
ಹಾಸನ: ಮನೆ ಮನೆ ಕವಿಗೋಷ್ಠಿಯ 306ನೇ ತಿಂಗಳ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮವನ್ನು ಶ್ರೀಮತಿ ಅಂಜಲಿ ಗೋವಿಂದರಾಜು, ವ್ಯವಸ್ಥಾಪಕ ನಿರ್ದೇಶಕರು ಇವರ ಪ್ರಾಯೋಜಕತ್ವದಲ್ಲಿ ದಿನಾಂಕ 4-6-2023ರ ಭಾನುವಾರ 3.30ಕ್ಕೆ ಭುವನೇಶ್ವರಿ ಮದ್ಯ ವ್ಯಸನ ಮುಕ್ತಿ ಕೇಂದ್ರ, ಮಂಜುನಾಥಕಲ್ಯಾಣ ಮಂಟಪ, 3ನೇ ಮಹಡಿ, ಬೂವನಹಳ್ಳಿ ಕ್ರಾಸ್, ಬಿ.ಎಂ.ರಸ್ತೆ, ಹಾಸನ ಇಲ್ಲಿ ಏರ್ಪಡಿಸಲಾಗಿದೆ.
ನಾಡಿನ ಖ್ಯಾತ ವಿದ್ವಾಂಸರು ಪ್ರಸಿದ್ಧ ಸಾಹಿತಿಗಳು ಡಾ.ಎಸ್.ವಿ.ರಂಗಣ್ಣನವರ ಬದುಕು ಬರಹ ಕುರಿತು ಲೇಖಕರು ಮತ್ತು ಉಪನ್ಯಾಸಕರು ಡಾ.ಬರಾಳು ಶಿವರಾಮ, ಚನ್ನರಾಯಪಟ್ಟಣ ಇವರಿಂದ ಉಪನ್ಯಾಸ-ಸಂವಾದ, ಆಗಮಿತ ಕವಿಗಳಿಂದ ಕವಿಗೋಷ್ಠಿ-ವಿಮರ್ಶೆ ಹಾಗೂ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಹೆಚ್ಚಿನ ಸಂಖೈಯಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಬೇಕೆಂದು ಸಂಚಾಲಕರು ಗೊರೂರು ಅನಂತರಾಜು ಕೋರಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ