'ಪೊಸಡಿಗುಂಪೆ' 5ನೇ ವಾರ್ಷಿಕೋತ್ಸವ: ಕಾರ್ಯಕ್ರಮ ವೈವಿಧ್ಯ

Upayuktha
0

ಧರ್ಮತ್ತಡ್ಕ: ಪೊಸಡಿಗುಂಪೆ ಮಾಸ ಪತ್ರಿಕೆಯ ಐದನೇ ವಾರ್ಷಿಕೋತ್ಸವದ ಪ್ರಯುಕ್ತ ಗಡಿನಾಡ ಕನ್ನಡಿಗರ ದರ್ಪಣ ಕಾರ್ಯಕ್ರಮವು ಶನಿವಾರ (ಮೇ 20) ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕದಲ್ಲಿ ನಡೆಯಿತು.


ಪೆರ್ಮುದೆ ಬಿಪಿಪಿಎಎಲ್‌ಪಿ ಶಾಲೆಯ ಮುಖ್ಯೋಪಾಧ್ಯಾಯ ಸದಾಶಿವ ಇವರು ಕಾರ್ಯಕ್ರಮ ಉದ್ಘಾಟಿಸಿದರು. ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆಯ ಪ್ರಾoಶುಪಾಲ ರಾಮಚಂದ್ರ ಭಟ್  ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ವೈದ್ಯೆ, ಸಾಹಿತಿ ಡಾ. ವಾಣಿಶ್ರೀ ಕಾಸರಗೋಡು, ಧರ್ಮತ್ತಡ್ಕ ಎಯುಪಿ ಶಾಲೆಯ ಮುಖ್ಯೋಪಾಧ್ಯಾಯ ಮಹಾಲಿಂಗ ಭಟ್ ಹಾಗೂ ಶಾರದಾ ತನಯ ಬಾಯಾರು ಭಾಗವಹಿಸಿದ್ದರು.


ಅಡ್ವಕೇಟ್ ಥಾಮಸ್ ಡಿ ಸೋಜಾ ಸೀತಾoಗೋಳಿ, ಪಿ ರಾಮಚಂದ್ರ ಭಟ್ ಧರ್ಮತ್ತಡ್ಕ ಶುಭ ಹಾರೈಸಿದರು. ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯಿಂದ ವೈವಿಧ್ಯಮಯ ಸಾಹಿತ್ಯ ಗಾನ ನೃತ್ಯ ವೈಭವವು ಸುಮಾರು 3 ಗಂಟೆ ಕಾಲ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ವಾಣಿಶ್ರೀ ಕಾಸರಗೋಡು ಅವರು ಕಾವ್ಯ ವಾಚನದ ಜೊತೆಗೆ ಸಮಗ್ರ ಕಾರ್ಯಕ್ರಮದ ನಿರೂಪಣೆ ಮಾಡಿದರು.


ಗುರುರಾಜ್ ಕಾಸರಗೋಡು, ತನ್ವಿ ಶೆಟ್ಟಿ ಪಾಣಾಜೆ, ಸನುಷಾ ಸುನಿಲ್, ಚುಕ್ಕಿ ವಿಟ್ಲ, ಅವನಿ ಎಂ ಎಸ್ ಸುಳ್ಯ, ಪ್ರಥಮ್ಯ ಯು ವೈ ನೆಲ್ಯಾಡಿ, ಸನುಷಾ ಸುಧಾಕರನ್, ಐಶ್ವರ್ಯ ಆರ್ ಪೂಜಾರಿ, ಹವೀಶ್ ಆರ್ ಪೂಜಾರಿ, ಶ್ವೇತಾ ಯು ವೈ ನೆಲ್ಯಾಡಿ, ಅಹನಾ ಎಸ್ ರಾವ್, ಸಿ ಕೆ ಮಾಸ್ಟರ್ ಸುಳ್ಯ, ಆಸ್ತಾ ಶೆಟ್ಟಿ ಕಾಸರಗೋಡು, ಹೃತಿಕಾ, ಇಶಾನ್, ಆಧ್ಯಾ, ಕೌಶಿಕಾ, ಆರಾದ್ಯ, ಸುವಿನ್ಯ ಎಡನೀರು, ವರ್ಷಾ ಶೆಟ್ಟಿ ಬಂಬ್ರಾಣ, ಸಾನ್ವಿತಾ ಎ ಎನ್, ಧನ್ವಿ ಬಿ.ಕೆ, ಜೀಕ್ಷಾ, ವಿಷ್ಣು ಸುಧಾಕರನ್, ಉಷಾ ಸುಧಾಕರನ್, ಕೃಪೇಶ್ ಎಂ ಆರ್, ಭಾನ್ವಿ ಕುಲಾಲ್ ಮುಂತಾದ ಸಂಸ್ಥೆಯ ಸುಮಾರು 35ಕ್ಕೂ ಅಧಿಕ ಕಲಾವಿದರು ಪ್ರತಿಭಾ ಪ್ರದರ್ಶನ ಮಾಡಿ ಪ್ರೇಕ್ಷಕರನ್ನು ರಂಜಿಸಿದರು.


ಜೋನ್ ಡಿ ಸೋಜಾ ಅವರ ಸಂಪಾದಕತ್ವದ ಪೊಸಡಿ ಗುಂಪೆ ಮಾಸಪತ್ರಿಕೆಯ ವತಿಯಿಂದ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.


ಸಂಸ್ಥೆಯ ಅಧ್ಯಕ್ಷರು ಡಾ. ವಾಣಿಶ್ರೀ ಕಾಸರಗೋಡು ಹಾಗೂ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ಇವರನ್ನು ಜೋನ್ ಡಿ ಸೋಜಾ ಅವರು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಿದರು. ಖ್ಯಾತ ಕವಿ, ಸಾಹಿತಿ ವಿ ಬಿ ಕುಳಮರ್ವ ಇವರ ಸಾರಥ್ಯದಲ್ಲಿ ಸುಮಾರು 20 ಕವಿಗಳ ಕವನ ವಾಚನದ ಕವಿಗೋಷ್ಠಿ ಜರುಗಿತು. ಇದೇ ಸಂದರ್ಭ ಹಲವಾರು ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಆಸಕ್ತ ಗಾಯಕರಿಂದ ಕರೋಕೆ ಗಾಯನ ನಡೆಯಿತು.

ವರದಿ: ಗುರುರಾಜ್ ಕಾಸರಗೋಡು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top