'ಕಾದಂಬರಿಗಳಿಂದ ಕನ್ನಡಕ್ಕೆ ಜಾಗತಿಕ ಮಾನ್ಯತೆ ತಂದು ಕೊಟ್ಟವರು ಡಾ. ಬೈರಪ್ಪ'

Upayuktha
0

 


ಹಾಸನ: ಕಾದಂಬರಿಗಳಿಂದ ಕನ್ನಡಕ್ಕೆ ಜಾಗತಿಕ ಮಾನ್ಯತೆಯನ್ನು ತಂದುಕೊಟ್ಟವರು ಡಾ. ಎಸ್.ಎಲ್. ಬೈರಪ್ಪನವರು ಎಂದು ಲೇಖಕ ಗೊರೂರು ಶಿವೇಶ್ ಅಭಿಪ್ರಾಯಪಟ್ಟರು.


ಹಾಸನದ ಮನೆ ಮನೆ ಕವಿಗೋಷ್ಠಿ ವತಿಯಿಂದ ಗಂಗಾಧರ ಬಿ.ಕೆ. ಇವರ ಪ್ರಾಯೋಜನೆಯಲ್ಲಿ ಅಕ್ಷರ ಬುಕ್ ಹೌಸ್‍ನಲ್ಲಿ ನಡೆದ 305ನೇ ತಿಂಗಳ ಕಾರ್ಯಕ್ರಮದಲ್ಲಿ 'ಡಾ.ಎಸ್.ಎಲ್.ಬೈರಪ್ಪನವರ ಬದುಕು ಮತ್ತು ಬರಹ' ಕುರಿತು ಅವರು ಮಾತನಾಡಿದರು.


ದಾರುಣತೆ ಬಡತನದಿಂದ ಕೂಡಿದ ಬಾಲ್ಯ, 3 ಗಂಟೆ ಅವಧಿಯಲ್ಲಿ ಪ್ಲೇಗಿನ ಮಹಾಮಾರಿಗೆ ಸಹೋದರ ಸಹೋದರಿಯರನ್ನು ಕಳೆದುಕೊಂಡು ಏಕಾಂಗಿಯಾಗಿ ಅಂತ್ಯ ಸಂಸ್ಕಾರ ಮಾಡಬೇಕಾದ ದು:ಖ, 11ನೇ ವಯಸ್ಸಿಗೆ ತಾಯಿ ಕಳೆದುಕೊಂಡು ವಾರಾನ್ನದ ಮೂಲಕ ಓದಿ ಪದವಿಯಲ್ಲಿ ತತ್ವಶಾಸ್ತ್ರ ಅಭ್ಯಸಿಸಿ, ಬೋಧಿಸಿ ತತ್ವಶಾಸ್ತ್ರದ ಧರ್ಮ ಕರ್ಮಗಳ ಜಿಜ್ಞಾಸೆಯನ್ನು ತಮ್ಮ ಗೃಹ ಭಂಗ, ಅನ್ವೇಷಣ, ವಂಶವೃಕ್ಷ ಮುಂತಾದ ಕೃತಿಗಳಲ್ಲಿ ವಿಶಿಷ್ಟವಾಗಿ ಚಿತ್ರಿಸಿದ ಕಾರಣ ಜನಪ್ರಿಯ ಲೇಖಕರಾಗಿ ಅಪಾರ ಓದುಗ ವಲಯ ಸೃಷ್ಟಿಸಿದ ಕೀರ್ತಿಗೆ ಭಾಜನರು. ಅವರ ಶೃಂಗ ಕೃತಿ 'ಪರ್ವ'ದಲ್ಲಿ ಮಹಾಭಾರತದ ಕಾಲಘಟ್ಟವನ್ನು ವಿಶ್ಲೇಷಣಾತ್ಮಕವಾಗಿ ಗುರುತಿಸಿದ್ದಾರೆ. ಭೀಷ್ಮ. ಧೃತರಾಷ್ಟ್ರ ನಂತರದ ತಲೆಮಾರನ್ನು ಕುರುಕ್ಷೇತ್ರ ಯುದ್ಧದ ಚೌಕಟ್ಟಿನಲ್ಲಿ ತಂದು ಕಾಲಘಟ್ಟದಲ್ಲಿ ಏರು ಪೇರಾಗದಂತೆ ವಯಸ್ಸು ಮತ್ತು ಅವರ ಯುದ್ಧ ಸಾಮರ್ಥ್ಯದ ಬಗ್ಗೆ ನಮಗೆ ಅನುಮಾನ ಬಾರದಂತೆ ನಿರೂಪಿಸಿದ ಶೈಲಿ, ಇತರೆ ಸಿದ್ಧ ಕೃತಿಗಳ ರೀತಿ ಪವಾಡಗಳಿಗೆ ಹೊರಳದಂತೆ, ಯಾವ ಪಾತ್ರವನ್ನು ಪ್ರೀತಿಸುವುದಾಗಲಿ ದ್ವೇಷಿಸುವುದಾಗಲಿ ಮಾಡದೆ ಎಲ್ಲಾ ಪಾತ್ರಗಳನ್ನು ಸಶಕ್ತವಾಗಿ ಚಿತ್ರಿಸಿರುವುದು ಕಾದಂಬರಿಕಾರರ ಹೆಗ್ಗಳಿಕೆ ಎಂದರು.


ಕವಿಗೋಷ್ಠಿಯಲ್ಲಿ ಸುವರ್ಣ ಶಿವಪ್ರಸಾದ್, ಲಲಿತ ಎಸ್, ಪ್ರೇಮ ಪ್ರಶಾಂತ್, ಪ್ರಣತಿ, ಪುಣ್ಯ ಪಿ.ಹರಿತ್ಸಾ, ಶ್ರೀವಿಜಯ, ಸೌಮ್ಯ ಪ್ರಸಾದ್, ಎನ್.ಎಲ್.ಚನ್ನೇಗೌಡ, ಗೊರೂರು ಅನಂತರಾಜು, ಧನಲಕ್ಷ್ಮಿ, ನೀಲಾವತಿ ಸಿ.ಎನ್. ಪರಮೇಶ್ ಮಡಬಲು, ಲಕ್ಷ್ಮಿದೇವಿ ದಾಸಪ್ಪ, ರಾಜೇಶ್ವರಿ ಹುಲ್ಲೇನಹಳ್ಳಿ, ಕೆ.ಎನ್.ಚಿದಾನಂದ ಕವಿತೆ ವಾಚಿಸಿದರು. 


ಬಿ.ವಿ.ಚಿತ್ರ, ಎನ್. ಗೀತಾ, ಬಿ.ವಿ. ಸ್ವರ್ಣಪ್ರೇಮ, ಎಂ.ಬಿ.ವಿಜಯಕುಮಾರ್, ಹಾಲಸಿದ್ದಪ್ಪ, ಯಾಕೂಬ್, ಎಸ್.ಡಿ.ತಿಮ್ಮೆಗೌಡ, ಯು.ಎಸ್.ಬಸವರಾಜ್, ಅಗ್ರಹಾರ ಪ್ರಶಾಂತ್, ಚಂದ್ರಶೇಖರ್, ಜೆ.ಆರ್.ರವಿಕುಮಾರ್, ಮಂಜುಳ ಕುಮಾರಸ್ವಾಮಿ, ಎಲ್.ಎಸ್.ನಿರ್ಮಲ ಇದ್ದರು. ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಪರಮೇಶ್ ಮಡಬಲು ವಂದಿಸಿದರು. ಶ್ರೀಮತಿ ಧನಲಕ್ಷ್ಮಿಯವರ ಗಾಯನ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.


306ನೇ ತಿಂಗಳ ಮನೆ ಮನೆ ಕವಿಗೋಷ್ಠಿಯು ಶ್ರೀಮತಿ ಪದ್ಮಾವತಿ ವೆಂಕಟೇಶ್, ಹೇಮಾವತಿ ನಗರ, ಹಾಸನ ಇವರ ಪ್ರಾಯೋಜನೆಯಲ್ಲಿ ದಿನಾಂಕ 4-6-2023ರಂದು ನಡೆಯುವುದೆಂದು ಸಂಚಾಲಕ ಗೊರೂರು ಅನಂತರಾಜು ತಿಳಿಸಿದ್ದಾರೆ. 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top