ಬಿಲ್ಲವಾಸ್ ದುಬಾಯಿಯ 25ನೇ ವಾರ್ಷಿಕೋತ್ಸವ: ಕ್ರೌನ್ ಪ್ಲಾಝದಲ್ಲಿ ದುಬಾಯಿ ಬಿಲ್ಲವೋತ್ಸವ

Upayuktha
0

ಮಂಗಳೂರು: ಬಿಲ್ಲವಾಸ್ ದುಬಾಯಿಯ ಇದರ 25ನೇ ವಾರ್ಷಿಕೋತ್ಸವದ ಅಂಗವಾಗಿ ದುಬಾಯಿಯ ಶೇಕ್ ಝಹಿದ್ ರೋಡ್ ನಲ್ಲಿರುವ ಕ್ರೌನ್ ಪ್ಲಾಝದಲ್ಲಿ ದುಬಾಯಿ ಬಿಲ್ಲವೋತ್ಸವ ಬಹಳ ಅದ್ದೂರಿಯಾಗಿ ನಡೆಯಿತು.


ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾಸಂಸ್ಥಾನ ರೇಣುಕಾಪೀಠ ಸೋಲೂರು ಇದರ ಪೀಠಾಧಿಪತಿಗಳಾದ ಶ್ರೀ ವಿಖ್ಯಾತನಂದ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿ, ಆಶೀರ್ವಾಚನ ನೀಡಿದರು.


ಚಕ್ರಪಾಣಿ ನೃತ್ಯ ಕಲಾಕೇಂದ್ರ ಅತ್ತಾವರ ಮಂಗಳೂರು ಸಂಸ್ಥೆಯ ವಿದ್ವಾನ್ ಸುರೇಶ್ ಅತ್ತಾವರ ಇವರ ನಿರ್ದೇಶನದಲ್ಲಿ ನಡೆದ ಶ್ರೀಮತಿ ಯಶೋಧ ಮೋಹನ್ ವಿರಚಿತ ಬಿರ್ವ ಬೊಳ್ಳಿಲು ನೃತ್ಯ ರೂಪಕ ನೆರೆದ ಸಭಿಕರ ಮನಗೆದ್ದಿತು. ಈ ನೃತ್ಯ ರೂಪಕದಲ್ಲಿ 150ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದರು. ವಿದ್ವಾನ್ ಸುರೇಶ್ ಅತ್ತಾವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಪ್ರಖ್ಯಾತ ನಿರೂಪಕರಾದ ದಿನೇಶ್ ಸುವರ್ಣ ಅವರು ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಿರೂಪಿಸಿದರು. ದೀಪಕ್ S. P ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಹಾಗೂ ನೆರೆದ ಎಲ್ಲಾ ಸಭಿಕರಿಗೆ ಧನ್ಯವಾದ ಸಮರ್ಪಿಸಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top