ಮಸ್ಕತ್: ಕಳೆದ ಮೂರು ದಶಕಗಳಿಂದ ಶನೀಶ್ವರ ಪೂಜಾ ಸಹಿತ ತಾಳಮದ್ದಳೆಯ ಹಿಮ್ಮೇಳ ಕಲಾವಿದನಾಗಿ, ಸಂಘಟಕನಾಗಿ ಪ್ರಸಿದ್ದಿ ಪಡೆದ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಅವರನ್ನು ಓಮನ್ ಮಸ್ಕತ್ ನಲ್ಲಿ ಬಿರುವ ಜವನೆರ್ ಮಸ್ಕತ್ ಸನ್ಮಾನಿಸಿ ಗೌರವಿಸಿದರು.
ಸಹೋದರ ನೋಣಯ್ಯ ಶೆಟ್ಟಿಗಾರ್ ಅವರಿಂದ ಬಾಲ ಪಾಠ , ಮುಂದೆ ದಿವಾಣ ಭೀಮ ಭಟ್ ಅವರಿಂದ ಚೆಂಡೆ ಮದ್ದಳೆ ಕಲಿತು ಹವ್ಯಾಸಿ ವಲಯದಲ್ಲಿ ಹಲವಾರು ಸಂಘ ಗಳಲ್ಲಿ ತಾಳಮದ್ದಳೆ, ಬಯಲಾಟ ಗಳಲ್ಲಿ ಹಿಂಮೇಳ ವಾದಕ ರಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀ ಶನೀಶ್ವರ ಭಕ್ತ ವೃಂದ, ಪಕ್ಷಿಕೆರೆ ಎಂಬ ತಂಡ ಕಟ್ಟಿ ಮಸ್ಕತ್,ದುಬೈ, ಅಬುದಾಬಿ, ಮುಂಬೈ,ಊರು ಪರವೂರು ಗಳಲ್ಲಿ ಶನಿ ಪೂಜೆ ತಾಳಮದ್ದಳೆ ಸಂಘಟಿಸಿದ್ದಾರೆ.
ಎರಡನೇ ಸಲ ಮಸ್ಕತ್ ಗೆ ತಂಡ ಸಂಯೋಜಕರಾಗಿ ಆಗಮಿಸಿ ಸ್ವಾಮಿ ಕೊರಗಜ್ಜ, ಶ್ರೀ ಶನೀಶ್ವರ ಮಹಾತ್ಮೆ ತಾಳಮದ್ದಳೆ ನಡೆಸಿಕೊಟ್ಟ ಪದ್ಮನಾಭ ಅವರನ್ನು ಕದ್ರಿ ನವನೀತ ಶೆಟ್ಟಿ ಹಾಗೂ ದಯಾನಂದ ಜಿ. ಕತ್ತಲ್ ಸಾರ್ ಪರಿಚಯಿಸಿ ಅಭಿನಂದಿಸಿದರು.
ಬಿರುವ ಜವನೆರ್ ಸಂಘಟನೆ ಯ ಗುರುಪ್ರಸಾದ್ ರಾಮ ಅಮೀನ್ ಸನಿಲ್, ನಿತಿನ್ ಕುಮಾರ್ ಹುಣಸೆಕಟ್ಟೆ, ಶಂಕರ್ ಉಪ್ಪುರ್ ,ಶ್ರೀಧರ ಅಮೀನ್ ಚಂದ್ರಕಾಂತ್ ಕೋಟ್ಯಾನ್, ದಾಮೋದರ ಕುಂದರ್, ಮಾಧುರಿ ಸುವರ್ಣ ಉಪಸ್ಥಿತರಿದ್ದರು. ಶ್ವೇತ ಸುವರ್ಣ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ