ಮೇ 31, ಜೂ. 1: 'ಸಿಂಗರ್ಸ್ ಪ್ರೀಮಿಯರ್ ಲೀಗ್ ಕರಾವಳಿ ಕೋಯಲ್ ಚಾಂಪಿಯನ್ಸ್'

Upayuktha
0

• ಅರುಣ್ಯ ಫೌಂಡೇಶನ್ ಹಾಗೂ ದಾಸ್ ಕುಡ್ಲ ಇವೆಂಟ್ಸ್ ಜಂಟಿ ಆಯೋಜನೆ

• ಎಲ್ಲಾ ವಯೋಮಿತಿಯ ಸ್ಪರ್ಧಿಗಳನ್ನು ಹೊಂದಿರುವ ಜಗತ್ತಿನ ಪ್ರಪ್ರಥಮ ಪ್ರಯೋಗ

• ವಿಶೇಷ ಚೇತನ ಮಕ್ಕಳಿಗೆ ಹಾಗೂ ಸಂಸ್ಥೆಗಳಿಗೆ ಸಹಾಯ ಹಾಗೂ ಹಿರಿಯ ಕಲಾವಿದರಿಗೆ ಮಾಸಾಶನ ವ್ಯವಸ್ಥೆ




ಮಂಗಳೂರು:  ಅರುಣ್ಯ ಫೌಂಡೇಶನ್ ಮತ್ತು ದಾಸ್ ಕುಡ್ಲ ಇವೆಂಟ್ಸ್ ಸಹಯೋಗದಲ್ಲಿ ಎಲ್ಲಾ ವಯೋಮಿತಿಯ ಸ್ಪರ್ಧಿಗಳನ್ನು ಹೊಂದಿರುವಂತಹ ಜಗತ್ತಿನ ಪ್ರಪ್ರಥಮ ಪ್ರಯೋಗ, ಕರಾವಳಿ ಕರ್ನಾಟಕ ಮೆಗಾ ಮ್ಯೂಸಿಕಲ್ ರಿಯಾಲಿಟಿ ಶೋ, ‘ಸಿಂಗರ್ಸ್ ಪ್ರೀಮಿಯರ್ ಲೀಗ್ (ಎಸ್ಪಿಎಲ್ 23): ಕರಾವಳಿ ಕೋಯಲ್ ಚಾಂಪಿಯನ್ಸ್ 2023' ಕಾರ್ಯಕ್ರಮವು ಮೇ 31 ಮತ್ತು ಜೂನ್1 ರಂದು ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಮೇ ೩೧ರಂದು ಮೊದಲ ಸುತ್ತಿನ ಸಂಗೀತ ಕಾರ್ಯಕ್ರಮ ಹಾಗೂ ಎರಡನೇ ದಿನ ಜೂನ್ 1ರಂದು ಬೆಳಗ್ಗೆ 8.30ಕ್ಕೆ ಸೆಮಿಫೈನಲ್ ನಡೆಯಲಿದೆ. ಜೂ1ರಂದು ಮಧ್ಯಾಹ್ನ12.30ಕ್ಕೆ ಅಂತಿಮ ಸುತ್ತು ಹಾಗೂ ಸಂಜೆ, ಪ್ರಶಸ್ತಿ ಪ್ರದಾನ ಮತ್ತು ಬಹುಮಾನ ವಿತರಣಾ ಸಮಾರಂಭ, ‘ಪಂಚಭಾಷಾ ರಸಮಂಜರಿ' ನಡೆಯಲಿದೆ.


ಎಸ್ಪಿಎಲ್23ರ ಆಯೋಜನೆ ಕಳೆದ ನವೆಂಬರಿನಿಂದ ನಡೆದಿದ್ದು, ರಾಜ್ಯದೆಲ್ಲೆಡೆಯಿಂದ ಒಟ್ಟು 453 ಸ್ಪರ್ಧಿಗಳು ಮೊದಲ ಹಾಗೂ ಮೆಗಾ ಅಡಿಷನ್‌ನಲ್ಲಿ ಭಾಗವಹಿಸಿದ್ದು, ಅಂತಿಮ ಸುತ್ತಿಗೆ ಒಟ್ಟು 72 ಸ್ಪರ್ಧಿಗಳು ಆಯ್ಕೆಯಾಗಿದ್ದು, 9 ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸ್ಪರ್ಧಿಸಲಿವೆ. 


ಜ್ಞಾನೋದಯದ ಉದಯ್ ಗುರೂಜಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಹಿರಿಯ ಸಮಾಜ ಸೇವಕ ಸುರೇಶ್ ಬಲ್ಲಾಳ್, ಶ್ರೀ ವೇದಮಾಯು ಆಯುರ್ವೇದ ಆಸ್ಪತ್ರೆಯ ಡಾ. ಕೇಶವರಾಜ್, ವೆನ್ಲಾಕ್ ಆಸ್ಪತ್ರೆಯ ಜೀವಸಾರ್ಥಕತೆ (ಸೊಟ್ಟೊ) ಸಂಯೋಜಕಿ ಪದ್ಮಾ ವೇಣೂರು, ವೆರಿಟೊ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪೆಜತ್ತಾಯ, ದೊಡ್ಮನೆ ಅಪ್ಪು ಯುವಸೇನೆಯ ಜನಾರ್ದನ ಬಾಬು, ಹಿನ್ನೆಲೆ ಗಾಯಕ ಮತ್ತು ಕಾರ್ಯಕ್ರಮದ ಮುಖ್ಯ ಸಂಯೋಜಕ ರಮೇಶ್ಚಂದ್ರ ಉಪಸ್ಥಿತರಿರಲಿದ್ದಾರೆ. 


ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಶ್ರೀಮತಿ ಜಯಶ್ರೀ ಅಮರನಾಥ ಶೆಟ್ಟಿ ಅವರು ದೀಪಪ್ರಜ್ವಲನಗೊಳಿಸಿ ಉದ್ಘಾಟಿಸುವರು. ವಿಧಾನಸಭೆಯ ಅಧ್ಯಕ್ಷರಾಗಿರುವ ಯು. ಟಿ. ಖಾದರ್,  ಮಂಗಳೂರಿನ ಮಹಾಪೌರ ಜಯಾನಂದ ಅಂಚನ್, ಸ್ಥಳೀಯ ಶಾಸಕ  ಡಿ. ವೇದವ್ಯಾಸ್ ಕಾಮತ್, ಉಡುಪಿಯ ಶಾಸಕ ಯಶ್‌ಪಾಲ್ ಸುವರ್ಣ, ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ,  ಸಿನಿಮಾ ನಿರ್ಮಾಪಕ ಚಿನ್ನೇಗೌಡ,  ನಟ ಸುಂದರ್ ರಾಜ್,  ಹಿನ್ನೆಲೆ ಗಾಯಕಿ ವಾಣಿ ಹರಿಕೃಷ್ಣ, ಶ್ರೀ ಧನಲಕ್ಷ್ಮೀ ಗ್ರೂಪಿನ ಶ್ರೀಪತಿ ಭಟ್, ಗುರು ಬೆಳದಿಂಗಳು ಪ್ರತಿಷ್ಠಾನದ ಪದ್ಮರಾಜ್ ರಾಮಯ್ಯ, ಮೂಡ ಅಧ್ಯಕ್ಷ ರವಿಶಂಕರ್ ಮಿಜಾರ್, ಕಾರ್ಡೋಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್ ಇಂಡಿಯಾದ ಜನರಲ್ ಮ್ಯಾನೇಜರ್  ದಿವಾಕರ್ ಬಿಜೈ, ರಾಜ್ಯ ಇಂಟಕ್ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ, ಶ್ರೀ ಸಾಯಿ ಮಂದಿರ ತೋಟದಮನೆಯ ದಿವಾಕರ ಶೆಟ್ಟಿ ಕೊಡವೂರು, ಇಂಡಸ್ಟ್ರಿಯಲ್ ಕ್ಯಾಟರರ್ಸ್ ಸಂಸ್ಥೆಯ ಪ್ರಭಾಕರ ಪೂಜಾರಿ, ನಿವೃತ್ತ ಎಸ್ಪಿ ಜಯಂತ್ ಶೆಟ್ಟಿ ಹಾಗೂ ಹಿರಿಯ ನ್ಯಾಯವಾದಿ ವರದರಾಜ್ ಎ., ಅಲೇರಿ ಶ್ರೀ ಸತ್ಯ ಸಾರಮಾನಿ- ಕಾನದ ಕಟದ ಮೂಲಕ್ಷೇತ್ರದ ಅಧ್ಯಕ್ಷ ಶಿವರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 


ಜೂನ್ 1ರ ಸಂಜೆ 4ರಿಂದ 9 ಗಂಟೆಯವರೆಗೆ, ‘ಮಧುವನ ಕರೆದರೆ' ಖ್ಯಾತಿಯ ವಾಣಿ  ಹರಿಕೃಷ್ಣ ಉಪಸ್ಥಿತಿಯೊಂದಿಗೆ, ರಮೇಶ್ಚಂದ್ರ ಸಾರಥ್ಯದಲ್ಲಿ, ಎಸ್ಪಿಎಲ್ ಟೀಂ ಲೀಡರ್‌ಗಳಾಗಿರುವ ಪಂಚಮ್ ಹಳೆಬಂಡಿ, ಪ್ರತಿಮಾ ಭಟ್, ಸುರೇಖಾ ಹೆಗ್ಡೆ, ರಾಧಿಕಾ ಕಲ್ಲೂರಾಯ, ರಶ್ಮಿ ಚಿಕ್ಕಮಗಳೂರು, ಶ್ರೀಕೃಪಾ, ಶಶಿಕಿರಣ್, ರವೀಂದ್ರ ಪ್ರಭು ಹಾಗೂ ಮಿಥುನ್ ವಿದ್ಯಾಪುರ ಇವರ ಸಮ್ಮಿಲನದೊಂದಿಗೆ, ವಿಜೇತ ತಂಡಗಳ ಸಮಾಗಮದೊಂದಿಗೆ ಕಣ್ಮನ ಸೆಳೆಯುವ ‘ಪಂಚಭಾಷಾ ರಸಮಂಜರಿ' ಜರುಗಲಿದೆ. 



ಈ ಸಂದರ್ಭದಲ್ಲಿ ಕಲಾ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರಿಗೆ ಕಲಾವೀರ ತಿಲಕರತ್ನ ಗೌರವ ಪ್ರಶಸ್ತಿ, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಭೀಷ್ಮ ಖ್ಯಾತಿಯ ಮನೋಹರ್ ಪ್ರಸಾದ್ ಅವರಿಗೆ ಸಕಲ ಕಲಾಸಂಪನ್ನ ಗೌರವ ಪ್ರಶಸ್ತಿ, ಸಂಗೀತ ಕ್ಷೇತ್ರದಲ್ಲಿನ ಜೀವಮಾನ ಸಾಧನೆ ಪ್ರಶಸ್ತಿಯನ್ನು ಠಾಗೋರ್ ದಾಸ್ ಮತ್ತು ಶಾರದಾ ಬಾರ್ಕೂರ್ ಅವರಿಗೆ ನೀಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗೌರವ ಕಲಾ ಸಾಧಕ ಪ್ರಶಸ್ತಿ, ವಿಶೇಷ ಚೇತನ ಕಲಾ ಸಾಧಕ ಪ್ರಶಸ್ತಿ, ಗೌರವ ಕ್ರೀಡಾ ಸಾಧಕ ಪ್ರಶಸ್ತಿ, ಗೌರವ ಸಮಾಜಸೇವಾ ರತ್ನ ಪ್ರಶಸ್ತಿ ಹಾಗೂ ಗೌರವ ಕಲಾಪೋಷಕ ರತ್ನ ಪ್ರಶಸ್ತಿ ನೀಡಲಾಗುವುದು.  


ಪ್ರಶಸ್ತಿ ಪ್ರದಾನ, ಬಹುಮಾನ ವಿತರಣೆ ಜೊತೆಗಿನ ರಸಮಂಜರಿ ಕಾರ್ಯಕ್ರಮದ ನೇರಪ್ರಸಾರವನ್ನು ವಿ೪ ವಾಹಿನಿ ಹಾಗೂ ಇತರ ಸಹಭಾಗಿ ಯುಟ್ಯೂಬ್ ಚಾನೆಲ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ಎರಡು ದಿನದ ಸ್ಪರ್ಧೆಯನ್ನು ಕಂತುಗಳಾಗಿ ವಿ೪ ವಾಹಿನಿ ಹಾಗೂ ಸಹಯೋಗಿ ಯುಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ.


ಈ ಕಾರ್ಯಕ್ರಮದಲ್ಲಿ ಸಂಗ್ರಹವಾಗಿ ಉಳಿದ ಹಣದಲ್ಲಿ ವಿಶೇಷ ಚೇತನ ಮಕ್ಕಳಿಗೆ ಹಾಗೂ ಸಂಸ್ಥೆಗಳಿಗೆ ಸಹಾಯ ಹಾಗೂ ಹಿರಿಯ ಕಲಾವಿದರಿಗೆ ಮಾಸಾಶನ ವ್ಯವಸ್ಥೆಯನ್ನು ಮಾಡಲಾಗುವುದು. ಅರುಣ್ಯ ಫೌಂಡೇಶನ್ ಕೃಷಿ, ಗ್ರಾಮೀಣಾಭಿವೃದ್ಧಿ, ಯುವಸಬಲೀಕರಣ, ಕಲೆ, ಸಂಸ್ಕೃತಿ, ಶಿಕ್ಷಣ, ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಿದ್ದು, ಕಳೆದ 5 ವರ್ಷಗಳಿಂದ ಸಕ್ರೀಯವಾಗಿದೆ. ದಾಸ್ ಕುಡ್ಲ ಇವೆಂಟ್ಸ್ ರಾಜ್ಯದ ಸಂಗೀತ ಕಲಾವಿದರಿಗೆ ಪ್ರೊತ್ಸಾಹ, ಹಾಗೂ ವೇದಿಕೆಯನ್ನು ನೀಡುತ್ತಿದೆ.  ಸುರ್‌ಸಂಗಮ್ ಆರ್ಕೆಸ್ಟ್ರಾ ಮೂಲಕ ಮಂಗಳೂರು ದಸರಾ ಆಚರಣೆಯಲ್ಲಿ ಸಾಂಸ್ಕೃತಿಕ ಉತ್ಸವವನ್ನು ಸತತವಾಗಿ ಆರು ವರ್ಷಗಳ ಕಾಲ ಆಯೋಜಿಸಿರುವುದು, ಕರಾವಳಿಯ ಸಂಗೀತ ಪ್ರಿಯರ ಮನಸ್ಸಿನಲ್ಲಿ ಗಾಢವಾದ ಛಾಪು ಮೂಡಿಸಿದೆ.


ಸುದ್ದಿಗೋಷ್ಠಿಯಲ್ಲಿ ಅರುಣ್ಯ ಫೌಂಡೇಶನ್‌ ಮುಖ್ಯ ಸಂಯೋಜಕ ರಮೇಶ್ಚಂದ್ರ, ಅರುಣ್ಯ ಫೌಂಡೇಶನ್‌ನ ಮ್ಯಾನೆಜಿಂಗ್ ಟ್ರಸ್ಟಿ ವಿಕ್ರಮ್ ಕೆ., ದಾಸ್ ಕುಡ್ಲ ಇವೆಂಟ್ಸ್ ನ ಸದಾಶಿವದಾಸ್ ಪಾಂಡೇಶ್ವರ, ಸಂಯೋಜನಾ ಸದಸ್ಯ ನಾರಾಯಣ ರಾಜ್, ಅರುಣ್ಯ ಫೌಂಡೇಶನ್ ಕಾರ್ಯದರ್ಶಿ ಶ್ರೀನಿವಾಸ ಪೆಜತ್ತಾಯ, ಉಪಸ್ಥಿತರಿದ್ದರು.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top