ಮಸ್ಕತ್: ಬಿರುವ ಜವನೆರ್ ಮಸ್ಕತ್ ಇವರು ಒಮಾನ್ ಮಸ್ಕತ್ ನ ಧಾರ್ ಸೈಟ್ ಶ್ರೀ ಕೃಷ್ಣ ದೇವಸ್ಥಾನ ದಲ್ಲಿ ಆಯೋಜಿಸಿದ ಪೂಜಾ ಸಹಿತ" ಶ್ರೀ ಶನೀಶ್ವರ ಮಹಾತ್ಮೆ- ವಿಕ್ರಮಾದಿತ್ಯ ವಿಜಯ " ಯಕ್ಷಗಾನ ತಾಳಮದ್ದಳೆ ನೆರೆದ ಸಾವಿರಾರು ತುಳುವರನ್ನು ರಂಜಿಸಿತು.
" ಪೂಜ್ಯ ಶಿರಡಿ ಸಾಯಿ ಬಾಬಾ, ಶ್ರೀ ನಿತ್ಯಾನಂದ ಗುರುಕೃಪೆಯಿಂದ ಬಿರುವ ಜವನೆರ್ ಮಸ್ಕತ್ ಸಂಯೋಜಿಸುವ ಎಲ್ಲಾ ಕಾರ್ಯಕ್ರಮ ಗಳು ಯಶಸ್ವಿಯಾಗುತ್ತಿದೆ " ಎಂದು ಸಂಘಟನೆಯ ಗುರುಪ್ರಸಾದ್ ರಾಮ ಅಮೀನ್ ನಾನಿಲ್ ಅವರು ದ್ವಿತೀಯ ಬಾರಿ ಮಸ್ಕತ್ ನಲ್ಲಿ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ನಡೆಸಿ ಕೊಟ್ಟ ಶ್ರೀ ಶನೀಶ್ವರ ಭಕ್ತ ವೃಂದದ ಕಲಾವಿದರನ್ನು ಅಭಿನಂದಿಸಿದರು.2018 ರಲ್ಲಿಯೂ ಜನ ಮನ ರಂಜಿಸಿದ್ದ ಈ ತಂಡ ಈ ಬಾರಿ ಮಸ್ಕತ್ ನಲ್ಲಿ ಅಪೂರ್ವ ದಾಖಲೆ ಸೃಷ್ಟಿಸಿದೆ ಎಂದು ನುಡಿದರು.
ಶಂಕರ್ ಉಪ್ಪುರ್, ಚಂದ್ರಕಾಂತ್ ಕೋಟ್ಯಾನ್ , ಲೋಕೇಶ್ ಕುಂದರ್ ದಂಪತಿಗಳು ಸೇವಾ ಸಂಕಲ್ಪ ಮಾಡಿದರು.
ವೃತ್ತಿ ಹಾಗೂ ಹವ್ಯಾಸಿ ಅನುಭವಿ ಕಲಾವಿದರ ಸಮಾಗಮ ದಲ್ಲಿ ನಡೆದ ಚಾರಿತ್ರಿಕ ಶನಿ ಪೂಜೆ ಯಲ್ಲಿ ರವಿಚಂದ್ರ ಕನ್ನಡಿಕಟ್ಟೆ ಭಾಗವತ ರಾಗಿ ಪ್ರಸಂಗ ನಿರ್ದೇಶನ ಮಾಡಿದರು. ತಂಡ ದ ಪ್ರಧಾನ ಸಂಚಾಲಕ ಪದ್ಮನಾಭ ಶೆಟ್ಟಿಗಾರ ಪಕ್ಷಿಕೆರೆ ಹಾಗೂ ಕಟೀಲು ಭಾಸ್ಕರ ಭಟ್ ಹೀಮ್ಮೆಳ ದಲ್ಲಿ ಸಹಕರಿಸಿದರು.
ವಿಕ್ರಮಾದಿತ್ಯ ನಾಗಿ ಕದ್ರಿ ನವನೀತ ಶೆಟ್ಟಿ ಮತ್ತು ದಿನೇಶ್ ಶೆಟ್ಟಿ ಕಾವಳಕಟ್ಟೆ, ಶನೀಶ್ವರ ಸದಾಶಿವ ಶೆಟ್ಟಿ ತಲಪಾಡಿ, ಪಂಡಿತ ಶ್ರೀಪತಿ ಭಟ್ ಸಸಿಹಿತ್ಲು ,ನಂದಿ ಶ್ರೇಷ್ಟಿ ಮತ್ತು ರಾಮಣ್ಣ ನಾಗಿ ವಿಜಯ ಕುಮಾರ್ ಶೆಟ್ಟಿ ಮೊಯಿಲೋಟ್ಟು, ಆಲೋಲಿಕೆ, ಪದ್ಮಾವತಿ ಪಾತ್ರಗಳಲ್ಲಿ ಪ್ರಸನ್ನ ಶೆಟ್ಟಿ ಅತ್ತೂರ್ ಗುತ್ತು , ಸುಶೀಲೆ ರಾಮಚಂದ್ರ ಮುಕ್ಕ, ಚಂದ್ರಶಯನ ರಾಜ ನಾಗಿ ಬಿರುವ ಜವನೆರ್ ಸಂಘಟನೆಯ ನಿತಿನ್ ಕುಮಾರ್ ಹುಣಸೆಕಟ್ಟೆ ಪಾತ್ರ ನಿರ್ವಹಿಸಿ ದರು.
ಶ್ರೀ ಕೃಷ್ಣ ದೇವಸ್ಥಾನ ದ ಸ್ಥಾಪಕ ಸದಸ್ಯ ಹಾಗೂ ನಾರಂಜಿ ಹೀರ್ಜಿ ಸಮೂಹ ಸಂಸ್ಥೆ ಗಳ ನಿರ್ದೇಶಕ ಶ್ರೀ ನರೇಂದ್ರ ಕೇಶವಜೀ ಸಂಪತ್ ಅವರನ್ನು ಸನ್ಮಾನಿಸಲಾಯಿತು.
ಅನ್ನದಾನ ಸೇವೆ ಮಾಡಿದ ಕಾರ್ಯಕ್ರಮ ದ ಮಹಾ ಪೋಷಕ ಮಸ್ಕತ್ ನ ಉಡುಪಿ ಹೋಟೆಲ್ ಮಾಲಕ ಸುರೇಶ ಭಟ್ ಹಳೆಯಂಗಡಿ ಹಾಗೂ ಮಹಾ ಪೋಷಕ ಇಹಾಬ್ ಟ್ರಾವೆಲ್ಸ್ ನ ಜನರಲ್ ಮ್ಯಾನೇಜರ್ ದಿನೇಶ್ ಪೂಜಾರಿ ಅವರನ್ನು ಅಭಿನಂದಿಸಲಾಯಿತು.
ಬಿರುವ ಜವನೆರ್ ಮಸ್ಕತ್ ನ ಗುರುಪ್ರಸಾದ್ ರಾಮ ಅಮೀನ್ ನಾನಿಲ್, ನಿತಿನ್ ಕುಮಾರ್ ಹುಣಸೆಕಟ್ಟೆ,ಶ್ರೀಧರ ಅಮೀನ್,ಶಂಕರ್ ಉಪ್ಪೊರ್,ಚಂದ್ರಕಾಂತ್ ಕೋಟ್ಯಾನ್,ದಾಮೋದರ ಕುಂದರ್,ಸತೀಶ್ ಪೂಜಾರಿ,ಪ್ರವೀಣ್ ಅಮೀನ್ ಪಾಂಗಳ,ಮನೋಹರ್ ಸಾಲಿಯಾನ್,ಅರುಣ್ ಕುಮಾರ್,ಅರುಣ್ ಪೂಜಾರಿ,ರಮಾನಾಥ್ ಬಂಗೇರ,ರಾಜೇಶ್ ಮಟ್ಟು,ವಿಜಯ್ ಕುಮಾರ್,ರತನ್ ಕೊಟ್ಟಾರಿ,ಶ್ರೀನಿವಾಸ್ ಪೂಜಾರಿ,ಮಾಧುರಿ ಸುವರ್ಣ,ಶೋಭಾ ದಯಾನಂದ,ಅಕ್ಷತಾ ರಿಷಿ,ಉಪಸ್ಥಿತರಿದ್ದರು. ಪೂಜಾ ಸಹಿತ ತಾಳಮದ್ದಳೆ ಗೆ ವಿನೂತನ ರಂಗ ವೇದಿಕೆ ಯನ್ನು ವಿಶ್ವನಾಥ್ ಪೂಜಾರಿ ಬಳಗದವರು ನಿರ್ವಹಿಸಿದರು.
ಚಾಪೆಯಲ್ಲಿ ಕುಳಿತು ನೂರಾರು ಮಕ್ಕಳು, ಮಹಿಳೆಯರನ್ನು ಒಳಗೊಂಡ ಸಾವಿರಕ್ಕೂ ಹೆಚ್ಚಿನ ಪ್ರೇಕ್ಷಕ ರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಪ್ರಸಾದ ಭೋಜನ ಸ್ವೀಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ