ದೆಹಲಿ: ಪೇಜಾವರ ಮಠದಲ್ಲಿ ಸಾಮೂಹಿಕ ಬ್ರಹ್ಮೋಪದೇಶ

Upayuktha
0

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ವಸಂತ್ ಕುಂಜ್‌ನಲ್ಲಿರುವ ಉಡುಪಿ ಶ್ರೀ ಪೇಜಾವರ ಮಠದ ಶಾಖೆಯಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಸಾಮೂಹಿಕ ಬ್ರಹ್ಮೋಪದೇಶೋತ್ಸವ ನೆರವೇರಿತು.


ಉತ್ತರ ಪ್ರದೇಶ ಉತ್ತರಾಖಂಡ ಮೊದಲಾದ ರಾಜ್ಯಗಳಿಂದ ಅನೇಕ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ದೆಹಲಿಯ ಶ್ರೀಮಠದಲ್ಲಿನ‌ ಗುರುಕುಲದಲ್ಲಿ ಸಂಪೂರ್ಣ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಅವರಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಪ್ರತೀವರ್ಷ ಸಾಮೂಹಿಕ ಬ್ರಹ್ಮೋಪದೇಶೋತ್ಸವವನ್ನೂ ಶ್ರೀ ಮಠದ ವತಿಯಿಂದಲೇ ನಡೆಸಲಾಗುತ್ತಿದೆ. ಇಂದು (ಭಾನುವಾರ ಮೇ 7ರಂದು) 12 ಬಾಲಕರಿಗೆ ಉಪನಯನ ಸಂಸ್ಕಾರ ಸಮಾರಂಭ ನಡೆಯಿತು. ಶ್ರೀಪಾದರು ಉಪಸ್ಥಿತರಿದ್ದು ವಟುಗಳಿಗೆ ಶ್ರೀ ಕೃಷ್ಣ ಮಂತ್ರೋಪದೇಶ ಸಹಿತ ಅನುಗ್ರಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top