ಸರ್ಕಾರ ರಚನೆ ಮಾಡುವಾಗ ಉಪ ಮುಖ್ಯಮಂತ್ರಿ ಅನ್ನುವ ಪದ ನಾಮದ ಹುದ್ದೆಯೇ ಇಲ್ಲ.ಹಾಗಾಗಿ ಇದೊಂದು ಸಂವಿಧಾನಕವಾಗಿ ಮಾನ್ಯತೆ ಗೌರವ ಪಡೆಯುವ ಹುದ್ದೆ ಅಲ್ಲವೇ ಅಲ್ಲ.ಆದರೂ ಈ ಹುದ್ದೆಯೇ ಮೇಲೆ ಅಷ್ಟೊಂದು ಬಯಕೆ ಯಾಕೆ ಅನ್ನುವುದು ನಮ್ಮಮುಂದಿರುವ ಪ್ರಶ್ನೆ.
ಸಂವಿಧಾನದಲ್ಲಿ ಉಲ್ಲೇಖಿಸಿರುವುದು ಏನೆಂದರೆ "There shall be a council of ministers headed by /Chief minister/.ಮಾತ್ರವಲ್ಲ ಇಲ್ಲಿ "ಕ್ಯಾಬಿನೆಟ್" ಅನ್ನುವ ಪದವೂ ಇಲ್ಲ.ಈ ಕ್ಯಾಬಿನೆಟ್;ಡ್ಯಾಪುಟಿ ಚಿಫ್ ಮಿನಿಸ್ಟರ್;ಉಸ್ತುವಾರಿ ಇವೆಲ್ಲವೂ ಕಾಲ ಕ್ರಮೇಣ ನಮ್ಮ ಅನುಕೂಲ ಅಂತಸ್ಥಿಗೇೂಸ್ಕರ ಸೃಷ್ಟಿಸಿ ಕೊಂಡ ಹುದ್ದೆಗಳು.
ಹಾಗಾದರೆ ಯಾವನೇ ಒಬ್ಬ ಸಚಿವನಿಗೆ ಯಾವುದೇ ಖಾತೆ ನೀಡದೆ ನೀನು ಉಪ ಮುಖ್ಯ ಮಂತ್ರಿ ಆಗುತ್ತಿಯಾ ಎಂದು ಕೇಳಿ ಅದಕ್ಕೆ ಆತ ಖಂಡಿತವಾಗಿಯೂ ಒಪ್ಪಿಕೊಳ್ಳಲಾರ.ಅಂದರೆ ಅವರ ಬಯಕೆ ಅಂದರೆ ಈ ಉಪ ಮುಖ್ಯ ಮಂತ್ರಿ ಅನ್ನುವ ಪದ ನಾಮಕ್ಕೆ ಸರಿ ಸಮಾನವಾದ ಬೆಲೆ ಬಾಳುವ ಖಾತೆ ಸಿಗುತ್ತದೆ ಅನ್ನುವುದರ ಜೊತೆಗೆ ಕೆಲವರಿಗೆ ಝಿರೊ ಟ್ರಾಫಿಕ್ ನಲ್ಲಿ ತಿರುಗುವ ಮಯಾ೯ದೆ ಗೇೂಸ್ಕರ ಅವರ ಬೇಡಿಕೆ.ಈ ಸಮಿಶ್ರ ಸರ್ಕಾರ ವ್ಯವಸ್ಥೆ ಬಂದನಂತರವಂತೂ ಎಲ್ಲರನ್ನೂ ತೃಪ್ತಿ ಪಡಿಸುವ ಸಲುವಾಗಿ ಈ "ಉಪ ಮುಖ್ಯ ಮಂತ್ರಿಗಳು" ಹೆಚ್ಚು ಹೆಚ್ಚು ಹುಟ್ಟಿ ಕೊಂಡರು.
ಪ್ರಸ್ತುತ ನಮ್ಮ ರಾಜ್ಯ ಸರ್ಕಾರದಲ್ಲಿ ಒಂದೇ ಉಪ ಮುಖ್ಯ ಮಂತ್ರಿ ಹುದ್ದೆ ಸೃಷ್ಟಿಸಿ ಅದನ್ನುಡಿ.ಕೆ.ಶಿ.ಒಬ್ಬರಿಗೆ ನೀಡಿದ್ದಾರೆ ಯಾಕೆ ಕೇಳಿದರೆ "ಡಿ.ಕೆ.ಶಿ.ಅವರೇ ಈಗ ನೀವು ಒಬ್ಬರೇ ಉಪ ಪ್ರಾಂಶುಪಾಲರು ಮುಂದೆ ನೀವೇ ಪ್ರಾಂಶುಪಾಲರು ಅನ್ನುವ ವಿಶ್ವಾಸ ರೂಪಿಸುವ ದೃಷ್ಟಿಯಿಂದ ಮಾತ್ರ..ಹಾಗಾಗಿ ಇನ್ನೊಂದು ಉಪ ಮುಖ್ಯ ಮಂತ್ರಿ ಸೃಷ್ಟಿಸುವ ಕೆಲಸಕ್ಕೆ ಕೈ ಪಕ್ಷ ಕೈ ಹಾಕಲೇ ಇಲ್ಲ. ಈ ಹುದ್ದೆಯ ತಮಾಷೆ ಎಷ್ಟು ಚೆನ್ನಾಗಿದೆ ಅಂದರೆ ಕೆಲವುಕಾಲೇಜಿಗಳಲ್ಲಿ ವೈಸ್ ಪ್ರಿನ್ಸಿಪಾಲ್ ಹುದ್ದೆಯೇ ಇರುವುದಿಲ್ಲ ಆದರೆ ಕೆಲವೊಂದು ಸಮಸ್ಯೆ ಮಾಡ ಬಲ್ಲ ಹಿರಿಯ ಪ್ರಾಧ್ಯಾಪಕರಿದ್ದರೆ ಅವರನ್ನು ಕುಶಿ ಪಡಿಸಿ ಸುಮ್ಮನೆ ಕೂರಿಸಿಲು" ವೈಸ್ ಪ್ರಿನ್ಸಿಪಾಲ್" ಹುದ್ದೆಯ ಪದ ನಾಮ ನೀಡಿ ಪ್ರತ್ಯೇಕವಾಗಿ ಒಂದು ಸಣ್ಣ ರೂಂಮಿನಲ್ಲಿ ಕೂರಿಸಿ ಚೆಂದ ಕಾಣುವುದು ಆಡಳಿತ ಮಂಡಳಿಯ ಟ್ಯಾಕ್ಟೀಸ್..ಅದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲಿ ಕೂಡ ಡಿ.ಕೆ.ಶಿ ಅವರಿಗಾಗಿಯೇ ಒಂದು ಸ್ಪೇಷಲ್ ಉಪ ಮುಖ್ಯ ಮಂತ್ರಿ ಹುದ್ದೆ ಸೃಷ್ಟಿಸಿ ಪ್ರತ್ಯೇಕವಾಗಿ ಕೂರಿಸುವ ಕೆಲಸ ಕಾಂಗ್ರೆಸ್ ಹೈಕಮಾಂಡ್ ಮಾಡಿದೆ ಅನ್ನಿಸುತ್ತದೆ.
-ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ