ಸಂಸದೀಯ ನಡಾವಳಿಕೆಗಳನ್ನು ಹೇಗೆ ಮುಂದುವರಿಸಿಕೊಂಡು ಹೇೂಗಬೇಕು ಅನ್ನುವುದನ್ನು ಸಂಸದೀಯ ವ್ಯವಸ್ಥೆಗೆ ಮಾತೃ ಸಂಸ್ಥೆ ಅನ್ನಿಸಿಕೊಂಡ ಬ್ರಿಟನ್ ಸಂಸದೀಯ ಬದುಕಿನಿಂದ ಕಲಿಯ ಬೇಕಾದ ಅನಿವಾರ್ಯತೆ ಬಂದಿದೆ.


-ಪ್ರೊ. ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top