ಎನ್‌ಎಂಐಟಿಗೆ ಏಷ್ಯಾದ ಅತಿದೊಡ್ಡ ಎಲೆಕ್ಟ್ರಿಕ್ ಸೋಲಾರ್ ವಾಹನ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ

Upayuktha
0



ಬೆಂಗಳೂರು: ಗ್ರೇಟರ್ ನೋಯ್ಡಾದಲ್ಲಿರುವ ಗಲ್ಗೋತಿಯಾಸ್ ವಿಶ್ವವಿದ್ಯಾಲಯವು, ‘ಇಂಪೀರಿಯಲ್ ಸೊಸೈಟಿ ಆ¥sóï ಇನ್ನೋವೇಟಿವ್ ಇಂಜಿನಿಯರ್ಸ್’ ಸಹಯೋಗದಲ್ಲಿ ಆಯೋಜಿಸಿದ್ದ, ‘ವಾರ್ಷಿಕ ಎಲೆಕ್ಟ್ರಿಕ್ ಸೋಲಾರ್ ವಾಹನಗಳ ರಾಷ್ಟ್ರೀಯ ಸ್ಫರ್ದೆಯಲ್ಲಿ (ಇ.ಎಸ್.ವಿ.ಸಿ 2023)’ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಿರ್ಮಿತವಾದ ವಾಹನ ಹಾಗೂ ಅನ್ವೇಷಕರ ತಂಡ ಭಾಗವಹಿಸಿದ್ದು, ‘ಪೀಪಲ್ಸ್ ಚಾಯ್ಸ್ ಅವಾರ್ಡ್’ (ವೀಕ್ಷಕರ ಆಯ್ಕೆ ಪ್ರಶಸ್ತಿ) ಗಳಿಸಿದೆ.


ಇದು ಏಶಿಯಾ ಖಂಡದಲ್ಲಿಯೇ ಅತ್ಯಂತ ಬೃಹತ್ ಆದ ಸೌರಶಕ್ತಿ ವಾಹನಗಳ ಸ್ಫರ್ಧೆ ಅಷ್ಟೇ ಅಲ್ಲದೆ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಸೌರಶಕ್ತಿಯ ವಾಹನ ನಿರ್ಮಾಣದ ಹೊಣೆ ಹೊತ್ತಿರುವ ಶಿಕ್ಷಕ-ವಿದ್ಯಾರ್ಥಿ ಒಕ್ಕೂಟ ‘ಟೀಂ ಹೋರಸ್’, ಅತ್ಯುತ್ತಮ ವಿನ್ಯಾಸ ಪ್ರಶಸ್ತಿ, ಅತ್ಯುತ್ತಮ ಔದ್ಯಮಿಕ ಪ್ರಶಸ್ತಿ ಹಾಗೂ ಭವಿಷ್ಯದ ಭರವಸೆಯ ಪ್ರಶಸ್ತಿಗಳನ್ನು ಪಡೆದಿದೆ. ಈ ತಂಡಕ್ಕೆ ಅಭಿವಂದನೆ ಸಲ್ಲಿಸಲು ಸಮಾರಂಭವೊಂದು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜನೆಗೊಂಡಿತ್ತು.


ಈ ಸಂದರ್ಭದಲ್ಲಿ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಹಾಗೂ ‘ಟೀಂ ಹೋರಸ್’ನ ಶಿಕ್ಷಕ ಸಂಯೋಜಕ ಡಾ. ಎಲ್. ಹರೀಶ್ ಕುಮಾರ್ ಅವರು ಮಾತನಾಡಿ, ‘ಹೆಚ್ಚುತ್ತಿರುವ ತಾಪಮಾನದ ಕಾರಣ, ಸಾಂಪ್ರದಾಯಿಕ ಇಂಧನ ಮೂಲಗಳ ಬಳಕೆಯನ್ನು ಕಡಿಮೆ ಮಾಡಿ, ಶುದ್ಧ ವಾತಾವರಣಕ್ಕೆ ಅನುವು ಮಾಡಿಕೊಡಲು ಹಾಗೂ ನೈಸರ್ಗಿಕ ಇಂಧನ ಮೂಲಗಳ ಬಗ್ಗೆ ಅರಿವು ಮೂಡಿಸಲು, 2017ರಲ್ಲಿ ಪ್ರಾರಂಭಿಸಿದ ‘ಟೀಂ ಹೋರಸ್’ನ ಪ್ರಯತ್ನ ಈಗ ಫಲ ಕೊಟ್ಟಿದೆ. ಈ ತಂಡ ಅನ್ವೇಷಿಸಿ, ನಿರ್ಮಿಸಿದ ಸೌರಶಕ್ತಿಯ ವಾಹನ ನೂರಾರು ಕಿಲೋಮೀಟರ್ ಯಾವುದೇ ಅಡ್ಡಿ ಆತಂಕಗಳಿಲ್ಲದೆ ದೆಹಲಿ-ಆಗ್ರಾ ಎಕ್ಸ್‍ಪ್ರೆಸ್ಸ್ ಹೆದಾರಿಯಲ್ಲಿ ಸಂಚರಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿದೆ ಹಾಗೂ ಜಗತ್ತಿನ ಗಮನ ಸೆಳೆದಿದೆ’, ಎಂದು ತಿಳಿಸಿದರು. 


‘ನಮ್ಮ ಸಂಸ್ಥೆ, ನವೀಕರಿಸಬಹುದಾದ ಇಂಧನ, ವಿದ್ಯುತ್ ಚಾಲಿತ ವಾಹನ, ಸೌರಶಕ್ತಿಯ ವಾಹನ ಇತ್ಯಾದಿ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಸಾದರ ಪಡಿಸಲು ಉತ್ತಮ ಅವಕಾಶ ಕಲ್ಪಿಸಿದೆ. ಭವಿಷ್ಯದ ಅಗತ್ಯತೆಗಳನ್ನು ಅರಿತು ಆ ನಿಟ್ಟಿನಲ್ಲಿ ಅನ್ವೇಷಣೆಗಳನ್ನು ಅವರು ಸಮರ್ಥವಾಗಿ ನಡೆಸಲಿ ಎಂಬುದು ನಮ್ಮ ಉದ್ದೇಶ. ಕೇವಲ ಆರು ವರ್ಷಗಳ ಹಿಂದೆ ಪ್ರಾರಂಭವಾದ ಈ ಪ್ರಯತ್ನ ಇಂದು ಫಲ ನೀಡಿದೆ. ರಾಷ್ಟ್ರಮಟ್ತದಲ್ಲಿ ನಮ್ಮ ಅನ್ವೇಷಣೆಗಳಿಗೆ ಮಾನ್ಯತೆ ದೊರೆತಿದೆ’, ಎಂದು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ನುಡಿದರು.


ಸಮಾರಂಭದಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ವಿ. ಶ್ರೀಧರ್ ಹಾಗೂ ಅಕೆಡೆಮಿಕ್ ನಿರ್ದೇಶಕ ಡಾ. ಸಂದೀಪ್ ಶಾಸ್ತ್ರಿ ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top