ಐಸಿಎಆರ್-ಎನ್‍ಐಎಎನ್‍ಪಿ ಜತೆಗೆ ಕೆಪಿಎಫ್‍ಬಿಎ ಒಪ್ಪಂದಕ್ಕೆ ಸಹಿ

Upayuktha
0


ಮಂಗಳೂರು: ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್)- ನ್ಯಾಷನಲ್  ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ನ್ಯೂಟ್ರಿಷನ್ ಮತ್ತು ಫಿಸಿಯಾಲಜಿ (ಎನ್‍ಐಎಎನ್‍ಪಿ) ಜತೆಗೆ ಶುಕ್ರವಾರ ಕರ್ನಾಟಕ ಪೌಲ್ಟ್ರಿ ಫಾರ್ಮರ್ಸ್ ಮತ್ತು ಬ್ರೀಡರ್ಸ್ ಅಸೋಸಿಯೇಷನ್ (ಕೆಪಿಎಫ್‍ಬಿಎ) ನೊಂದಿಗೆ ಕುಕ್ಕುಟ ಕ್ಷೇತ್ರದಲ್ಲಿ ಹೆಚ್ಚಿನ ಸಹಯೋಗದ ಸಂಶೋಧನೆಗಾಗಿ ತಿಳುವಳಿಕಾ ಒಪ್ಪಂದ(ಎಂಒಯು)ಗೆ ಸಹಿ ಹಾಕಲಾಯಿತು. 


ಬೆಂಗಳೂರಿನ ಐಸಿಎಆರ್-ಎನ್‍ಐಎಎನ್‍ಪಿ ನಿರ್ದೇಶಕ ಡಾ.ರಾಘವೇಂದ್ರ ಭಟ್ ಮತ್ತು ಕೆಪಿಫ್‍ಬಿಎ ಅಧ್ಯಕ್ಷ ಡಾ.ಬಿ. ಸುಶಾಂತ್ ರೈ ಒಪ್ಪಂದಕ್ಕೆ ಸಹಿ ಹಾಕಿದರು.


ಕುಕ್ಕುಟೋದ್ಯಮ ಕ್ಷೇತ್ರವು ಅಗಾದ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಇಂತಹ ಸಂಸ್ಥೆಯ ಸಹಯೋಗದಿಂದ ಸಂಶೋಧನೆಯ ಅವಶ್ಯಕತೆ, ವಿಶೇಷವಾಗಿ ಕುಕ್ಕುಟಗಳ ಪೋಷಣೆ ಕ್ಷೇತ್ರದಲ್ಲಿ ಅಗುತ್ತಿರುವ ವಿಚಾರಗಳು, ಪೌಷ್ಠಿಕಾಂಶದ ಸವಾಲುಗಳನ್ನು ವೈಜ್ಞಾನಿಕ ರೀತಿಯಲ್ಲಿ ಎದುರಿಸಲು ಎರಡೂ ಸಂಸ್ಥೆಗಳು ತಾಂತ್ರಿಕ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.  ಕುಕ್ಕುಟಗಳ ಆರೋಗ್ಯದ ಮಹತ್ವವನ್ನು ಒತ್ತಿಹೇಳುತ್ತವೆ ಮತ್ತು ಪರಿಣಾಮವಾಗಿ ಅಂತಿಮ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ನೀಡಲು ಇದು ಸಹಕಾರಿಯಾಗುತ್ತದೆ.


ಐಸಿಎಆರ್-ಎನ್‍ಐಎಎನ್‍ಪಿ ನಿರ್ದೇಶಕ ಡಾ.ರಾಘವೇಂದ್ರ ಭಟ್ ಮಾತನಾಡಿ, ಇಂತಹ ಒಪ್ಪಂದ ಮೂಲಕ ಸಂಸ್ಥೆಯಲ್ಲಿ ಅಗುತ್ತಿರುವ ಸಂಶೋಧನೆಗಳು ಅದರಿಂದ ಸಿಗುವ ಜ್ಞಾನ ಕುಕ್ಕುಟ ಕ್ಷೇತ್ರದ ಬೆಳವಣಿಗೆ ಪೂರಕವಾಗಲಿದೆ ಎಂದರು.


ಕೆಪಿಎಫ್‍ಬಿಎ ಚಟುವಟಿಕೆಗಳ ಬಗ್ಗೆ ವಿವರ ನೀಡಿದ ಡಾ.ಸುಶಾಂಶ್ ರೈ, ಕರ್ನಾಟಕದಲ್ಲಿ ಕುಕ್ಕುಟ ಸಾಕಾಣಿಕೆ ಕ್ಷೇತ್ರವು ಸಂಘಟಿತ ಮತ್ತು ಅಸಂಘಟಿತವಾಗಿ ಬಹಳ ದೊಡ್ಡದಾಗಿದೆ ಮತ್ತು ಗುಣಮಟ್ಟದ ಉತ್ಪನ್ನಗಳನ್ನು ನೀಡುವುದಲ್ಲದೆ ವಿಶ್ವ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರಲು ಪೌಷ್ಠಿಕಾಂಶದ ಬಗ್ಗೆ ವೈಜ್ಞಾನಿಕ ಒಳಹರಿವಿನ ಅಗತ್ಯವಿದೆ. ಇದಕ್ಕೆ ಈ ಸಂಸ್ಥೆ ಜತೆಗಿನ ಒಪ್ಪಂದ ನೆರವಾಗಲಿದೆ ಎಂದರು.


ಕೆಪಿಎಫ್‍ಬಿಎ ಮಾಜಿ ಅಧ್ಯಕ್ಷ ಎಂ.ಸಿ.ಆರ್.ಶೆಟ್ಟಿ,  ಕೆಪಿಎಫ್‍ಬಿಎ ತಾಂತ್ರಿಕ ಸಮಿತಿಯ ಅಧ್ಯಕ್ಷ ಡಾ.ಜಿ.ಬಿ.ಪುಟ್ಟಣ್ಣಯ್ಯ, ಪ್ರಧಾನ ಕಾರ್ಯದರ್ಶಿ ಡಾ.ಅಂಜನ್ ಗೋಸ್ವಾಮಿ, ಕೆಪಿಎಫ್‍ಬಿಎ ಕಾರ್ಯನಿರ್ವಾಹಕ ಕಾರ್ಯದರ್ಶಿ ಇನಾಯತ್ ಉಲ್ಲಾ ಖಾನ್, ಕೆಪಿಎಫ್‍ಬಿಎ ಹಿರಿಯ ವಿಜ್ಞಾನಿ ಡಾ.ಉಮಾಕಾಂತ ಬಿ. ಐಸಿಎಆರ್-ಎನ್‍ಐಎಎನ್‍ಪಿಯ  ಪ್ರಧಾನ ವಿಜ್ಞಾನಿ ಡಾ.ಎ.ವಿ.ಇಳಂಗೋವನ್, ಪ್ರಧಾನ ವಿಜ್ಞಾನಿ ಡಾ.ಕೆ.ವಿ.ಎಚ್.ಶಾಸ್ತ್ರಿ, ಐ.ಸಿ ಪಿಎಂಇ ಡಾ.ಡಿ.ಟಿ.ಪಾಲ್ ಮತ್ತು ಐ.ಸಿ ಐಟಿಎಂಯು ಡಾ.ಅತುಲ್ ಪಿ ಕೋಲ್ಟೆ  ಪ್ರತಿನಿಧಿಗಳಾಗಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top