ಕುಲಶೇಖರ: ಮಾಡಿ ಕೂಡಿಟ್ಟ ಆರ್ಥಿಕ ಸಂಪತ್ತು, ಲೌಕಿಕ ಸಂಪತ್ತು ಶಾಸ್ವತವಲ್ಲ. ಪುಣ್ಯದ ಸಂಪತ್ತು ಯಾವತ್ತೂ ಶಾಸ್ವತ. ಅಂತಹ ಸಂಪತ್ತನ್ನು ಇಂತಹ ಕಾರ್ಯಗಳಿಂದ ಪಡೆಯಲು ಅವಕಾಶವಿದೆ. ನಾನು ಎಂಬ ಭ್ರಮೆ ಯಾವತ್ತೂ ದುಖಃವನ್ನೇ ಕೊಡುತ್ತದೆ. ಭ್ರಮೆಯ ಜೀವನದಿಂದ ಹೊರಬರಬೇಕು. ಮನುಷ್ಯ ಜನ್ಮಕ್ಕೆ ಬಂದ ನಮಗೆ ದೇವರೇ ದಿಕ್ಕು. ದೇವರ ಕಡೆ ಹೋಗಲು ಇಂತಹ ವ್ಯವಸ್ಥೆಯಿಂದ ಸಾಧ್ಯ. ನಾವು ಮಾಡುವ ಸಂಪಾದನೆಗೆ ತೆರಿಗೆ ಕಟ್ಟುವಂತೆ ನಾವು ಬಳಸಿದ ಪ್ರಕೃತಿಗೆ ಇಂತಹ ಸತ್ಕರ್ಮಗಳೇ ತೆರಿಗೆಯಾಗಿದೆ. ಇಂತಹ ಕಾರ್ಯಗಳಿಂದ ಸದ್ಗುಣಗಳು ಜಾಗೃತಿಯಾಗುತ್ತದೆ. ಜನ್ಮಜನ್ಮದ ನಮ್ಮಲ್ಲಿನ ಕಶ್ಮಲ ಇಂಥಹ ಪುಣ್ಯ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಅದರ ಪಾಪ ನಿವಾರಣೆ ಆಗುತ್ತದೆ ಎಂದು ಶ್ರೀ ಕ್ಷೇತ್ರ ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಅವರು ಮೇ 14ರಿಂದ ಮೊದಲ್ಗೊಂಡು 25ರವರೆಗೆ ಜರಗುತ್ತಿರುವ ಇತಿಹಾಸ ಪ್ರಸಿದ್ಧ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರ ಸಂಜೆ ಜರಗಿದ ಧಾರ್ಮಿಕಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಮಾಣಿಲ ಶ್ರೀಧಾಮ ಶೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಕಟೀಲು ಕ್ಷೇತ್ರದ ಹರಿನಾರಾಯಣದಾಸ ಅಸ್ರಣ್ಣರು ಮಾತನಾಡಿ, ನಾವು ಭಕ್ತರಾಗಲು ಮೊದಲು ದೇವರು ದೊಡ್ಡವರೆಂದು ತಿಳಿಯಬೇಕು. ಪ್ರಾರ್ಥನೆಯ ವೇಳೆ ಅನ್ಯ ಚಿಂತೆನೆಗೆ ಅವಕಾಶ ನೀಡದಿರುವುದೇ ನಿಜವಾದ ದೇವರ ಭಕ್ತ. ವೀರ ಅಂದರೆ ಉತ್ಸಾಹ. ಶೇಖರ ಅಂದರೆ ಶಿಖರ. ಕುಲಕ್ಕೆ ಶಿಖರಪ್ರಯವಾಗಿರುವವನೇ ವೀರನಾರಾಯಣ ಎಂದರು.
ಕೆಪಿಸಿಸಿ ಸದಸ್ಯ ಆರ್.ಕೆ. ಪೃಥ್ವಿರಾಜ್ ಎಡಪದವು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತ್ ಮೂಡಾಯಿಕೋಡಿ, ಚಂದ್ರಹಾಸ್ ಪಲ್ಲಿಪಾಡಿ, ಒಕ್ಕಲಿಗ ಗೌಡರ ಸಂಘದ ಜಿಲ್ಲಾಧ್ಯಕ್ಷ ಲೋಕಯ್ಯ ಗೌಡ ಕೆ., ರಾಜ್ಯ ಕುಂಬಾರರ ಯುವ ವೇದಿಕೆಯ ರಾಜ್ಯಾಧ್ಯಕ್ಷ ಗಂಗಾಧರ ಬಂಜನ್, ಮೋಹನ್ ಬಿ. ಬೊಕ್ಕಪಟ್ಣ, ಕಂಕನಾಡಿ ಗರಡಿಯ ಕಿಶೋರ್ ಕೆ. ಮಜಿಲ, ಮರೋಳಿ ದೇವಸ್ಥಾನದ ಅಧ್ಯಕ್ಷ ಗಣೇಶ್ ಶೆಟ್ಟಿ ಜಪ್ಪು, ಲಕ್ಷ್ಮೀಶ ದೇವಾಡಿಗ, ಗಣೇಶ್ ಕುಂಟಲ್ಪಾಡಿ, ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ, ಗೋಪಾಲ ಸಾಲ್ಯಾನ್ ಕಣ್ವತೀರ್ಥ, ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷ ನಾರಾಯಣ ಪರ್ನೆ, ಗಂಗಾಧರ ಸಾಲ್ಯಾನ್ ಅರಸಿನಮಕ್ಕಿ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಪ್ರ. ಕಾರ್ಯದರ್ಶಿ ಎ. ಸದಾಶಿವ ಕುಲಾಲ್, ದೇವಸ್ಥಾನದ ಸಮಿತಿ ಪದಾಧಿಕಾರಿಗಳಾದ ಮಯೂರ್ ಉಳ್ಳಾಲ್, ಪುರುಷೋತ್ತಮ ಕುಲಾಲ್, ಬಿ. ಪ್ರೇಮಾನಂದ ಕುಲಾಲ್, ಕೆ. ಸುಂದರ ಕುಲಾಲ್, ದಾಮೋದರ ಎ. ಬಂಗೇರ, ಎಂ.ಪಿ. ಬಂಗೇರ ಬಿಜೈ, ಗೀತಾ ಮನೋಜ್, ಗಿರಿಧರ ಜೆ. ಮೂಲ್ಯ, ಬಿ. ಮೋಹನದಾಸ್ ಅಳಪೆ, ರಘು ಎ. ಮೂಲ್ಯ ಮುಂಬೈ, ಸುನಿಲ್ ಆರ್. ಸಾಲ್ಯಾನ್ ಮುಂಬೈ, ದಿವಾಕರ ಮೂಲ್ಯ ಬೆಂಗಳೂರು, ಬಿ. ದಿನೇಶ್ ಕುಲಾಲ್, ಮಾಧವ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ರೇಣುಕಾ ಬಳಗ ಪ್ರಾರ್ಥಿಸಿ, ಅರ್ಪಿತಾವಿಕ್ಯಾತ್ ಕುಲಾಲ್ ಸ್ವಾಗತಿಸಿದರು. ಬಳಿಕ ಬೊಂಬೆಯಾಟವಯ್ಯಾ ಕನ್ನಡ ಪೌರಾಣಿಕ ಗೀತ ರೂಪಕ ಜರಗಿತು.
ಪ್ರವೀಣ್ ಕುಲಾಲ್ ಅರಸಿನಮಕ್ಕಿ ನಿರೂಪಿಸಿದರು. ಗಿರಿಧರ ಜೆ. ಮೂಲ್ಯ ವ೦ದಿಸಿದರು.
ಆರ್ಥಿಕ ಸಂಪತ್ತು ಶಾಸ್ವತ ಅಲ್ಲ. ಸತ್ಕರ್ಮಗಳ ಪುಣ್ಯಫಲವೇ ನಿಜವಾದ ಶಾಸ್ವತವಾಗಿರುವ ಸಂಪತ್ತು. ಸಾಮರಸ್ಯದಲ್ಲಿ ಜೀವಿಸಿದ ಮತ್ತು ಎಲ್ಲರನ್ನು ಪ್ರೀತಿಯಿಂದ ಕಂಡ ಸಮುದಾಯ ನಮ್ಮದು. ಭಕ್ತಿಯಿಂದ ಬದುಕನ್ನು ಅರ್ಥಪೂರ್ಣವಾಗಿಸೋಣ. ಮಠ, ಮಂದಿರ, ಶ್ರದ್ಧಾಕೇಂದ್ರಗಳಿಗಿರುವ ವಿಶೇಷ ಅರ್ಥವನ್ನು ತಿಳಿದುಕೊಂಡು ಮಕ್ಕಳಿಗೆ ತಿಳಿಸುವ ಕಾರ್ಯ ಮಾಡೋಣ.
ಮಾಣಿಲ ಶ್ರೀಧಾಮ ಶೀ ಮೋಹನದಾಸ ಪರಮಹಂಸ ಸ್ವಾಮೀಜಿ
ಇಂದಿನ ಕಾರ್ಯಕ್ರಮ
ಮೇ 19ರಂದು ಕ್ಷೇತ್ರದಲ್ಲಿ ಬೆಳಿಗ್ಗೆ ಶ್ರೀ ಲಕ್ಷ್ಮೀನಾರಾಯಣ ಹೃದಯಹೋಮ, ಸಂಜೆ ಶ್ರೀದುರ್ಗಾನಮಸ್ಕಾರ ಪೂಜೆ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 3 ಗಂಟೆಯಿಂದ ನೃತ್ಯ ವೈಭವ, 7 ರಿಂದ ನೃತ್ಯ ಸಂಗೀತ ವೈಭವ ಜರಗಲಿದೆ. ಸಂಜೆಯ ಧಾರ್ಮಿಕಸಭೆಯಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮಂಗಳೂರು ಬ್ರಹ್ಮಕುಮಾರೀಸ್ ಮುಖ್ಯ ಸಂಚಾಲಕಿ ಬ್ರಹ್ಮಕುಮಾರಿ ವಿಶ್ವೇಶ್ವರಿ, ಸಾಧ್ವಿ ಮಾತಾನಂದಮಯಿ, ಬೋಳೂರಿನ ಶ್ರೀಮಾತಾ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಆಶೀರ್ವಚನ ನೀಡಲಿದ್ದಾರೆ. ಕಸ್ತೂರಿ ಪಂಜ ಅಧ್ಯಕ್ಷತೆ ವಹಿಸಲಿದ್ದು, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ