ತೆಂಕನಿಡಿಯೂರು ಕಾಲೇಜು : ಸಾಕ್ಷರತಾ ಅರಿವು ಕಾರ್ಯಕ್ರಮ

Upayuktha
0


ತೆಂಕನಿಡಿಯೂರು:
ದಿನಾಂಕ : 26/05/2023 ರಂದು ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಅವರು ದೀಪ ಬೆಳಗಿಸುವ ಮೂಲಕ “ಸಾಕ್ಷರತಾ ಅರಿವು ಕಾರ್ಯಕ್ರಮ” ಉದ್ಘಾಟಿಸಿದರು.  


ಉಡುಪಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶ್ರೀ ಯೋಗನರಸಿಂಹ ಸ್ವಾಮಿಯವರು ವಿದ್ಯಾರ್ಥಿಗಳಿಗೆ ಸಾಕ್ಷರತಾ ಅರಿವಿನ ಪ್ರಾಮುಖ್ಯತೆ ತಮ್ಮೆಲ್ಲರ ಜವಾಬ್ದಾರಿ, ಕರ್ತವ್ಯಗಳ ಮಾಹಿತಿಯನ್ನು ನೀಡಿದರು.  


ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಉಡುಪಿ ಜಿಲ್ಲಾ ಕಾರ್ಯಕ್ರಮ ಸಹಾಯಕರಾದ ಶ್ರೀಮತಿ ಶ್ವೇತಾ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಕೆ.ಈ., ವಾಣಿಜ್ಯಶಾಸ್ತ್ರ ಉಪನ್ಯಾಸಕ ಶ್ರೀ ವೆಂಕಟೇಶ ಭಟ್ ಉಪಸ್ಥಿತರಿದ್ದರು.  ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವೆಂಕಟೇಶ ಹೆಚ್.ಕೆ. ಸ್ವಾಗತಿಸಿದರು.  ದ್ವಿತೀಯ ಬಿ.ಎಸ್ಸಿ. ವಿದ್ಯಾರ್ಥಿ ವಿಘ್ನೇಶ್ ವಂದಿಸಿದರು.  ಪ್ರಥಮ ಬಿಸಿಎ ವಿದ್ಯಾರ್ಥಿನಿ ಅಂಕಿತ ನಿರೂಪಿಸಿದರು.

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top