ಮಸ್ಕತ್‌ನಲ್ಲಿ ಮೆರೆದ ತುಳುನಾಡಿನ ಕೊರಗಜ್ಜ- ತಾಳಮದ್ದಳೆ

Upayuktha
0

ಮಸ್ಕತ್: ಪ್ರಪ್ರಥಮ ಬಾರಿ ಒಮನ್ ಮಸ್ಕತ್‌ನಲ್ಲಿ ತುಳುನಾಡಿನ ಕಾರಣೀಕದ ದೈವ ಕೊರಗಜ್ಜನ ಚರಿತ್ರೆ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪ್ರದರ್ಶನ ಕಂಡಿತು.


ಶ್ರೀ ಶನೀಶ್ವರ ಭಕ್ತ ವೃಂದ, ಪಕ್ಷಿಕೆರೆ ತಂಡದವರು ಹರೀಶ್ ಶೆಟ್ಟಿ ಸೂಡ ವಿರಚಿತ "ಸ್ವಾಮಿ ಕೊರಗಜ್ಜ" ಪ್ರಸಂಗವನ್ನು ಕಾಲಮಿತಿಯಲ್ಲಿ ಪ್ರಸ್ತುತಿ ಮಾಡಿದರು. ಬಿರುವ ಜವನೆರ್ ಮಸ್ಕತ್ ವಾಟ್ಸಾಪ್ ಬಳಗದ ಸೇವಾ ಸಂಘಟನೆಯು ಸಂಯೋಜಿಸಿದ ಈ ಕಾರ್ಯಕ್ರಮ ಸಾವಿರಾರು ತುಳುವ ಯಕ್ಷಗಾನ ಅಭಿಮಾನಿಗಳ ಹಾಗೂ ಕೊರಗಜ್ಜ ಭಕ್ತರ ಮನ ಗೆದ್ದಿತು.


ಹನುಮಗಿರಿ ಮೇಳದಲ್ಲಿ ಕಲಾ ವ್ಯವಸಾಯ ಮಾಡುತ್ತಿರುವ ಖ್ಯಾತ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರು ಭಾಗವತಿಕೆ, ಪಕ್ಷಿಕೆರೆ ಪದ್ಮನಾಭ ಶೆಟ್ಟಿಗಾರ್, ಭಾಸ್ಕರ ಭಟ್ ಕಟೀಲು ಅವರು ಚೆಂಡೆ ಮದ್ದಳೆ ಹಿಮ್ಮೆಳದಲ್ಲಿ ಸಹಕರಿಸಿದರು.


ಶಿವಯೋಗಿಯಾಗಿ ಕದ್ರಿ ನವನೀತ ಶೆಟ್ಟಿ, ಕೊರಗಜ್ಜನಾಗಿ ಸದಾಶಿವ ಆಳ್ವ ತಲಪಾಡಿ, ಮೈರಕ್ಕೆ ಪಾತ್ರದಲ್ಲಿ ರಾಮಚಂದ್ರ ಮುಕ್ಕ, ಮೈಸ0ದಾಯನಾಗಿ ಕಾವಲಕಟ್ಟೆ ದಿನೇಶ್ ಶೆಟ್ಟಿ, ಪಂಜಂದಾಯ ದೈವವಾಗಿ ದಯಾನಂದ ಜಿ. ಕತ್ತಲ್ಸಾರ್, ಹಾಗೂ ಪುಷ್ಪರಾಜ್ ಕುಕ್ಕಾಜೆ ಅವರು ಅರಸು ದೈವ ಪಾತ್ರ ದಲ್ಲಿ ಅರ್ಥಗಾರಿಕೆ ಮೆರೆಸಿದರು.


ತುಳು ಸಂದಿ, ಪಾರ್ದನ, ಗಾದೆ, ನುಡಿಕಟ್ಟುಗಳ ಬಳಕೆಯೊಂದಿಗೆ ಗ್ರಾಮ್ಯ ತುಳು ಭಾಷೆಯ ಸೊಗಡನ್ನು ಅನಾವರಣಗೊಳಿಸಲಾಯಿತು. ಕಾರ್ಯಕ್ರಮದ ಪೋಷಕ ಮಸ್ಕತ್ ಫಾರ್ಮಸಿಯ ಆಡಳಿತ ನಿರ್ದೇಶಕ ಬಕುಲ್ ಭಾಯ್ ಮೆಹತಾ ಅವರನ್ನು ಸಂಮಾನಿಸಲಾಯಿತು.


ಬಿರುವ ಜವನೆರ್ ಮಸ್ಕತ್ ನ ಸ್ಥಾಪಕ ಸಂಚಾಲಕ ಗುರುಪ್ರಸಾದ್ ರಾಮ ಅಮೀನ್ ನಾನಿಲ್ ಸ್ವಾಗತಿಸಿದರು. ಶ್ವೇತಾ ಸುವರ್ಣ ನಿರೂಪಿಸಿದರು. ಮಸ್ಕತ್ ಧಾರ್ ಸೈಟ್ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ, ಚೆಂಡೆ ಬಳಗ ದೊಂದಿಗೆ ಕಲಾವಿದರನ್ನು ವೇದಿಕೆಗೆ ಬರಮಾಡಿ ಕೊಳ್ಳಲಾಯಿತು.


ಶಂಕರ್ ಉಪ್ಪುರ್ ದಂಪತಿಗಳು ದೀಪ ಪ್ರಜ್ವಲನ ಮಾಡಿದರು. ಮಕ್ಕಳು, ಮಹಿಳೆಯರು ಸೇರಿ ಹೆಚ್ಚಿನ ಪ್ರೇಕ್ಷಕರು ಚಾಪೆಯಲ್ಲಿ ಕುಳಿತು ಕೊರಗಜ್ಜನ ಕತೆಯನ್ನು ಉತ್ಸಾಹದಿಂದ ಆಸ್ವಾದಿಸಿದರು.


ಕಾರ್ಯಕ್ರಮದ ಕೊನೆಯಲ್ಲಿ ನಡೆದ "ತುಳುವರ ಕೂಟ"ದಲ್ಲಿ ಕದ್ರಿ ನವನೀತ ಶೆಟ್ಟಿ ಕಲಾವಿದರ ಪರಿಚಯ ಮಾಡಿದರು. ವಿವಿಧ ಸಮುದಾಯ ಗಳ ಪ್ರಮುಖ ರಾದ ಶಶಿಧರ ಶೆಟ್ಟಿ ಮಲ್ಲಾರ್, ನ್ಯಾಷನಲ್ ಬ್ಯಾಂಕ್ ಒಫ್ ಓಮನ್ ನ ರಾಮ್ಕಿ ಜಿ.ವಿ, ಲಕ್ಷ್ಮೀ ನಾರಾಯಣ ಆಚಾರ್, ಮಂಜುನಾಥ್ ನಾಯಕ್, ಪದ್ಮಾಕರ ಮೆಂಡನ್, ಡಾ. ಸಿ.ಕೆ. ಅಂಚನ್, ರತ್ನಾಕರ ಆಚಾರ್ಯ, ರಮಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ದಯಾನಂದ ಜಿ. ಕತ್ತಲ್ಸಾರ್ ಅವರು "ಕೂಟದ ಬಿನ್ನೆ" ನೆಲೆಯಲ್ಲಿ ತುಳು ಯಕ್ಷಗಾನದ ಮೂಲಕ ಕೊರಗಜ್ಜನ ಕಥೆಯನ್ನು ತುಳುವರಿಗೆ ಪರಿಚಯಿಸಿದ ಸಂಘಟಕರನ್ನು ಅಭಿನಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top