ಎಸ್.ಎಸ್.ಎಲ್.ಸಿಯಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠಕ್ಕೆ 100 ಶೇಕಡಾ ಫಲಿತಾಂಶ

Upayuktha
0

ಬದಿಯಡ್ಕ: 2022-23ನೆಯ ಸಾಲಿನ ಕೇರಳ ರಾಜ್ಯ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಎಲ್ಲಾ ವಿದ್ಯಾರ್ಥಿಗಳು ಯಾವುದೇ ಗ್ರೇಸ್ ಮಾರ್ಕ್ ಇಲ್ಲದೆ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ. 11 ಮಂದಿ ವಿದ್ಯಾರ್ಥಿಗಳು ಎಲ್ಲಾ ಹತ್ತು ವಿಷಯಗಳಲ್ಲೂ ಎ ಪ್ಲಸ್ ಅಂಕ ಹಾಗೂ 3 ವಿದ್ಯಾರ್ಥಿಗಳು 9 ವಿಷಯಗಳಲ್ಲಿ ಎಪ್ಲಸ್ ಅಂಕ ಪಡೆದು ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿರುತ್ತಾರೆ. ಶಾಲೆಯ ಹೆಮ್ಮೆಯ ಸಾಧಕ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಆಡಳಿತ ಮಂಡಳಿ, ಹಾಗೂ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.

ವಿದ್ಯಾರ್ಥಿಗಳಾದ ಅಭಯ ಶರ್ಮ ಪಿ, ಅಮೋಘ ಕೃಷ್ಣ ಬಿ, ಭರತ್ ಕೃಷ್ಣ ಕೆ ಎಸ್, ಶ್ರೀನಿಧಿ ಎಸ್, ಶ್ರೀವತ್ಸ ಕೆ, ಸುಹಾನ್ ಎನ್ ಶೆಟ್ಟಿ, ಸುಧನ್ವ ಪರಮೇಶ್ವರ ಭಟ್ ಪಿ, ಸುಹಾಸ್ ಬಿ ಜಿ, ಸ್ಮೃತಿಮಾಲಾ, ಸ್ಕಂದ ಶರ್ಮ ಜೆ ಕೆ  ಹಾಗೂ ದ್ರಿಷಿಕಾ ರೈ ಎಲ್ಲಾ ವಿಷಯದಲ್ಲಿ ಎಪ್ಲಸ್ ಅಂಕ ಪಡೆದಿರುತ್ತಾರೆ. ಶ್ರೀಚಕ್ರಪಾಣಿ, ಶ್ರೀನಿಧಿ ಎನ್, ಅಂಜನಾ ಎಸ್. ಬಾಲನ್ 9 ವಿಷಯಗಳಲ್ಲಿ ಎಪ್ಲಸ್ ಪಡೆದಿರುತ್ತಾರೆ.

ಒಟ್ಟು 21 ಮಂದಿ ಪರೀಕ್ಷೆಯನ್ನು ಎದುರಿಸಿ ತೇರ್ಗಡೆಯಾಗಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top