ತಾಳ್ಮೆಯಿಂದಲೇ ಸಂಘಟನೆಗಳ ಕ್ರಿಯಾಶೀಲತೆ: ಪ್ರಭಾ ಸುವರ್ಣ

Upayuktha
0

ಮಂಗಳೂರು : ಸಂಘಟನೆ ಮತ್ತು ಸಾಧನೆಗೆ ಅಗಾಧ ಪರಿಶ್ರಮದ ಅವಶ್ಯಕತೆ ಇದೆ. ಅತ್ಯಂತ ತಾಳ್ಮೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಂಘಟನೆಗಳು ನಿರಂತರವಾಗಿ ಕ್ರಿಯಾಶೀಲತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಮಿಸ್ಸೆಸ್ ಇಂಡಿಯಾ ಕ್ಲಾಸಿಕ್ - ರನ್ನರ್ ಅಪ್ ವಿಜೇತೆ ಮುಂಬಯಿಯ ಶ್ರೀಮತಿ ಪ್ರಭಾ ಸುವರ್ಣ ಹೇಳಿದರು.


ಅವರು ಮಂಗಳೂರಿನ ಅಬ್ಬಕ್ಕ ವಿಹಾರ ನೌಕೆಯಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ (ಐ) ಮತ್ತು ಮಂಜುನಾಥ್ ಎಜುಕೇಶನ್ ಟ್ರಸ್ಟ್ (ರಿ), ಮಂಗಳೂರು ಸಂಯುಕ್ತವಾಗಿ ಆಯೋಸಿದ 38ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.


ಐಸಿಎಫ್‌ಸಿಐ  ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್  ಅವರು ಮಾತನಾಡಿ, ನಾವು 30ಕ್ಕೂ ಹೆಚ್ಚು ದೇಶಗಳಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸೌಹಾರ್ದತೆ, ಸ್ನೇಹ ಮತ್ತು ಸಹೋದರತೆಯ ಸಂದೇಶವನ್ನು ಸಾರುವ ಪ್ರಯತ್ನವನ್ನು 15 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇವೆ. ಅದು "ನಾವು ವಿಶ್ವ ಸೌಹಾರ್ದ ಪ್ರಿಯರು" ಧ್ಯೇಯ ವಾಕ್ಯದೊಂದಿಗೆ ನಡೆಯುತ್ತಿದೆ ಎಂದರು. 


ದುಬೈಯ ತುಳುಕೂಟದ ಮಾಜಿ ಸಂಚಲಕರಾದ ಶೇಕಬ್ಬ ಕೋಟೆ ಹೆಜಮಾಡಿ ಅವರು ಮಾತನಾಡಿ, ತಂದೆ ತಾಯಿ ಕೊಡುವ ಸಂಸ್ಕಾರ ಅಮೂಲ್ಯವಾದದು. ಅದು ಜೀವನ ಪರ್ಯಂತ ನಮ್ಮೊಂದಿಗೆ ಉಳಿಯುತ್ತದೆ, ವಿವಿಧತೆಯಲ್ಲಿ ಏಕತೆಯನ್ನು ತೋರುವ ಮನೋಧರ್ಮ ಸರ್ವ ಶ್ರೇಷ್ಠವಾದದ್ದು ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಫಿಶರೀಸ್ ಕಾಲೇಜಿನ ನಿವೃತ್ತ ಡೀನ್ ಡಾ‌. ಎಸ್ ಎಂ. ಶಿವಪ್ರಕಾಶ್, ನಮ್ಮ ದೇಶದ ಪ್ರತಿಯೊಂದು ರಾಜ್ಯವು ವಿಭಿನ್ನ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿವೆ. ಆದರೆ ಅವುಗಳೆಲ್ಲದರ ಸಾರ ಸಮುದಾಯಗಳ ನಡುವೆ ಸಾಮರಸ್ಯವನ್ನು ಬೆಸೆಯುವುದೇ ಆಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ಬೆಂಗಳೂರಿನ ಸ್ವಾಮಿ ಎಂಟರ್ಪ್ರೈಸಸ್ ಎಂ.ಡಿ. ಗೋ ನಾ ಸ್ವಾಮಿ, ಮೈಸೂರಿನ ನಿವೃತ್ತ ಡಿವೈಎಸ್ಪಿ. ಕೆ ಎಸ್ ಕೃಷ್ಣಮೂರ್ತಿ ಮತ್ತು ಮನೋಶಾಸ್ತ್ರಜ್ಞ ಹಾಗು ಆಪ್ತ ಸಮಾಲೋಚಕರಾದ ಡಾ. ಗುರುರಾಜ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ವಸಂತ ಮುರಳಿ ಬೆಂಗಳೂರು, ಪ್ರತಿಭಾ ಸಾಲಿಯಾನ್ ಮಂಗಳೂರು, ವಾಮನ ಕುದ್ರೊಳಿ ಮತ್ತು ಡಾ ಸಂಗೀತಾ ಹೊಳ್ಳ ಅವರಿಗೆ ಗೌರವ ಪ್ರಶಸ್ತಿ ನೀಡಿ  ಪುರಸ್ಕರಿಸಲಾಯಿತು.


ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರತಿಭಾ ಸಾಲ್ಯಾನ್ , ಪ್ರತೀಕ್ಷಾ ಪ್ರಭು ಮತ್ತು ತಂಡದಿಂದ ವಿವಿಧ ನೃತ್ಯಗಳು ಹಾಗು ಗಾಯಕರಾದ ಗೋ. ನಾ. ಸ್ವಾಮಿ, ಡಾ. ಶಿವಪ್ರಕಾಶ್, ಶಿವರಾಜ್ ಪಾಂಡೇಶ್ವರ, ‌ಚಂದ್ರಕಾಂತ್ ಮತ್ತು ಎನ್. ನಾಗೇಂದ್ರ ಇವರು ಕನ್ನಡ ತುಳು ಮತ್ತು ಹಿಂದಿ ಗೀತೆಗಳನ್ನು ಹಾಡಿ ರಂಜಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top