ತೆಂಕನಿಡಿಯೂರು ಕಾಲೇಜಿನಲ್ಲಿ ರೆಡ್‍ಕ್ರಾಸ್ ದಿನಾಚರಣೆ

Upayuktha
0

 ಇನ್ನೊಂದು ಜೀವದ ಮಹತ್ವ ಮಾನವ ಅರಿಯಬೇಕು – ಡಾ. ರಘುನಾಯ್ಕ

ತೆಂಕನಿಡಿಯೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಯೂತ್‍ರೆಡ್‍ಕ್ರಾಸ್ ಘಟಕವು ರೆಡ್‍ಕ್ರಾಸ್ ದಿನಾಚರಣೆ ಆಚರಿಸುವ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ರೆಡ್‍ಕ್ರಾಸ್ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದ ಡಾ. ರಘುನಾಯ್ಕ – ಓರ್ವ ವ್ಯಕ್ತಿ ಇನ್ನೊಂದು ಜೀವದ ಮಹತ್ವ ಅರಿಯುವಂತಾಗುವಲ್ಲಿ ರೆಡ್‍ಕ್ರಾಸ್‍ನಂತಹ ಸಂಸ್ಥೆಗಳ ಪಾತ್ರ ಸಾಕಷ್ಟಿದೆ ಇದರಲ್ಲಿ ವಿದ್ಯಾರ್ಥಿಗಳು ಸಾಕಷ್ಟು ತೊಡಗಿಸಿಕೊಂಡಲ್ಲಿ ನಮ್ಮ ಸಮಾಜ ಇನ್ನಷ್ಟು ಗಟ್ಟಿಗೊಳ್ಳಲು ಸಾಧ್ಯ ಎಂದರು.  


ಸಭಾಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ರೆಡ್‍ಕ್ರಾಸ್‍ನ ಉಗಮದ ಚಿತ್ರಣವನ್ನು ನೀಡಿದರು.  ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಗ್ರಂಥಪಾಲಕರಾದ ಕೃಷ್ಣ ಉಪಸ್ಥಿತರಿದ್ದರು.  


ಯೂತ್‍ರೆಡ್‍ಕ್ರಾಸ್ ಸಂಚಾಲಕ ರಾಜಕೀಯಶಾಸ್ತ್ರ ವಿಭಾಗ ಮುಖ್ಯಸ್ಥ ಶ್ರೀ ಪ್ರಶಾಂತ ಎನ್. ಸ್ವಾಗತಿಸಿದರೆ, ರಾಜಕೀಯಶಾಸ್ತ್ರ ಉಪನ್ಯಾಸಕರಾದ ಪಾಂಡುರಂಗ ಕಾರ್ಯಕ್ರಮ ನಿರ್ವಹಿಸಿದರು.  ರೆಡ್‍ಕ್ರಾಸ್ ಸಂಸ್ಥಾಪಕರಾದ ಹೆನ್ರಿ ಡುನಾಂಟ್ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಸ್ಮರಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top