ಎಂ.ಜಿ.ಎಂ. ಕಾಲೇಜ್‌: 92ನೇ ಇಸವಿಯ ಪ್ರಾಕ್ತನ ಕಲಾ ವಿದ್ಯಾರ್ಥಿಗಳ ಸ್ನೇಹ ಸಂಮ್ಮಿಲನ

Upayuktha
0


ಉಡುಪಿ: 
ಮಹಾತ್ಮ ಗಾಂಧಿ ಸ್ಮಾರಕ ಕಾಲೇಜಿನ 1992ನೇ ಇಸವಿಯ ಕಲಾ ವಿದ್ಯಾರ್ಥಿಗಳು ಮೂವತ್ತೊಂದು ವರುಷಗಳ ಅನಂತರ ಒಂದುಗೂಡಿ ಪುನರ್ ಸ್ನೇಹ ಸಂಮಿಲನ ಸಮಾವೇಶವನ್ನು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಿತು.


ಸಭಾ ವೇದಿಕೆಯಲ್ಲಿ ಗುರುವಂದನ ಕಾರ್ಯಕ್ರಮ ನಡೆಯಿತು. ನಿವೃತ್ತ ಹಿರಿಯ ಆಂಗ್ಲ  ಪ್ರಾಧ್ಯಾಪಕರಗಳಾದ  ಪ್ರೊ.ಎನ್.ಟಿ.ಭಟ್ಟರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮಿನಾರಾಯಣ ಕಾರಂತ ಅಧ್ಯಕ್ಷತೆವಹಿಸಿದ್ದರು.ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಸ್ಯಾಮ್ ಡೇನಿಯಲ್‌;ನಿವೃತ್ತ ಆಂಗ್ಲ ಭಾಷಾ ಪ್ರಾಧ್ಯಾಪಕಿ ಪ್ರೊ.ಪುಷ್ಪಲತಾ ಸಾಂತ್ಯಾರ ; ನಿವೃತ್ತ ಪ್ರಾಂಶುಪಾಲೆ ಪ್ರೊ.ಸಂಧ್ಯಾ ನಂಬಿಯಾರ್ ;ನಿವೃತ್ತ ಹಿಂದಿ ಪ್ರಾಧ್ಯಾಪಕ  ಡಾ.ಎಸ್.ಆರ್.ಶೇಟ್ ;ನಿವೃತ್ತ ಗ್ರಂಥಪಾಲಕ ಎಸ್.ಬಾಲು;ನಿವೃತ್ತ ರಾಜ್ಯ ಶಾಸ್ತ್ರ ಪ್ರಾಧ್ಯಾಪಕ ಹಳೆ  ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ;ಪ್ರೆುಾ.ರೇೂಹಿತ್ ಅಮೀನ್ ;ದೈಹಿಕ ನಿದೇ೯ಶಕಿ ಜಯಶ್ರೀ ನಾಯಕ್ ;ನಿವೃತ್ತ ಹಿಂದಿ ಪ್ರಾಧ್ಯಾಪಕಿ ಇಂದುಮತಿ; ಅಥ೯ ಶಾಸ್ತ್ರ ಪ್ರಾಧ್ಯಾಪಕ ಪ್ರೊ.ಚೆನ್ನಪುಾಜಾರಿ; ಗೃಹ ವಿಜ್ಞಾನ ಪ್ರಾಧ್ಯಾಪಕಿ ಪೂಣಿ೯ಮಾ ಅಡಿಗ;ಇವರುಗಳಿಗೆ ಗುರುವಂದನ ಸಂಮಾನ ನಡೆಯಿತು.


ಸಂಮಾನ ವೇದಿಕೆಯಲ್ಲಿ ಎಂ.ಜಿ.ಎಂ. ಪ.ಪೂಕಾಲೇಜು ಪ್ರಾಂಶುಪಾಲೆ ಮಾಲತಿದೇವಿ;ಪದವಿ ಕಾಲೇಜಿನ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕಿ ಡಾ.ಮಲ್ಲಿಕಾ ಶೆಟ್ಟಿ  ಉಪಸ್ಥಿತರಿದ್ದರು.ಹಳೆ ವಿದ್ಯಾರ್ಥಿಗಳಾದ ವಿಶ್ವನಾಥ್ ಶ್ಯಾನುಭಾಗ್ ಗಾಯತ್ರಿ ಕಾರ್ಯಕ್ರಮ ಸಂಯೇೂಜಿಸಿದರು.ಡಾ.ಅಚ೯ನಾ ಕಾರ್ಯಕ್ರಮ ನಿರೂಪಿಸಿದರು.ಅನಂತರ ಮನೇೂರಂಜನಾ ಕಾರ್ಯಕ್ರಮ ನಡೆಯಿತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top