ಬದಿಯಡ್ಕ: ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ ಕುಟುಂಬದಿಂದ ವಿವಿಧ ಸೇವಾಕಾರ್ಯಗಳು

Upayuktha
0

   ಧನಸಹಾಯ, ಹೊಲಿಗೆ ಯಂತ್ರ, ಕುಡಿಯುವ ನೀರು, ಮನೆ ರಿಪೇರಿಗೆ ಸಹಕಾರ

ಬದಿಯಡ್ಕ: ಕೊಡುಗೈದಾನಿ ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ ಮತ್ತು ಕುಟುಂಬದವರು ಬಡಜನತೆಗೆ ನೀಡುವ ವಿವಿಧ ಸೇವಾಕಾರ್ಯಗಳನ್ನು ಫಲಾನುಭವಿಗಳಿಗೆ ನೀಡುವ ಕಾರ್ಯಕ್ರಮ ಕಿಳಿಂಗಾರಿನಲ್ಲಿ ಬುಧವಾರ ನಡೆಯಿತು. ಮಾತೃಶ್ರೀ ಶಾರದಾ ಸಾಯಿರಾಂ ಭಟ್ ಅವರು ಉದ್ಘಾಟಿಸಿದರು. ಭವಾನಿ ಶಂಕರಿ ಉಳಿಯ ಅವರ ಮನೆದುರಸ್ತಿಗೆ ರೂಪಾಯಿ 30,000 ಧನಸಹಾಯ, ಪೆರಿಯಡ್ಕದಲ್ಲಿ ಮೋಟಾರು ಮತ್ತು ಪೈಪ್ ಲೈನ್‌ಗಾಗಿ ರೂಪಾಯಿ 30,000 ಧನಸಹಾಯ ವಿತರಿಸಲಾಯಿತು. 


ಔಷಧೀಯ ಸಹಾಯವಾಗಿ ಕುಮಾರಮಂಗಲದ ಸುಧಾ ಹಾಗೂ ದೇವಕಿ ಮಜಿರ್ಪಳ್ಳಕಟ್ಟೆ ಅವರಿಗೆ ತಲಾ ಹತ್ತುಸಾವಿರ ಧನಸಹಾಯ ನೀಡಲಾಯಿತು. ಗೀತಾ ಕೃಷ್ಣ ರೈ ಇಚ್ಲಂಪಾಡಿ, ಪ್ರೀತ ಬಾಲಗಿರಿ ಕಿಳಿಂಗಾರು, ಸಂಧ್ಯಾ ದರ್ಭೆತ್ತಡ್ಕ, ಪವಿತ್ರ ಬೆದ್ರಡ್ಕ ಬೇಳ ಇವರಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಾಯಿರಾಂ ಕೃಷ್ಣ ಭಟ್, ವೇಣುಗೋಪಾಲ, ಸಂಜೀವ ರೈ, ಶೀಲಾ ಕೆ.ಎನ್.ಭಟ್, ಮಧುರಾ ಕೆ.ಎಸ್., ವಿನಯ ಕುಮಾರ್ ಜೊತೆಗಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top