ವಿದ್ಯಾರ್ಥಿಗಳ ಪ್ರತಿಭೆ ಒಮ್ಮೆ ಮಾತ್ರ ಪ್ರಜ್ವಲಿಸಿ ಮತ್ತೆ ಕಮರಿ ಹೋಗಬಾರದು: ಪ್ರೊ. ಪ್ರಸಾದ್ ಶಾನುಬೋಗ್

Upayuktha
0

 

ಪುತ್ತೂರು: ತಮ್ಮಲ್ಲಿ ಅಡಕವಾಗಿರುವ ಪ್ರತಿಭೆಗಳು ಮತ್ತು ಹವ್ಯಾಸಗಳು ವಿದ್ಯಾರ್ಥಿ ದೆಸೆಯಲ್ಲಿ ಪ್ರದರ್ಶಿತವಾಗಿ ಕಮರಿ ಹೋಗುವಂತಾಗಬಾರದು ಬದಲಿಗೆ ಜೀವನದುದ್ದಕ್ಕೂ ಅದು ಬೆಳೆದು ಪ್ರದರ್ಶಿತವಾಗಬೇಕು ಇದರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ತೆಂಕಿಲದ ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಸಾದ್ ಶಾನುಬೋಗ್ ಹೇಳಿದರು. 


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳ ಪ್ರತಿಭಾ ದಿನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ವೃತ್ತಿಪರ ಶಿಕ್ಷಣದ ಜತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕಷ್ಟ ಸಾಧ್ಯ ಅದರಲ್ಲೂ ಕೊರೋನಾ ನಂತರ ದಿನಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಹಳಿತಪ್ಪಿದಂತಾಗಿದ್ದು ಇನ್ನೂ ಸಹಜಸ್ಥಿತಿಗೆ ತಲಪಿಲ್ಲ ಎಂದರು. ಮಾತಾಪಿತರ, ಗುರುಹಿರಿಯರ ಮತ್ತು ಕಲಿತ ಶಿಕ್ಷಣ ಸಂಸ್ಥೆಗಳ ಋಣ ನಿಮ್ಮ ಮೇಲಿದೆ ಹಾಗಾಗಿ ಅವರಿಗೆಲ್ಲ ವಿಧೇಯರಾಗಿ ಉತ್ತಮ ನಾಗರಿಕರಾಗಿ ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ, ಯಾವುದೇ ವಿಷಯದಲ್ಲಿ ಮಾನಿಸುವವರನ್ನು ಸಮಾಜ ಗೌರವಿಸುತ್ತದೆ ಎಂದರು. ವಿವೇಕಾನಂದ ಸಂಸ್ಥೆಗಳು ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರಗಳನ್ನೂ ನೀಡುವುದಕ್ಕೆ ಬದ್ಧವಾಗಿವೆ. ಇದನ್ನು ಬೆಳೆಸಿ ಸಮಾಜದ ಉನ್ನತಿಗೆ ಶ್ರಮಿಸುವಂತೆ ಅವರು ನುಡಿದರು.


ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಹಿತ್ಯಿಕ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ  ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.


ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ ಪ್ರಸನ್ನ.ಕೆ, ಕಾಲೇಜಿನ ಸಾಂಸ್ಕೃತಿಕ ಕಲಾವೇದಿಕೆ ಭೂಮಿಕಾ ಕಲಾಸಂಘದ ನಿರ್ದೇಶಕ ಪ್ರೊ.ಸುದರ್ಶನ್.ಎಂ.ಎಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸ್ನೇಹ ಸ್ವಾಗತಿಸಿ ಚೈತ್ರ ವಂದಿಸಿದರು. ಭಾವನಾ ಹಾಗು ವರುಣ್ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top