ಕುಲಶೇಖರ ಬ್ರಹ್ಮಕಲಶೋತ್ಸವ ವೈಭವ, ಪ್ರಧಾನ ಶ್ರೀ ವೀರನಾರಾಯಣ ದೇವರ ಪ್ರತಿಷ್ಠೆ

Upayuktha
0

ಕುಲಶೇಖರ: ಕುಲಾಲರ ಕುಲದೇವರು ಕುಲಶೇಖರ ಕ್ಷೇತ್ರದ ಪ್ರಧಾನ ಶ್ರೀ ವೀರನಾರಾಯಣ ದೇವರ ಪ್ರತಿಷ್ಠೆಯು ಭಾನುವಾರ (ಮೇ 21) ಬೆಳಿಗ್ಗೆ 9.10ರ ಮಿಥುನಲಗ್ನ ಸುಮುಹೂರ್ತದಲ್ಲಿ ಕ್ಷೇತ್ರದ ತಂತ್ರಿಗಳಾದ ವೇ|ಮೂ| ಬ್ರಹ್ಮಶ್ರೀ ಅನಂತ ಉಪಾಧ್ಯಾಯರ ವೈದಿಕ ನೇತೃತ್ವದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ಭಕ್ತಾದಿಗಳ ಉಪಸ್ಥಿತಿಯಲ್ಲಿ ನೆರವೇರಿತು.


ವಿಷ್ಣುಸ್ವರೂಪಿ ಶ್ರೀ ವೀರನಾರಾಯಣ ದೇವರ ಸಾನಿಧ್ಯವು ದಕ್ಷಿಣ ಭಾರತದಲ್ಲಿಯೇ ಅತ್ಯಂತ ವಿರಳವಾಗಿರುವ ದೇವಸ್ಥಾನ. ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ (ರಿ.) ಮಂಗಳೂರು ಇದರ ಆಡಳಿತದಲ್ಲಿರುವ ಈ ದೇವಸ್ಥಾನವು ಇದೀಗ ಸರಿಸುಮಾರು 74 ವರ್ಷಗಳ ಬಳಿಕ ಶ್ರೀ ದೇವರಿಗೆ ಬ್ರಹ್ಮಕಲಶೋತ್ಸವ ನೆರವೇರುತ್ತಿದೆ. ಮಧ್ಯಾಹ್ನ 12.23ಕ್ಕೆ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ ನೆರವೇರಿತು. ದೇವಸ್ಥಾನದ ಸಮಿತಿ ಪದಾಧಿಕಾರಿಗಳಾದ ಮಯೂರ್ ಉಳ್ಳಾಲ್, ಪುರುಷೋತ್ತಮ ಕುಲಾಲ್, ಬಿ. ಪ್ರೇಮಾನಂದ ಕುಲಾಲ್, ಕೆ. ಸುಂದರ ಕುಲಾಲ್, ದಾಮೋದರ ಎ. ಬಂಗೇರ, ಎಂ.ಪಿ. ಬಂಗೇರ ಬಿಜೈ, ಗೀತಾ ಮನೋಜ್, ಗಿರಿಧರ ಜೆ. ಮೂಲ್ಯ, ಬಿ. ಮೋಹನದಾಸ್ ಅಳಪೆ, ರಘು ಎ. ಮೂಲ್ಯ ಮುಂಬೈ, ಸುನಿಲ್ ಆರ್. ಸಾಲ್ಯಾನ್ ಮುಂಬೈ, ದಿವಾಕರ ಮೂಲ್ಯ ಬೆಂಗಳೂರು, ಬಿ. ದಿನೇಶ್ ಕುಲಾಲ್, ಮಾಧವ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.


ಸಮ್ಮಾನ:

ಮಹಾದಾನಿಗಳಾದ ಎಸ್.ಆರ್. ಬ೦ಜನ್, ಸುರೇಂದ್ರ ರತನ್ ಕುಲಾಲ್ ಮು೦ಬೈ, ಗಿರಿಧರ ಬಿ. ಸಾಲ್ಯಾನ್ ಮು೦ಬೈ, ಗಣೇಶ್ ಕುಲಾಲ್, ಕೆ. ಸು೦ದರ ಕುಲಾಲ್ ಶಕ್ತಿನಗರ, ಗಿರಿಧರ ಜೆ. ಮೂಲ್ಯ, ಎ೦.ಪಿ. ಬ೦ಗೇರ ಹಾಗೂ ರೇವತಿ ಡೊ೦ಬಯ ಕುಲಾಲ್ ಅವರನ್ನು ಸಮ್ಮಾನಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top